ಆಟವಾಡುತ್ತಾ ಭಾರತದ ಗಡಿ ಪ್ರವೇಶಿಸಿದ ಪಾಕ್‍ನ 3 ವರ್ಷದ ಮಗು

Public TV
1 Min Read

ಚಂಡೀಗಢ: ಪಾಕಿಸ್ತಾನದ ಗಡಿ ದಾಟಿ ಭಾರತ ಪ್ರವೇಶಿಸಿದ್ದ 3 ವರ್ಷದ ಮಗುವೊಂದನ್ನು ಭಾರತದ ಭದ್ರತಾಪಡೆ ಮತ್ತೆ ಹೆತ್ತವರಿಗೆ ಹಸ್ತಾಂತರಿಸಿದ ಘಟನೆ ಪಂಜಾಬ್‍ನ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದಿದೆ.

ಭಾರತದ ಗಡಿಭಾಗವಾದ ಪಂಜಾಬ್‍ನ ಫಿರೋಜ್‍ಪುರ ಸೆಕ್ಟರ್‌ನಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನದ ಮಗುವೊಂದು ಆಟವಾಡುತ್ತಾ ತನಗರಿವಿಲ್ಲದೇ ಭಾರತಕ್ಕೆ ನುಸುಳಿತ್ತು. ರಾತ್ರಿ ವೇಳೆ ಆ 3 ವರ್ಷದ ಮಗು ದಾರಿ ಕಾಣದೆ ಸುತ್ತಾಡುತ್ತಿತ್ತು.

ಈ ವೇಳೆ ಮಗು ಅಳುತ್ತಿರುವ ಶಬ್ದವನ್ನು ಬಿಎಸ್‍ಎಫ್ ಯೋಧರು ಗಮನಿಸಿದ್ದಾರೆ. ಅದರಂತೆ ಬಿಎಸ್‍ಎಫ್ ಪಂಜಾಬ್ ಫ್ರಾಂಟಿಯರ್‌ನ 182 ಬೆಟಾಲಿಯನ್ ಸೈನಿಕರು ಪಾಕಿಸ್ತಾನಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ನಂತರ ಪಾಕಿಸ್ತಾನದ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕನ್ಹಯ್ಯ ಕೊಲೆ ಹಸಿರಾಗಿರುವಾಗಲೇ ನೂಪುರ್‌ ಶರ್ಮಾ ಬೆಂಬಲಿಸಿದ್ದಕ್ಕೆ ಮತ್ತೊಂದು ಕೊಲೆ

ಅಚಾತುರ್ಯದಿಂದ ಗಡಿ ದಾಟಿದ ಪ್ರಕರಣ ಎಂದು ಅರಿತ ಬಿಎಸ್‍ಎಫ್ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಗಡಿಗೆ ತೆರಳಿ ಮಗುವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಭಾರತ ಸೈನಿಕರು ಸೌಹಾರ್ದತೆಯನ್ನು ಮೆರೆದಿದ್ದಾರೆ. ಇದನ್ನೂ ಓದಿ: 48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್

Live Tv

Share This Article
Leave a Comment

Leave a Reply

Your email address will not be published. Required fields are marked *