Budget 2022: ಬೆಳೆ ರಕ್ಷಣೆಗೆ ಕಿಸಾನ್ ಡ್ರೋನ್ ಬಳಕೆಗೆ ಅಸ್ತು – ಬಜೆಟ್‍ನಲ್ಲಿ ಕೃಷಿ ವಲಯಕ್ಕೆ ದಕ್ಕಿದ್ದೇನು?

Public TV
3 Min Read

ನವದೆಹಲಿ: ಕೇಂದ್ರ ಬಜೆಟ್‍ನಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ನೂತನ ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಕೃಷಿಕರಿಗೆ ನೆರವಾಗಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ.

ಕಿಸಾನ್ ಸಮ್ಮಾನ್ ಯೋಜನೆ, ಸಿರಿಧಾನ್ಯಗಳ ಉತ್ಪನ್ನಗಳಿಗೆ ಆಧ್ಯತೆ, ಕೃಷಿಕರಿಗೆ ಡಿಜಿಟಲ್-ಹೈ ಟೆಕ್ ಸೇವೆ ಸಹಿತ ಹಲವು ಹೊಸ ಯೋಜನೆಗಳಿಗೆ ಬಜೆಟ್‍ನಲ್ಲಿ ಒತ್ತು ನೀಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿ – 68,000 ಕೋಟಿ ರೂ. (500 ಕೋಟಿ ರೂ. ಹೆಚ್ಚಳ), ಬೆಳೆ ಸ್ಥಿರತೆ ಯೋಜನೆಗೆ ಅನುದಾನ ಕಡಿತ ಮಾಡಿದೆ. 163 ಲಕ್ಷ ರೈತರಿಗೆ 2.37 ಲಕ್ಷ ಕೋಟಿ ಎಂಎಸ್‍ಪಿ ನೇರ ಪಾವತಿಗೆ ಮುಂದಾಗಿದೆ. ರಾಸಾಯನಿಕ ಮುಕ್ತ ಸಹಜ ಕೃಷಿಗೆ ರಿಯಾಯ್ತಿ ಮೂಲಕ ರೈತರಿಗೆ ಉತ್ತೇಜನ ನೀಡಲು ಹೆಜ್ಜೆಯನ್ನಿಟ್ಟಿದೆ. ಶೂನ್ಯ ಬಂಡವಾಳ ಕೃಷಿಗೆ ಒತ್ತು. ಸಣ್ಣ ರೈತರಿಗೆ ಬಾಡಿಗೆ ಯಂತ್ರ. ಸಿರಿಧಾನ್ಯಗಳ ಉತ್ಪನ್ನಗಳಿಗೆ ಒತ್ತು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಣೆ ಮಾಡಿದೆ. ಇದನ್ನೂ ಓದಿ: Budget 2022: 39.54 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನ `ರೂಪಾಯಿ’ ಲೆಕ್ಕಾಚಾರ ಹೇಗಿದೆ ಗೊತ್ತಾ?

ಕೃಷಿಕರಿಗೆ ಡಿಜಿಟಲ್, ಹೈ ಟೆಕ್ ಸೇವೆ ಆರಂಭಿಸಿ ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಬೆಳೆ ರಕ್ಷಣೆಗೆ ಕಿಸಾನ್ ಡ್ರೋನ್ ಬಳಸಲು ಅವಕಾಶ ನೀಡಿದೆ. ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಸ್ಟಾರ್ಟ್‍ಅಪ್. ಕೃಷಿ ಸ್ಟಾರ್ಟ್‍ಅಪ್‍ಗಳಿಗೆ ಮೂಲಧನದ ನೆರವು (ನಬಾರ್ಡ್ ಮೂಲಕ ಸಾಲ). ಸ್ಥಳೀಯ ಮಾರುಕಟ್ಟೆಗಾಗಿ ಒನ್ ನೇಷನ್, ಒನ್ ಪ್ರೊಡಕ್ಷನ್. ಖಾದ್ಯ ತೈಲ ಆಮದು ಕಡಿಮೆಗೆ ಪ್ರೋತ್ಸಾಹ. ಭೂಮಿ ವ್ಯವಹಾರಗಳಿಗೆ ಡಿಜಿಟಲ್ ಟಚ್. 8 ಭಾಷೆಗಳಲ್ಲಿ ಆಸ್ತಿ ನೋಂದಣಿಗೆ ಏಕರೂಪ ವ್ಯವಸ್ಥೆ ಆಸ್ತಿ ನೋಂದಣಿಗೆ ಒನ್ ನೇಷನ್, ಒನ್ ರಿಜಿಸ್ಟ್ರೇಷನ್ ಯೋಜನೆ ಮೂಲಕ ರೈತರಿಗೆ ಡಿಜಿಟಲ್ ಟಚ್ ನೀಡಲು ಬಜೆಟ್‍ನಲ್ಲಿ ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ಮಾನಸಿಕ ಆರೋಗ್ಯಕ್ಕೆ ಟೆಲಿ-ಮೆಂಟಲ್‌ ಆರೋಗ್ಯ ಕಾರ್ಯಕ್ರಮ – ಬೆಂಗಳೂರಿನ IIITB ತಾಂತ್ರಿಕ ಬೆಂಬಲ

ಗೋಧಿ ಮತ್ತು ಭತ್ತದ ಖರೀದಿಗಾಗಿ 1.63 ಕೋಟಿ ರೈತರಿಗೆ 2.37 ಲಕ್ಷ ಕೋಟಿ ರೂ.ನೇರ ಪಾವತಿ. ದೇಶದಾದ್ಯಂತ ರಾಸಾಯನಿಕ ಮುಕ್ತ ಸಹಜ ಕೃಷಿಯನ್ನು ಉತ್ತೇಜಿಸಲಾಗುವುದು. ಆರಂಭಿಕವಾಗಿ ಗಂಗಾ ನದಿಯ ಉದ್ದಕ್ಕೂ 5 ಕಿಮೀ ಅಗಲದ ಕಾರಿಡಾರ್‍ಗಳಲ್ಲಿ ರೈತರ ಜಮೀನುಗಳ ಮೇಲೆ ಗಮನವನ್ನು ಕೇಂದ್ರೀಕರಣ. ಕೃಷಿ ಮತ್ತು ಗ್ರಾಮೀಣ ಉದ್ಯಮಗಳ ಸ್ಟಾರ್ಟಪ್‍ಗಳಿಗೆ ಹಣಕಾಸು ಒದಗಿಸಲು ಸಂಯೋಜಿತ ಬಂಡವಾಳ ನಿಧಿಯನ್ನು ನಬಾರ್ಡ್. ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ ‘ಕಿಸಾನ್ ಡ್ರೋನ್ಸ್’ ಬಳಕೆಗೆ ಕೇಂದ್ರ ಅಸ್ತು ಎಂದಿದೆ. ಇದನ್ನೂ ಓದಿ: Budget 2022: ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

ಕೆನ್-ಬೆಟ್ವಾ ಯೋಜನೆ:
ಕೆನ್ – ಬೆಟ್ವಾ ಜೋಡಣೆ ಯೋಜನೆಯ ಅನುಷ್ಠಾನಕ್ಕೆ 1400 ಕೋಟಿ ರೂ.ವೆಚ್ಚ ಬರಿಸಲು ಮುಂದಾಗಿದ್ದು, ಕೆನ್-ಬೆಟ್ವಾ ಜೋಡಣೆ ಯೋಜನೆಯಿಂದ 9.08 ಲಕ್ಷ ಹೆಕ್ಟೇರ್ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಉದ್ಯಮ್, ಇ-ಶ್ರಮ್, ಎನ್‍ಸಿಎಸ್ ಮತ್ತು ಅಸೀಮ್ ಪೋರ್ಟಲ್‍ಗಳನ್ನು ಪರಸ್ಪರ ಜೋಡಿಸಲಾಗಿದೆ. 130 ಲಕ್ಷ ಎಂಎಸ್‍ಎಂಇಗಳಿಗೆ ತುರ್ತು ಸಾಲ ಖಾತ್ರಿ ಯೋಜನೆ (ಇಸಿಎಲ್‍ಜಿಎಸ್)ಅಡಿಯಲ್ಲಿ ಹೆಚ್ಚುವರಿ ಸಾಲವನ್ನು ಒದಗಿಸಲಾಗಿದ್ದು, ಇಸಿಎಲ್‍ಜಿಎಸ್ ಅನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗಿದೆ. ಇಸಿಎಲ್‍ಜಿಎಸ್ ಅಡಿಯಲ್ಲಿ ಖಾತರಿ ಕವರ್ ಅನ್ನು 50000 ಕೋಟಿ ರೂ.ಗಳಿಂದ ಒಟ್ಟು 5 ಲಕ್ಷ ಕೋಟಿ ರೂ.ಗಳಿಗೆ ವಿಸ್ತರಿಸಲು ಮುಂದಾಗಿದ್ದು, ಮೈಕ್ರೋ ಮತ್ತು ಸ್ಮಾಲ್ ಎಂಟರ್‍ಪ್ರೈಸಸ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ (ಸಿಜಿಟಿಎಂಎಸ್‍ಇ) ಅಡಿಯಲ್ಲಿ ಕಿರು ಮತ್ತು ಸಣ್ಣ ಉದ್ಯಮಗಳಿಗೆ 2 ಲಕ್ಷ ಕೋಟಿ ಹೆಚ್ಚುವರಿ ಸಾಲ ಕೊಡುವುದಾಗಿ ಕೇಂದ್ರ ಬಜೆಟ್‍ನಲ್ಲಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *