ವಾಹನ ಸವಾರರಿಗೆ ಗುಡ್‌ ನ್ಯೂಸ್‌ – ಫಾಸ್ಟ್‌ಟ್ಯಾಗ್ ನಿಯಮ ಸಡಿಲಿಕೆ

1 Min Read

ನವದೆಹಲಿ: ಫೆ.1 ರಿಂದ ದೇಶದ ಆರ್ಥಿಕ ವಲಯದಲ್ಲಿ ಮತ್ತು ಸಾಮಾನ್ಯ ಜನರ ದೈನಂದಿನ ಬದುಕಿನಲ್ಲಿ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ನಿರ್ಮಲಾ ಸೀತಾರಾಮನ್‌ (Nirmala Sitharaman ಅವರ ದಾಖಲೆ ಕೂಡ ಬಜೆಟ್‌ ಮಂಡನೆಯಾಗಿದೆ. ಇದಕ್ಕೂ ಮುನ್ನವೇ ಫಾಸ್ಟ್‌ಟ್ಯಾಗ್ ನಿಯಮಗಳು, ತಂಬಾಕು ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆ, ಎಲ್‌ಪಿಜಿ ಗ್ಯಾಸ್ ದರದಲ್ಲಿ ಬದಲಾವಣೆ ಕಂಡಿವೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI), ವಾಹನ ಸವಾರರಿಗೆ ದೊಡ್ಡ ರಿಲೀಫ್ ನೀಡಿದೆ. ಫಾಸ್ಟ್‌ ಟ್ಯಾಗ್‌ ಗೆ (Fast Tag) ಸಂಬಂಧಿಸಿದ ಕೆವೈಸಿ ಪರಿಶೀಲನಾ ಪ್ರಕ್ರಿಯೆಯನ್ನ ಸಂಪೂರ್ಣವಾಗಿ ತೆಗೆದುಹಾಕಿರುವುದಾಗಿ ಘೋಷಿಸಿದೆ.

ಫೆಬ್ರವರಿ 1 ರಿಂದ, ಫಾಸ್ಟ್‌ಟ್ಯಾಗ್ ಅನ್ನು ಒಮ್ಮೆ ಸಕ್ರಿಯಗೊಳಿಸಿದ ನಂತ್ರ ಅಂದ್ರೆ ಆಕ್ಟಿವೇಟ್‌ ಮಾಡಿದ ನಂತರ, ಯಾವುದೇ ಹೆಚ್ಚುವರಿ ಕೆವೈಸಿ ಪರಿಶೀಲನೆಯ ಅಗತ್ಯವಿರುವುದಿಲ್ಲ.

ವಾಹನದ ಮಾಹಿತಿಯನ್ನು ಪರಿಶೀಲಿಸುವ ಸಂಪೂರ್ಣ ಜವಾಬ್ದಾರಿಯನ್ನ ಫಾಸ್ಟ್‌ಟ್ಯಾಗ್ ವಿತರಿಸುವ ಬ್ಯಾಂಕ್‌ಗಳೇ ತೆಗೆದುಕೊಳ್ಳಲಿವೆ. ಇದರಿಂದ ಗ್ರಾಹಕರಿಗೆ ಪದೇ ಪದೇ ಕೆವೈಸಿ ಅಪ್‌ಡೇಟ್ ಮಾಡುವ ಕಿರಿಕಿರಿ ತಪ್ಪಲಿದೆ.

ಎಲ್‌ಪಿಜಿ ಸಿಲಿಂಡರ್‌ ದರ 49 ರೂ. ಏರಿಕೆ
ಇನ್ನೂ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ (Commercial LPG) ಸಿಲಿಂಡರ್‌ಗಳ ಬೆಲೆಯನ್ನ 49 ರೂ. ಹೆಚ್ಚಿಸಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಬೆಲೆಯನ್ನು 1,740.50 ರೂ.ಗೆ ಪರಿಷ್ಕರಿಸಲಾಗಿದೆ. ಆದರೆ, 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಬದಲಾಗದೆ ಉಳಿದಿದೆ.

Share This Article