ಮಧ್ಯಮ ವರ್ಗದ ಮನಗೆದ್ದ ಮೋದಿ – ಬಜೆಟ್‍ನಲ್ಲಿ ಸಿಕ್ಕಿದ್ದು ಏನು?

Public TV
2 Min Read

ನವದೆಹಲಿ: ಇಂದು ಮೋದಿ ಸರ್ಕಾರದ ಕೊನೆಯ ಬಜೆಟ್ ಮಂಡನೆಯಾಗಿದ್ದು, ಮಧ್ಯಮ ವರ್ಗಕ್ಕೆ ಹಣಕಾಸು ಸಚಿವ ಪಿಯೂಶ್ ಗೋಯಲ್ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ.

1. ಹೊಸ ಪಿಂಚಣಿ ಯೋಜನೆಯ ಅನುದಾನವನ್ನು ಸರ್ಕಾರ ಶೇ. 4ರಿಂದ 14ಕ್ಕೆ ಹೆಚ್ಚಳ ಮಾಡಿದೆ.
2. 21 ಸಾವಿರ ರೂ.ಗೆ ಸಂಬಳ ಪಡೆಯುವ ಕಾರ್ಮಿಕ ವರ್ಗದವರಿಗೆ 7 ಸಾವಿರ ಬೋನಸ್ ಸಿಗಲಿದೆ. ಗ್ರಾಚ್ಯೂಟಿ ಮೊತ್ತವನ್ನು 10 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ.
3. ಮನೆ ಖರೀದಿಸುವ ಮಧ್ಯಮ ವರ್ಗದವರಿಗೆ ಜಿಎಸ್‍ಟಿಯಲ್ಲಿ ವಿನಾಯಿತಿ ನೀಡಲಾಗಿದೆ.

4. ಪ್ರಧಾನ ಮಂತ್ರಿ ಶ್ರಮಯೋಗಿ ಮನಧನ್ ಮೆಗಾ ಪೆನ್ಷನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಿಂದಾಗಿ ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ 60 ವರ್ಷದ ಬಳಿಕ 3 ಸಾವಿರ ರೂ. ಪ್ರತಿ ತಿಂಗಳು ಮಾಸಿಕ ಪಿಂಚಣಿ ಸಿಗಲಿದೆ. ಈ ಯೋಜನೆಯಿಂದಾಗಿ 10 ಕೋಟಿ ಕಾರ್ಮಿಕರಿಗೆ ಲಾಭ ಸಿಗಲಿದೆ. ಕರ್ತವ್ಯದಲ್ಲಿದ್ದ ಸಮಯದಲ್ಲಿ ಕಾರ್ಮಿಕ ಮೃತಪಟ್ಟರೆ 6 ಲಕ್ಷ ರೂ. ಪರಿಹಾರ ಸಿಗಲಿದೆ.

5. ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ. ನಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ. ಒಟ್ಟು 5 ಲಕ್ಷ ರೂ. ವರೆಗಿನ ಮಿತಿಯನ್ನು ಏರಿಸಿದೆ. ಇದರ ಜೊತೆಯಲ್ಲಿ ಹೂಡಿಕೆ ಮಾಡಿದರೆ 6.5 ಲಕ್ಷ ರೂ. ವಿನಾಯಿತಿ, ಗೃಹ ಸಾಲ 2.5 ಲಕ್ಷ ರೂ. ವಿನಾಯಿತಿ, ಶೈಕ್ಷಣಿಕ ಸಾಲ ಪಡೆದುಕೊಂಡಿದ್ದರೆ ತೆರಿಗೆ ವಿನಾಯಿತಿಯನ್ನು ಪ್ರಕಟಿಸಿದೆ.

6. ಮನೆ ಮಾಲೀಕ ಬಾಡಿಗೆಯಾಗಿ ಪಡೆಯುವ ಹಣ ಅಂದ್ರೆ ಎರಡನೇ ಮನೆಯ ಮೇಲಿನ ಆದಾಯಕ್ಕೆ ಎರಡು ವರ್ಷ ತೆರಿಗೆ ವಿನಾಯಿತಿ.
7. ಮನೆ ಖರೀದಿ ಮಾಡುವವರ ಜಿಎಸ್‍ಟಿ ಕಡಿಮೆ ಮಾಡುವಂತೆ ಜಿಎಸ್‍ಟಿ ಕೌನ್ಸಿಲ್ ಗೆ ಪಿಯೂಶ್ ಗೋಯಲ್ ಮನವಿ ಮಾಡಿಕೊಂಡಿದ್ದಾರೆ.
8. 2.5 ಲಕ್ಷದವರೆಗೂ ಮನೆ ಬಾಡಿಗೆಗೆ ತೆರಿಗೆ ಕಟ್ಟುವಂತಿಲ್ಲ. ಈ ಮೊದಲು 1.80 ಲಕ್ಷದವರೆಗೆ ಮಾತ್ರ ಇತ್ತು. ಗೃಹ ಸಾಲ 2 ಲಕ್ಷದರೆಗೂ ತೆರಿಗೆ ವಿನಾಯಿತಿ.

9. ಬ್ಯಾಂಕ್ ಮತ್ತು ಅಂಚೆ ಕಚೇರಿ ಠೇವಣಿಯ ಟಿಡಿಎಸ್ ಮಿತಿಯನ್ನು 10 ಸಾವಿರದಿಂದ 40 ಸಾವಿರಕ್ಕೆ ಏರಿಕೆ ಮಾಡಲಾಗಿದೆ.
10. Affordable Housing Scheme ನಲ್ಲಿ ಮನೆ ಬುಕ್ ಮಾಡಿದ್ದ ಹಣದ ಮೇಲಿನ ಬಡ್ಡಿಯನ್ನು 31 ಮಾರ್ಚ್ 2020ರರೆಗೆ ವಿಸ್ತರಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *