ಸಂಕ್ರಾಂತಿ ವೇಳೆ ಕಿಚ್ಚು ಹಾಯಿಸುವಾಗ ಯಡವಟ್ಟು – ಜನರ ಮೇಲೆ ಎಗರಿದ ಎತ್ತುಗಳು, ಇಬ್ಬರಿಗೆ ಗಾಯ

1 Min Read

ಮಂಡ್ಯ: ಸಂಕ್ರಾಂತಿ ಸಂಭ್ರಮದಲ್ಲಿ ಕಿಚ್ಚು ಹಾಯಿಸುವ ವೇಳೆ ಯಡವಟ್ಟಾಗಿದೆ. ಕಿಚ್ಚು ಹೆಚ್ಚಾಗಿ ಎತ್ತುಗಳು ಭಯಗೊಂಡು ಜನರ ಮೇಲೆ ಎಗರಿದ್ದಕ್ಕೆ ಇಬ್ಬರು ಗಾಯಗೊಂಡಿರುವ ಘಟನೆ ಮಂಡ್ಯದ (Mandya) ಹೊಸಹಳ್ಳಿಯಲ್ಲಿ (Hosahalli) ನಡೆದಿದೆ.

ಸಂಕ್ರಾಂತಿ ಸಂಭ್ರಮದ ಹಿನ್ನೆಲೆ ಕಿಚ್ಚ ಹಾಯಿಸಲು ರೈತರು ಎತ್ತುಗಳನ್ನು ಶೃಂಗರಿಸಿದ್ದರು. ಸೂರ್ಯಾಸ್ತದ ಬಳಿಕ ಕಿಚ್ಚು ಹಾಯಿಸಲು ಆರಂಭಿಸಲಾಗಿತ್ತು. ಈ ವೇಳೆ ಕಿಚ್ಚು ಹೆಚ್ಚಾಗಿ ಎತ್ತುಗಳು ಭಯಗೊಂಡು ಜನರ ಮೇಲೆ ಎಗರಿ ಓಡಿಹೋಗಿವೆ. ಪರಿಣಾಮ ಇಬ್ಬರಿಗೆ ಗಾಯಗೊಂಡಿದ್ದಾರೆ. ಇದನ್ನೂ ಓದಿ:ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

ಮಕರ ಸಂಕ್ರಾಂತಿ ವೇಳೆ ಕೆಲವೆಡೆ ಎತ್ತುಗಳಿಗೆ ಕಿಚ್ಚು ಹಾಯಿಸಲಾಗುತ್ತದೆ. ಕಿಚ್ಚು ಹಾಯಿಸಿದರೆ ರಾಸುಗಳಿಗೆ ರೋಗಗಳು ದೂರವಾಗುತ್ತವೆ ಎಂಬ ವಾಡಿಕೆಯಿದೆ.

Share This Article