ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಕಂಬಳದಲ್ಲಿ ಕೋಣಗಳಿಂದ ತುಳಿಯಲ್ಪಟ್ಟ ಬಾಲಕ ಕೂದಳೆಲೆಯ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪರೈ ನೇತೃತ್ವದಲ್ಲಿ ಜನವರಿ 20ರಂದು 25 ನೇ ವರ್ಷದ ಅದ್ಧೂರಿ ಕಂಬಳ ನಡೆದಿತ್ತು.
ಕಂಬಳ ಗದ್ದೆಯಿಂದ ಫಿನಿಶಿಂಗ್ ಪಾಯಿಂಟ್ ಗೆ ಕೋಣಗಳು ಓಡಿಕೊಂಡು ಬಂದಾಗ ಕಂಬಳ ನೋಡುತ್ತಿದ್ದ ಬಾಲಕನೋರ್ವ ಕೋಣದ ಕಾಲಿನಡಿಗೆ ಬಿದ್ದಿದ್ದಾನೆ. ಆದರೆ ಕೋಣಗಳು ಓಟದಲ್ಲಿ ನಿರತರಾಗಿದ್ದರಿಂದ ಮಗುವಿನ ಮೇಲೆ ದಾಟಿ ಹೋದ ಪರಿಣಾಮ ಯಾವುದೇ ಅನಾಹುತಗಳು ಸಂಭವಿಸದೆ ಪವಾಡ ಸದೃಶವಾಗಿ ಬಾಲಕ ಪಾರಾಗಿದ್ದಾನೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಟ್ಟಿನಲ್ಲಿ ನಿಷೇಧದ ಗೊಂದಲದಿಂದ ಪಾರಾದ ತುಳುನಾಡಿನ ಜಾನಪದ ಕ್ರೀಡೆಯಲ್ಲಿ ಮತ್ತೊಂದು ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ.
https://www.youtube.com/watch?v=m5x5ArtAdbY