ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಢ- ಇಬ್ಬರು ಅಗ್ನಿಶಾಮಕ ಸಿಬ್ಬಂದಿಗೆ ಗಾಯ

Public TV
1 Min Read

ಮುಂಬೈ: ಇಲ್ಲಿನ ಲೈಟ್ ಆಫ್ ಏಷ್ಯಾ ಎಂದೇ ಪ್ರಖ್ಯಾತವಾಗಿರುವ ಬಹುಮಹಡಿ ಕಟ್ಟಡದಲ್ಲಿ ಇಂದು ಮುಂಜಾನೆ 4.30ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದಾಗಿ ವರದಿಯಾಗಿದೆ. ಈ ಕಟ್ಟಡ ಖಾಲಿಯಾಗಿದ್ದು, ಬೆಂಕಿ ನಂದಿಸುತ್ತಿದ್ದ ಸಂದರ್ಭದಲ್ಲಿ ಕಟ್ಟಡ ಕುಸಿದುಬಿದ್ದಿದೆ.

ಅಗ್ನಿಶಾಮಕ ಸಿಬ್ಬಂದಿ ತಂಡ ಬೆಂಕಿ ನಂದಿಸುವಲ್ಲಿ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಕಟ್ಟಡ ಕುಸಿದುಬಿದ್ದಿದ್ದು, ಈ ವೇಳೆ ಕೂದಲೆಳೆ ಅಂತರದಲ್ಲಿ ಸಿಬ್ಬಂದಿ ಪಾರಾಗಿದ್ದಾರೆ. ಆದ್ರೆ ಘಟನೆಯ ವೇಳೆ ಅಗ್ನಿಶಾಮಕ ವಾಹನದ ಬಳಿ ನಿಂತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣವೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಯಾರೊಬ್ಬರು ಕಟ್ಟಡದ ಒಳಗೆ ಸಿಲುಕಿಲ್ಲ. ಸ್ಥಳಕ್ಕೆ 16 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಪಕ್ಕದಲ್ಲಿರುವ ಕಟ್ಟಡಗಳಿಗೆ ಬೆಂಕಿ ಪಸರಿಸದಂತೆ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟಿನಲ್ಲಿ ಬರೋಬ್ಬರಿ 3 ಗಂಟೆಗಳ ಕಾಲ ಅವರು ಬೆಂಕಿ ನಂದಿಸಲು ಹರಸಾಹಸಪಟ್ಟರು ಅಂತ ಅವರು ತಿಳಿಸಿದ್ರು.

ಈ ಕಟ್ಟಡ ಸಿ-1 ಕೆಟಗರಿ(ಅಪಾಯಕಾರಿ ಕಟ್ಟಡ)ಗೆ ಸೇರಿದ್ದಾಗಿದ್ದು, ರಾಜ್ಯಸರ್ಕಾರದ ಅಧೀನದಲ್ಲಿತ್ತು. ಆದ್ರೆ ನಾಲ್ಕು ವರ್ಷಗಳ ಹಿಂದೆ ಅಧಿಕಾರಿಗಳು ಈ ಕಟ್ಟಡವನ್ನು ತೊರೆದಿದ್ದರು. ಹೀಗಾಗಿ ಇಂತಹ ಅಪಾಯಕಾರಿ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ಕೆಡವಲು ಚಿಂತಿಸಲಾಗಿತ್ತು. ಸಾವಿರಾರು ಮಂದಿ ಈ ಕಟ್ಟಡದ ಕೆಳಗಿನಿಂದಲೇ ಪ್ರತಿ ನಿತ್ಯ ಸಂಚರಿಸುವುದರಿಂದ ಕಟ್ಟಡ ನೆಲಸಮ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುದಾಗಿ ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *