ಹೈದರಾಬಾದ್‌-ಬೆಂಗಳೂರು ಹೆದ್ದಾರಿಯಲ್ಲಿ ಆ್ಯಸಿಡ್‌ ಟ್ಯಾಂಕರ್‌ಗೆ ಸ್ಲೀಪರ್‌ ಬಸ್‌ ಡಿಕ್ಕಿ – ತಪ್ಪಿದ ಭಾರೀ ದುರಂತ!

2 Min Read
ಹೈದರಾಬಾದ್‌-ಬೆಂಗಳೂರು ಹೆದ್ದಾರಿಯಲ್ಲಿ ಆ್ಯಸಿಡ್‌ ಟ್ಯಾಂಕರ್‌ಗೆ ಸ್ಲೀಪರ್‌ ಬಸ್‌ ಡಿಕ್ಕಿ – ತಪ್ಪಿದ ಭಾರೀ ದುರಂತ!

– 26 ಪ್ರಯಾಣಿಕರು ಸೇಫ್‌

ಹೈದರಾಬಾದ್‌: ರಾಸಾಯನಿಕ ಸಾಗಿಸುತ್ತಿದ್ದ ಆ್ಯಸಿಡ್‌ ಟ್ಯಾಂಕರ್‌ಗೆ ಖಾಸಗಿ ಸ್ಲೀಪರ್ ಬಸ್ (Private Sleeper Bus) ಡಿಕ್ಕಿ ಹೊಡೆದಿರುವ ಘಟನೆ ಮೆಹಬೂಬ್‌ನಗರ ಜಿಲ್ಲೆಯ ಹೈದರಾಬಾದ್‌-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಆ್ಯಸಿಡ್‌ ಟ್ಯಾಂಕರ್‌ಗೆ (Acid Tanker) ಬಸ್‌ ಡಿಕ್ಕಿ ಹೊಡೆಯುತ್ತಿದ್ದಂತೆ ರಾಸಾಯನಿಕ ಚೆಲ್ಲಿ ರಸ್ತೆಯೇ ಕಾಣದಂತೆ ದಟ್ಟ ಹೊಗೆ ಆವರಿಸಿದೆ.

ಮೆಹಬೂಬ್‌ನಗರದ (Mahabubnagar) ಜಡ್ಚೆರ್ಲಾ ಬಳಿಯ ಮಾಚರಂ ಫ್ಲೈಓವರ್‌ನಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್‌ ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸೇಫ್‌ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶಬರಿಮಲೆ ಮಾಲೆ ಹಾಕಿದ್ದಕ್ಕೆ ವಿದ್ಯಾರ್ಥಿಯನ್ನ ಶಾಲೆಯಿಂದ ಹೊರಹಾಕಿದ ಪ್ರಿನ್ಸಿಪಾಲ್

ಅಪಘಾತಕ್ಕೀಡಾದ ಬಸ್‌ ಚಿತ್ತೂರಿನಿಂದ ಹೈದರಾಬಾದ್‌ಗೆ (Hyderabad) ತೆರಳುತ್ತಿತ್ತು. ಸುಮಾರು 26 ಪ್ರಯಾಣಿಕರು ಬಸ್‌ನಲ್ಲಿದ್ದರು. ಸ್ಲೀಪರ್‌ ಬಸ್‌ ಹಿಂಬದಿಯಿಂದ ಟ್ಯಾಂಕರ್‌ಗೆ ಗುದ್ದಿದ ಪರಿಣಾಮ ಹೈಡ್ರೋಕ್ಲೋರೈಡ್ ಆಮ್ಲ ರಸ್ತೆಗೆ ಚೆಲ್ಲಿದೆ. ಕೂಡಲೇ ಬಸ್‌ ಚಾಲಕ ಎಲ್ಲ ಪ್ರಯಾಣಿಕರನ್ನ ಕೆಳಗಿಳಿಸಿದ್ದಾನೆ. ಅವಸರದಲ್ಲಿ ಇಳಿಯುವಾಗ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದ್ರೆ ನೆಲಕ್ಕೆ ಚೆಲ್ಲಿದ ಹೈಡ್ರೋಕ್ಲೋರೈಡ್ ಆಮ್ಲ ಬೆಂಕಿ ಹೊತ್ತಿಕೊಳ್ಳದೇ ದಟ್ಟ ಹೊಗೆಯಷ್ಟೇ ಆವರಿಸಿದೆ. ಇದರಿಂದ ಬೆಂಕಿ ಕಾಣಿಸಿಕೊಳ್ಳದೇ ದೊಡ್ಡ ಅನಾಹುತ ತಪ್ಪಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪ್ರವಾಸಿಗನ ಎಡವಟ್ಟಿಗೆ ಸುಟ್ಟುಹೋಯ್ತು 1500 ವರ್ಷಗಳ ಹಳೆಯ ದೇವಾಲಯ

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಇನ್ನೂ ಅಪಘಾತ ಸಂಭವಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಕೆಲ ಕಾಲ ಸಂಚಾರ ವ್ಯತ್ಯಯವಾಗಿತ್ತು. ಬಳಿಕ ಅಧಿಕಾರಿಗಳು ಅಪಘಾತಕ್ಕೀಡಾದ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಬೇರೆ ಬಸ್‌ ವ್ಯವಸ್ಥೆ ಮಾಡಿ ಕಳುಹಿಸಿದರು. ಇದನ್ನೂ ಓದಿ: ಹಿಜಾಬ್‌ ಏಕೆ ಧರಿಸಿಲ್ಲ? ಎಷ್ಟು ಬಾರಿ ನಮಾಜ್‌ ಮಾಡ್ತಿಯಾ? – ರೋಗಿಗಳಿಗೆ ಹೀಗೆಲ್ಲ ಪ್ರಶ್ನಿಸುತ್ತಿದ್ದ ಉಮರ್

Share This Article