ಬೆಂಗಳೂರಿಗೆ ಬರುತ್ತಿದ್ದಾಗ ಹೊಸೂರು ಬಳಿ ಕಂದಕಕ್ಕೆ ಉರುಳಿದ ಬಸ್ಸು

Public TV
1 Min Read

ಚೆನ್ನೈ: ತಮಿಳುನಾಡಿನಿಂದ (Tamil Nadu) ಬೆಂಗಳೂರಿಗೆ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ, ಕಂದಕಕ್ಕೆ ಉರುಳಿದ ಪರಿಣಾಮ 40 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಹೊಸೂರು (Hosur) ಬಳಿ ನಡೆದಿದೆ.

ಮಧುರೈನಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ಬಸ್ ಇದಾಗಿತ್ತು. ಬಸ್‌ನಲ್ಲಿದ್ದ ಬಹುತೇಕ ಮಂದಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಅತಿ ವೇಗವಾಗಿ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಕರುಕಂಪಟ್ಟಿ ಬಳಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಬಿದ್ದಿದೆ. ಇದನ್ನೂ ಓದಿ: ಮೋಟೆಬೆನ್ನೂರಿನಲ್ಲಿ ಖಾಸಗಿ ಬಸ್‌ ಪಲ್ಟಿ – ಇಬ್ಬರು ಸಾವು, 6 ಜನರಿಗೆ ಗಂಭೀರ ಗಾಯ

ಪರಿಣಾಮ ಬಸ್‌ನಲ್ಲಿದ್ದ 40 ಮಂದಿ ಗಾಯಗೊಂಡಿದ್ದು, ಮೂವರು ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನ ಹೊಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಉತ್ತನಪಲ್ಲಿ ಪೊಲೀಸ್ (Uttanapalli Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article