ಪ್ರಯಾಣಿಕನ ಈ ಒಂದು ಕೆಲ್ಸದಿಂದ ಬಸ್ ಚಾಲಕ ಅಮಾನತು

Public TV
1 Min Read

ವಾಷಿಂಗ್ಟನ್:  ಡ್ರೈವರ್ ಬಸ್ ಚಲಾಯಿಸುವ ಸಂದರ್ಭದಲ್ಲಿ ಪೇಪರ್ ಓದಿದ್ದಕ್ಕೆ ಕೆಲಸದಿಂದ ಅಮಾನತುಗೊಂಡಿದ್ದಾನೆ.

ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಬಸ್ ಡ್ರೈವಿಂಗ್ ವೇಳೆಯಲ್ಲಿ ಚಾಲಕ ನ್ಯೂಸ್ ಪೇಪರ್ ಓದುತ್ತಿದ್ದ ದೃಶ್ಯವನ್ನು ಸಹ ಪ್ರಯಾಣಿಕ ತನ್ನ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡು ಟ್ವಿಟ್ಟರ್ ನಲ್ಲಿ ಹಾಕಿದ್ದರು. ಈ ದೃಶ್ಯಗಳು ಇಂದು ಸಾಮಾಜಿಕ ಜಾಲದಲ್ಲಿ ವೈರಲ್ ಆಗಿತ್ತು.

ಬಸ್ ಡ್ರೈವರ್ ಅತ್ಯಂತ ನಿಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದ, ಇದರಿಂದ ತಾನು ಇಳಿಯ ಬೇಕಾದ ಬಸ್ ನಿಲ್ದಾಣವು ತಪ್ಪಿಹೋಯಿತು ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.

ಮೆಟ್ರೋ ಬಸ್ ಅಧಿಕಾರಿಗಳು ಈ ದೃಶ್ಯಗಳನ್ನು ಟ್ವಿಟ್ಟರ್‍ನಲ್ಲಿ ವೀಕ್ಷಿಸಿದ್ದು, ಕಂಪೆನಿಯು ಘಟನೆಯ ಕುರಿತು ತನಿಖೆಯನ್ನು ನಡಸಿದೆ. ಅಷ್ಟೇ ಅಲ್ಲದೇ ಇದು ಕ್ಷಮಿಸಲಾಗದ ತಪ್ಪು ಆದ್ದರಿಂದ ಆತನನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *