ಸೌದಿ ಪರೀಕ್ಷಾ ಕೇಂದ್ರಗಳಲ್ಲಿ ಅಬಯಾ ಬ್ಯಾನ್

Public TV
1 Min Read

ರಿಯಾದ್: ಮುಸ್ಲಿಂ ಮಹಿಳೆಯರು (Muslim Women) ಧರಿಸುವ ಧಾರ್ಮಿಕ ಉಡುಗೆ ಅಬಯಾವನ್ನು (Abaya) ಸೌದಿ ಅರೇಬಿಯಾದ (Saudi Arabia) ಪರೀಕ್ಷಾ ಕೇಂದ್ರಗಳಲ್ಲಿ (Exam Halls) ನಿಷೇಧಿಸಲಾಗಿದೆ.

ಸೌದಿ ಶಿಕ್ಷಣ ಹಾಗೂ ತರಬೇತಿ ಮೌಲ್ಯಮಾಪನ ಆಯೋಗ (ETEC) ಶಿಕ್ಷಣ ಸಚಿವಾಲಯದ ಜೊತೆ ಶೈಕ್ಷಣಿಕ ಹಾಗೂ ತರಬೇತಿ ವ್ಯವಸ್ಥೆಗೆ ಮಾನ್ಯತೆ ನೀಡುವ ಸಲುವಾಗಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಬಯಾ ಧರಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಘೋಷಿಸಿದೆ.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಧರಿಸಬೇಕು. ಎಲ್ಲಾ ಉಡುಪುಗಳೂ ಸಾರ್ವಜನಿಕ ಸಭ್ಯತೆಯ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಇಟಿಇಸಿ ಹೇಳಿದೆ. ಆದರೆ ಇಲ್ಲಿ ಹಿಜಬ್ (Hijab) ಬಗ್ಗೆ ಯಾವುದೇ ಪ್ರಸ್ತಾಪ ಮಾಡದೇ ಕೇವಲ ಅಬಯಾವನ್ನು (Abaya) ಮಾತ್ರವೇ ನಿಷೇಧಿಸಲಾಗಿದೆ. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ – ಇನ್ನೂ ಸ್ಪಷ್ಟ ನಿಲುವು ಪ್ರಕಟಿಸದ ಕಾಂಗ್ರೆಸ್

ಅಬಯಾ ಎಂಬುದು ಕತ್ತಿನಿಂದ ಕಾಲಿನ ವರೆಗೆ ದೇಹವನ್ನು ಮುಚ್ಚುವ ವಸ್ತ್ರವಾಗಿದೆ. ಇದು ಬುರ್ಖಾವನ್ನೇ ಹೋಲುತ್ತದೆ ಆದರೆ ಇದು ತಲೆಗೆ ಅನ್ವಯಿಸುವುದಿಲ್ಲ. ಹಿಜಬ್ ಎಂಬುವುದು ತಲೆಯನ್ನು ಮುಚ್ಚುವ ವಸ್ತ್ರವಾಗಿದೆ. ಸಾಂಪ್ರದಾಯಿಕವಾಗಿ ಅಬಯಾಗಳು ಕಪ್ಪು ಬಣ್ಣದ್ದಾಗಿದ್ದು, ತಿಳಿ ನೀಲಿ ಮತ್ತು ಗುಲಾಬಿ ಬಣ್ಣಗಳಲ್ಲಿಯೂ ಹೆಚ್ಚಿನ ಮಹಿಳೆಯರು ಗಲ್ಫ್ನಾದ್ಯಂತ ಧರಿಸುತ್ತಾರೆ.

2018 ರಲ್ಲಿಯೇ ಸೌದಿಯಲ್ಲಿ ಅಬಯಾವನ್ನು ಇನ್ನು ಮುಂದೆ ಕಾನೂನುಬದ್ಧವಾಗಿ ಜಾರಿಗೊಳಿಸಲಾಗುವುದಿಲ್ಲ ಎಂದು ಘೋಷಿಸಲಾಗಿತ್ತು. ಆದರೂ ಹೆಚ್ಚಿನ ಮಹಿಳೆಯರು ಅಬಯಾ ಧರಿಸುವುದನ್ನು ಮುಂದುವರೆಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ?

 

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *