ಬುಲ್ಡೋಜರ್ ಬಾಬಾ ಬಳಿಕ ಬುಲ್ಡೋಜರ್ ಮಾಮ

Public TV
1 Min Read

ಭೋಪಾಲ್: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರನ್ನು, ಉತ್ತರಪ್ರದೇಶ ಬಿಜೆಪಿ ಘಟನೆ ಬುಲ್ಡೋಜರ್ ಬಾಬಾ ಎಂದು ಬಿಂಬಿಸಿ ಯಶಸ್ವಿಯನ್ನು ಸಾಧಿಸಿದೆ. ಇದೆ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಇದೇ ತಂತ್ರವನ್ನು ಬಿಜೆಪಿ ನಾಯಕರು, ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾಣ್ ಅವರನ್ನು ಬುಲ್ಡೋಜರ್ ಮಾಮ ಎಂದು ಬಿಂಬಿಸಲು ಆರಂಭಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದವರು ಯೋಗಿ ಆದಿತ್ಯ ನಾಥ್ ಅವರನ್ನು ಟೀಕಿಸಲು ಬಳಸಿದ ಪದವನ್ನೇ ಬಿಜೆಪಿ ನಾಯಕರು ಹಾಗೂ ಯೋಗಿ ಅವರು ಅಕ್ರಮ ಆಸ್ತಿಗಳನ್ನು ಬುಲ್ಡೋಜರ್ ಮೂಲಕವಾಗಿ ನೆಲಸಮ ಮಾಡುತ್ತಾರೆ ಎನ್ನುವ ಅರ್ಥದಲ್ಲಿ ತಿರುಗಿಸಿ ಪ್ರಚಾರಕ್ಕೆ ಬಳಸಿದ್ದರು. ಅದೇ ಮಾದರಿಯಲ್ಲಿ ಶಿವರಾಜ್‍ಸಿಂಗ್ ಚೌಹಾಣ್ ಕೂಡ ಅಪರಾಧಕೃತ್ಯಗಳನ್ನು ಕಬ್ಬಿಣದ ಹಸ್ತದಿಂದ ಮುಟ್ಟುಹಾಕುತ್ತಿದ್ದಾರೆ. ಅತ್ಯಾಚಾರ ಆರೋಪಿಗಳ ಮನೆ ನೆಲಸಮ ಮಾಡುತ್ತಾರೆ ಎನ್ನುವ ಸಂದೇಶ ಸಾರಲು ಬುಲ್ಡೋಜರ್ ಮಾಮ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಬೆಂಗಳೂರು ರಸ್ತೆಗೆ ಹೆವಿ ವೆಹಿಕಲ್‍ಗಳೇ ಕಂಟಕ- ಭಾರೀ ಗಾತ್ರದ ವಾಹನಗಳಿಂದ ರೂಲ್ಸ್ ಬ್ರೇಕ್

ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ ಇತ್ತೇಚೆಗೆ ತಮ್ಮ ಮನೆ ಮುಂದೆ ಒಂದಷ್ಟು ಬುಲ್ಡೋಜರ್ ನಿಲ್ಲಿಸಿ, ನಮ್ಮ ಹೆಣ್ಣುಮಕ್ಕಳನ್ನು ಮುಟ್ಟಿದರೆ ಸಿಎಂ ಅಂಕಲ್ ಬುಲ್ಡೋಜರ್ ಹತ್ತಿಸಿ ಬಿಡುತ್ತಾರೆ ಎಂದು ಬ್ಯಾನರ್ ಹಾಕಿದ್ದರು. ಈ ಸ್ಥಳಕ್ಕೆ ಶಿವರಾಜ್ ಸಿಂಗ್ ಅವರು ಭೇಟಿ ನೀಡಿದಾಗ ಬುಲ್ಡೋಜರ್ ಮಾಮ ಜಿಂದಾಬಾದ್ ಎಂದು ಘೋಷಣೆ ಕೂಗಲಾಯಿತ್ತು.

ಕೆಲವು ದಿನಗಳ ಮುಂಚೆ ಮೂರು ಜಿಲ್ಲೆಗಳಲ್ಲಿ ಮೂವರು ರೇಪ್ ಆರೋಪಿಗಳ ಮನೆಯನ್ನು ನೆಲಸಮ ಮಾಡಿಸಿದ್ದರು. ಅಲ್ಲದೇ ಇನ್ನೊಂದು ಜಿಲ್ಲೆಯಲ್ಲಿ ಆದಿವಾಸಿಗಳಿಗೆ ತೊಂದರೆ ನೀಡಿದ ಕೆಲ ಮುಸ್ಲಿಮರ ಅಕ್ರಮ ಮನೆಗಳನ್ನು ಕೆಡವಿದ್ದರು.

ತಮಗೆ ದೊರೆತಿರುವ ಹೊಸ ಬಿರುದಿಗೆ ಶಿವರಾಜ್ ಸಿಂಗ್ ಅವರು ಕೂಡ ಖುಷಿಯಾಗಿದ್ದು, ಎಲ್ಲಾ ಕ್ರಿಮಿನಲ್‍ಗಳನ್ನೂ ನೆಲಸಮ ಮಾಡುವವರೆಗೂ ನಮ್ಮ ಬುಲ್ಡೋಜರ್ ನಿಲ್ಲುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *