ಬಿಲ್ಡರ್‌ಗಳಿಂದಲೂ ಹಣ ಲೂಟಿ ಆಗ್ತಿದೆ, ಚದರ ಅಡಿಗೆ 100 ರೂ. ಫಿಕ್ಸ್ ಆಗಿದೆ – HDK ಹೊಸ ಬಾಂಬ್

Public TV
2 Min Read

ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಬೆಂಗಳೂರಿನಲ್ಲಿ (Bengaluru Development) ಲೂಟಿ ಹೊಡೆಯುತ್ತಿದ್ದಾರೆ. ಬಿಲ್ಡರ್‌ಗಳಿಂದಲೂ (Builders) ಹಣ ಲೂಟಿ ಮಾಡುವ ಕೆಲಸ ಆಗುತ್ತಿದ್ದು, ಚದರ ಅಡಿಗೆ 100 ರೂ. ಕೊಡಬೇಕು ಅಂತ ಫಿಕ್ಸ್ ಆಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಮಂತ್ರಿಯೊಬ್ಬರು ಪೆನ್ನು ಪೇಪರ್ ಕೊಡಿ ಅಂತ ಕೇಳಿದ್ದರು. ಪೆನ್ನು ಪೇಪರ್ ಕೊಟ್ಟರೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಕೇವಲ ಎರಡೇ ತಿಂಗಳಲ್ಲಿ ರಾಜ್ಯದಲ್ಲಿ ಲೂಟಿ ಆಗ್ತಿದೆ. ಎರಡೇ ತಿಂಗಳಿಗೆ ಸರ್ಕಾರದ ವಿರೋಧಿ ಅಲೆ ಬಂದಿದೆ. ಈ ನಾಡಿನ ಜನತೆಯ ಬದುಕಿನ ವಿಷಯದಲ್ಲಿ ಜನತೆಯನ್ನ ದಾರಿ ತಪ್ಪಿಸಿದ್ದು ಕಾಂಗ್ರೆಸ್‌ನವರು. ಇವರದ್ದು ಸ್ವಾಭಿಮಾನ ಕಟ್ಟುವ ಗ್ಯಾರಂಟಿ ಯೋಜನೆಗಳಲ್ಲ, ನಾಡಿನ ಜನರನ್ನ ಪುನಃ ಕೈ ಒಡ್ಡಿ ನಿಲ್ಲಿಸೋ ಕೆಲಸ ಈ ಸರ್ಕಾರ ಮಾಡುತ್ತೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಉತ್ತಮ ಆರೋಗ್ಯ, ಶಿಕ್ಷಣ ಕೊಡಬೇಕು. ಇವತ್ತಿನ ದಿನ ರೈತರ ಬದುಕು ಹಾಳಾಗಿದೆ. ಮಳೆ ಆಗಿಲ್ಲ, ಬಿತ್ತನೆ ಮಾಡಿದ್ರೂ ಬೆಳೆ ಬಂದಿಲ್ಲ. ಇದು ನಮ್ಮ ರೈತನ ಸ್ಥಿತಿ. ರೈತರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನ ಕೊಡಬೇಕು. ಆದ್ರೆ ಅನ್ನದಾತನಿಗೆ ಈ ಸರ್ಕಾರ ಏನೂ ಕೊಡುಗೆ ಕೊಟ್ಟಿಲ್ಲ. 150ಕ್ಕೂ ಹೆಚ್ಚು ರೈತ ಕುಟುಂಬದ ಆತ್ಮಹತ್ಯೆ ಆಯ್ತು. ಒಬ್ಬ ಮಂತ್ರಿ ಹಣ ಪಡೆಯೋಕೆ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ ಅಂತಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಪಂದ್ಯಕ್ಕೆ ಕೃಪೆ ತೋರಿದ್ನಾ ವರುಣ? ರಾತ್ರಿ 7ರ ವರೆಗೂ ಮಳೆ ಮುನ್ಸೂಚನೆ ಇಲ್ಲ

ಒಬ್ಬ ಮಂತ್ರಿ ನನ್ನನ್ನ ಅಣ್ಣ ಅಂತಾರೆ. ನನಗೆ ಇಂತಹ ತಮ್ಮ ಬೇಡ ಅಂದೆ. ಕೊಟ್ಟ ಅಧಿಕಾರ ಉಪಯೋಗ ಮಾಡಿಕೊಳ್ಳಲಿ ಆಗ ತಮ್ಮ ಅಂತ ಒಪ್ಪುತ್ತೇನೆ ಅಂದೆ ಎಂದು ಹೆಸರು ಹೇಳದೇ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 2024ರ ಜಿ20 ಶೃಂಗಸಭೆ ಬ್ರೆಜಿಲ್‌ ದೇಶಕ್ಕೆ ಶಿಫ್ಟ್‌ – ಬ್ರೆಜಿಲ್‌ ಅಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರಿಸಿದ ಮೋದಿ

ಜನರ ತೀರ್ಮಾನ ಅಚ್ಚರಿಯಾಗಿತ್ತು: ವಿಧಾನಸಭಾ ಚುನಾವಣೆ ಸಮಯದಲ್ಲಿ ನಿರಂತರವಾಗಿ ಪಕ್ಷ ಸಂಘಟನೆ ಮಾಡಿದೆ. ಸ್ವತಂತ್ರವಾಗಿ ಸರ್ಕಾರ ತರಬೇಕು ಅಂತ ಶ್ರಮ ಹಾಕಿದೆ. ಆದ್ರೆ ನಾಡಿನ ಜನರ ತೀರ್ಮಾನ ಅಚ್ಚರಿ ಫಲಿತಾಂಶ ಕೊಟ್ಟರು. ಈ ಫಲಿತಾಂಶದಿಂದ ಕಾರ್ಯಕರ್ತರು ಸಂಕಷ್ಟಕ್ಕೆ ಒಳಗಾಗಿದ್ದೀರಿ. ನಿಮ್ಮಿಂದ ಇಂದು ಮಹತ್ವದ ತೀರ್ಮಾನ ಆಗಬೇಕು. ನಾಡಿನ ಭವಿಷ್ಯದ ಬದುಕಿಗಾಗಿ ತೀರ್ಮಾನ ಆಗಬೇಕು ಕರೆ ನೀಡಿದ್ದಾರೆ.

ಇದೇ ವೇಳೆ ಅನಾರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡ ಮಾಜಿ ಸಿಎಂ, ಕಳೆದ 10 ದಿನಗಳಿಂದ ಆರೋಗ್ಯ ಸಮಸ್ಯೆ ಆಯ್ತು. ಭಗವಂತನ ಪ್ರೇರಣೆಯಿಂದ ನಾನು ಆವತ್ತು ಆಸ್ಪತ್ರೆಗೆ ಸೇರಿದೆ. ನನ್ನ ಜೊತೆ ಇದ್ದ ಸತೀಶ್, ರಘು ನನ್ ನಿತ್ಯ ಕೆಲಸ ನೋಡ್ತಾರೆ. ಸತೀಶ್ ಆವತ್ತು ನನ್ನನ್ನ ಆಸ್ಪತ್ರೆಗೆ ಸೇರಿಸಿದ್ರು. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ನಿಮ್ಮಮುಂದೆ ಇವತ್ತು ಮಾತಾಡುತ್ತಿದ್ದೇನೆ. ತಂದೆ-ತಾಯಿಯವರ ದೈವರ ಭಕ್ತಿಯಿಂದ ನಾನು ಇವತ್ತು ಉಳಿದಿದ್ದೇನೆ ಎಂದು ಹೇಳಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್