ಕಲಬುರಗಿ: ಲಾರಿ ಅಪಘಾತ ತಪ್ಪಿಸಲು ಹೋದ ಬಸ್ ಚಾಲಕ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಕಲಬುರಗಿ ಜಿಲ್ಲೆ ಕನಕಪುರ ಗ್ರಾಮದ ಬಳಿ ನಡೆದಿದೆ.
ಡಿಕ್ಕಿ ಹೊಡೆದ ಕೆಎಸ್‍ಆರ್ ಟಿಸಿ ಬಸ್ ಸೇತುವೆ ಅಂಚಿಗೆ ತಲುಪಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು. ಬಸ್‍ನಲ್ಲಿದ್ದ ಪ್ರಯಾಣಿಕರು ಕೆಲವರು ಪ್ರಾಣ ಉಳಿಸಿಕೊಂಡರೆ ಸಾಕಪ್ಪ ಎಂದು ಬಸ್ಸಿನ ಕಿಟಕಿ ಮೂಲಕ ಹೊರಗೆ ಜಂಪ್ ಮಾಡಿದ್ದಾರೆ.
ಮತ್ತೆ ಕೆಲವು ವಿದ್ಯಾರ್ಥಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಎಮರ್ಜೆನ್ಸಿ ಡೋರ್ ತೆಗೆದು ಜಂಪ್ ಮಾಡಿದ್ದಾರೆ. ಸುಮಾರು 59ಕ್ಕೂ ಹೆಚ್ಚು ಪ್ರಯಾಣಿಕರು ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ಸಂಚರಿಸುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆ ಆಗಿಲ್ಲ.
ಲಾರಿ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ಪ್ರಯಾಣಿಕರು ದೂರಿದ್ದಾರೆ.