ಡಬಲ್‌ ಮರ್ಡರ್‌ ಕೇಸ್‌ – ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ!

Public TV
1 Min Read

– ಎನ್‌ಕೌಂಟರ್‌ಗೆ ಬಲಿಯಾದ ಪಾತಕಿ ಸಹೋದರ‌ ಅರೆಸ್ಟ್‌

ಲಕ್ನೋ: ಬುಡೌನ್‌ನ ಜೋಡಿ ಕೊಲೆ ಪ್ರಕರಣಕ್ಕೆ (Budaun Murder Case) ಸಂಬಂಧಿಸಿದಂತೆ ಪೊಲೀಸರು 2ನೇ ಅರೋಪಿಯನ್ನ ಬಂಧಿಸಿದ್ದಾರೆ. ಬಡೌನ್‌ನಲ್ಲಿ ಮಕ್ಕಳನ್ನು ಹತ್ಯೆಗೈದ ಬಳಿಕ ಆರೋಪಿ ಸಾಜಿದ್‌ ಜೊತೆಗೆ ಪರಾರಿಯಾಗಿದ್ದ ಮತ್ತೊಬ್ಬ ಆರೋಪಿ ಜಾವೇದ್‌ ಪೊಲೀಸರಿಗೆ (UP Police) ಸಿಕ್ಕಿಬಿದ್ದಿದ್ದಾನೆ. ಈತ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ಸಹೋದರ ಎಂದು ಹೇಳಲಾಗಿದೆ. ಇದನ್ನೂ ಓದಿ: ಸುಳ್ಳು ಜಾಹೀರಾತು, ಸುಪ್ರೀಂ ಚಾಟಿ ಬಳಿಕ ಕ್ಷಮೆ ಕೋರಿದ ಬಾಬಾ ರಾಮ್‌ದೇವ್

ಬೆಚ್ಚಿ ಬೀಳಿಸುವ ವರದಿ ಬಹಿರಂಗ:
ಇನ್ನೂ ತನ್ನ ನೆರೆ ಮನೆಯ ಇಬ್ಬರು ಮಕ್ಕಳನ್ನು ಹತ್ಯೆಗೈದಿದ್ದ ಪ್ರಕರಣದ ಮರಣೋತ್ತರ ಪರೀಕ್ಷೆ ಬಳಿಕ ಬೆಚ್ಚಿ ಬೀಳಿಸುವ ಮಾಹಿತಿ ಹೊರಬಿದ್ದಿದೆ. ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ಆರೋಪಿ ಸಾಜಿದ್‌, ಸಾಯುವ ಮುನ್ನ ಇಬ್ಬರು ಮಕ್ಕಳನ್ನ 23 ಬಾರಿ ಇರಿದು ಹತ್ಯೆಗೈದಿದ್ದ ಅನ್ನೋ ಭಯಾನಕ ಸತ್ಯ ಬಹಿರಂಗಗೊಂಡಿದೆ.

ಮಕ್ಕಳಾದ ಆಯುಷ್ (11) ಮತ್ತು ಅಹಾನ್ (6) ಇಬ್ಬರ ಬೆನ್ನು, ಎದೆ ಮತ್ತು ಕಾಲುಗಳ ಮೇಲೆ ಆರೋಪಿ ಸಾಜೀದ್‌ ಹರಿತವಾದ ಆಯುಧಗಳನ್ನು ಬಳಸಿ ಇರಿದಿದ್ದ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಏನಿದು ಘಟನೆ?
ಆರೋಪಿ ಸಾಜೀದ್‌ ವಿನೋದ್‌ ಅವರ ಮನೆ ಮುಂಭಾಗದಲ್ಲಿ ಸಲೂನ್ ಅಂಗಡಿ ಹಾಕಿದ್ದ. ಮಂಗಳವಾರ ಸಂಜೆ ವಿನೋದ್‌ ಕುಮಾರ್‌ ಮನೆಗೆ ಬಂದು ಚಹಾ ಕೇಳಿದ್ದಾನೆ. ಪತ್ನಿ ಚಹಾ ಮಾಡಲು ಅಡಿಗೆ ರೂಮಿಗೆ ಹೋದಾಗ ಟೆರೇಸ್‌ ಮೇಲೆ ಆಡುತ್ತಿದ್ದ ಮೂವರು ಮಕ್ಕಳ ಮೇಲೆ ಸಾಜೀದ್‌ ಹಲ್ಲೆ ನಡೆಸಿದ್ದಾನೆ. 11 ಮತ್ತು 6 ವರ್ಷದ ಇಬ್ಬರು ಸಹೋದರರ ಕತ್ತು ಸೀಳಿ ಕೊಲೆ ಮಾಡಿದ್ದರೆ, ಇನ್ನೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಿದ್ದ.

ಮಕ್ಕಳ ಮೇಲೆ ಹಲ್ಲೆ ನಡೆಸಿದ್ದನ್ನು ಕಂಡು ತಾಯಿ ಜೋರಾಗಿ ಕಿರುಚಾಡಿದಾಗ ಮನೆಯ ಬಳಿ ಹತ್ತಿರದ ನಿವಾಸಿಗಳು ಆಗಮಿಸಿದ್ದಾರೆ. ನಿವಾಸಿಗಳು ಬರುತ್ತಿದ್ದಂತೆ ಬೈಕ್‌ನಲ್ಲಿ ಕಾಯುತ್ತಿದ್ದ ತನ್ನ ಸಹೋದರ ಜಾವಿದ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ. ನಂತರ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Share This Article