ಹಣದ ಸುರಿಮಳೆ-ಕಂತೆ ಕಂತೆ ಹಣ ನೋಡಿದ ಜನ ಅಚ್ಚರಿ

Public TV
1 Min Read

-2 ಸಾವಿರ, 500 ಮುಖಬೆಲೆಯ ನೋಟುಗಳು
-ಹಣ ಆರಿಸಿಕೊಳ್ಳಲು ಮುಂದಾದ ಜನ

ಕೋಲ್ಕತ್ತಾ: ಕಟ್ಟಡವೊಂದರಿಂದ ಹಣದ ಸುರಿಮಳೆಯಾಗಿದ್ದು, ಜನರು ಓಡಿ ಹೋಗಿ 2 ಸಾವಿರ, 500 ಮತ್ತು 100 ರೂ. ಮುಖಬೆಲೆಯ ನೋಟುಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ. ಕಟ್ಟಡದ ಮೇಲಿಂದ ಕಂತೆ ಕಂತೆ ಹಣ ಎಸೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸೆಂಟ್ರಲ್ ಕೋಲ್ಕತ್ತಾದ ನಂಬರ್ 27, ಬ್ಯಾಂಟಿಕ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಆಮದು ಮತ್ತು ರಫ್ತು ವ್ಯವಹಾರ ನಡೆಸುವ ಕಚೇರಿ (Hoque Merchantile Pvt Ltd) ಮೇಲೆ ದಾಳಿ ನಡೆಸಿದ್ದರು. ಅಧಿಕಾರಿಗಳು ಕಟ್ಟಡದ ಪರಿಶೀಲನೆಗೆ ಮುಂದಾದಾಗ ಅಲ್ಲಿಯವರು ತಮ್ಮಲ್ಲಿದ ಹಣವನ್ನು ಕಿಟಕಿ ಮೂಲಕ ಹೊರಗೆ ಎಸೆದಿದ್ದಾರೆ.

ಕಟ್ಟಡದಿಂದ ಕಂತೆ ಕಂತೆ ಹಣ ಬೀಳೋದನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ. ಕೆಲವರು ಓಡೋಡಿ ಹೋಗಿ ಹಣವನ್ನ ಜೇಬಿಗೆ ಇಳಿಸಿಕೊಂಡಿದ್ದಾರೆ. ಕೂಡಲೇ ಅಧಿಕಾರಿಗಳು ಹೊರ ಎಸೆದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಕಟ್ಟಡದ ಪರಿಶೀಲನೆ ಮುಂದುವರಿದಿದ್ದು, ದಾಳಿಗೆ ಸಂಬಂಧಿಸಿದ ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *