ನಿಮ್ಮನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲೇ ನಿಲ್ಲಿಸುತ್ತೇವೆ- ಸಿದ್ದರಾಮಯ್ಯಗೆ ಬಿಎಸ್‍ವೈ ಎಚ್ಚರಿಕೆ

Public TV
2 Min Read

ರಾಯಚೂರು: ಸಿದ್ದರಾಮಯ್ಯನವರೇ ನೀವು ಬಾಯಿ ಮುಚ್ಚಿಕೊಂಡು ಸ್ವಲ್ಪ ಸುಮ್ಮನಿರಿ. ಮೋದಿ ಬಗ್ಗೆ ಮಾತನಾಡುವ ಯೋಗ್ಯತೆಯಿದೆಯಾ ನಿಮಗೆ. ಪ್ರಧಾನಿ ಕಾಲಡಿ ಕುಳಿತುಕೊಳ್ಳುವ ಯೋಗ್ಯತೆಯೂ ಇಲ್ಲ ಎಂದು ಮಾಜಿ ಸಿಎಂ ವಿರುದ್ಧ ಬಿ.ಎಸ್ ಯಡಿಯೂರಪ್ಪ (B.S Yediyurappa) ಗುಡುಗಿದ್ದಾರೆ.

ರಾಯಚೂರು ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಬಚ್ಚಾ ರಾಹುಲ್ ಗಾಂಧಿ (Rahul Gandhi) ಮೋದಿ ಬಗ್ಗೆ ಮಾತನಾಡುತ್ತಾನೆ. ನಿಮ್ಮ ಎಲ್ಲಾ ಹಗರಣಗಳನ್ನ ಬಯಲಿಗೆಳೆಯುತ್ತೇವೆ. ಮುಂಬರುವ ವಿಧಾನ ಮಂಡಲದಲ್ಲಿ ನಿಮ್ಮ ಹಗರಣಗಳನ್ನ ಬಯಲಿಗೆಳೆಯುತ್ತೇವೆ. ನಿಮ್ಮ ಹಗರಣಗಳನ್ನ ತನಿಖೆ ಮಾಡಿಸಿ, ನಿಮ್ಮನ್ನ ಎಲ್ಲಿ ನಿಲ್ಲಿಸಬೇಕು ಅಲ್ಲಿ ನಿಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯ (Siddaramaiah) ಗೆ ಬಿಎಸ್‍ವೈ ಎಚ್ಚರಿಕೆ ನೀಡಿದರು.

ರಾಬರ್ಟ್ ವಾದ್ರಾ (Robert Vadra) ಮಾಡಿದ್ದ ಹಗರಣದ ಪಟ್ಟಿ ಇದೆಯಾ..?, ನ್ಯಾಷನಲ್ ಹೆರಾಲ್ಡ್ ಹಗರಣ ಗೊತ್ತಿಲ್ವೇ..?, ಈವರೆಗೆ ಹಗರಣ ಮಾಡದ ಮೋದಿ ಬಗ್ಗೆ ಮಾತನಾಡ್ತೀರಾ..?, 25 ಲಕ್ಷ ಹುಬ್ಲೋಟ್ ವಾಚ್ ಯಾರೂ ಕೊಟ್ಟಿದ್ರು..? ಗೊತ್ತಿಲ್ವಾ. ಕೋಟ್ಯಂತರ ರೂ.ಬೆಲೆಬಾಳುವ ಜಮೀನನ್ನ ರಿಯಲ್ ಎಸ್ಟೇಟ್ ಅವರಿಗೆ ಮಾರಾಟ ಮಾಡಿದ್ದೀರಿ ಎಂದು ಕಿಡಿಕಾರಿದರು. ಇದನ್ನೂ ಓದಿ: BJP ಸರ್ಕಾರವನ್ನು ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ: ಸಿದ್ದರಾಮಯ್ಯ

ಈಗತಾನೆ ಸಿಎಂ ಜೊತೆ ಮಾಡಿದ್ದೇನೆ ಏಮ್ಸ್ (AIIMS) ಅನ್ನು ರಾಯಚೂರು (Raichur) ಜಿಲ್ಲೆಗೆ ತರಲು ಮುಂದಾಗಿ. ಜಿಲ್ಲೆಯ 7ರಲ್ಲಿ 5 ಕ್ಷೇತ್ರ ಗೆಲ್ಲಿಸುವ ಭರವಸೆಯನ್ನ ಕೊಟ್ಟಿದ್ದೀರಿ. ಉಳಿದೆಲ್ಲಾ ಕಡೆ ಬಿಟ್ಟು ಏಮ್ಸ್ ಜಿಲ್ಲೆಗೆ ತರಲು ಮುಂದಾಗಲು ಸಿಎಂಗೆ ಹೇಳಿದ್ದೇನೆ. ಸಿದ್ದರಾಮಯ್ಯ-ಡಿಕೆಶಿ ಅಧಿಕಾರಕ್ಕೆ ಬರುತ್ತೇವೆ ಅಂತ ಮಾತನಾಡುತ್ತಾರೆ. ನಾನು ರಾಯರ ಕ್ಷೇತ್ರದ ಹತ್ತಿರದಲ್ಲಿ ಹೇಳುತ್ತೇನೆ 150 ಕ್ಷೇತ್ರಗಳಲ್ಲಿ ನಮ್ಮ ಗೆಲುವು ತಡೆಯಲು ಯಾವ ಶಕ್ತಿಯಿಂದ ಸಾಧ್ಯವಿಲ್ಲ ಎಂದರು.

ಗಾಂಧಿ ಕುಟುಂಬದ ಹೆಸರು ಹೇಳಿಕೊಂಡು ಆಸ್ತಿ ಮಾಡಿಕೊಂಡಿದ್ದೇವೆ ಅಂತ ರಮೇಶ್ ಕುಮಾರ್ (Ramesh Kumar) ಹೇಳಿದ್ದರು. ಅಂದ್ರೆ ಸರ್ಕಾರದ ಹಣ ಲೂಟಿ ಮಾಡಿಕೊಂಡು ಬಂದಿರುವುದನ್ನು ಒಪ್ಪಿಕೊಂಡಿದ್ದಾರೆ. ಜನ ಟ್ಯಾಕ್ಸ್ ಹಣ ಲೂಟಿ ಮಾಡಿದ್ದಕ್ಕೆ ಇದಕ್ಕೆ ಉದಾಹರಣೆ ಬೇಕಿಲ್ಲ. ರಾಹುಲ್ ಗಾಂಧಿಗೆ ಕೇಳ್ತೀನಿ ಬಿಜೆಪಿ (BJP) ಭ್ರಷ್ಟಾಚಾರ ಬಗ್ಗೆ ಮಾತನಾಡಲು ಬಂದಿದ್ದೀರಿ. 12 ಲಕ್ಷ ಕೋಟಿ ಹಗರಣದಲ್ಲಿ ತಮ್ಮ ಕುಟುಂಬದ ಪಾಲೆಷ್ಟು..?, 2 ಜಿ, ಕಾಮನ್ ವೆಲ್ತ್ ಹಗರಣ, ವಾದ್ರಾ ಹಗರಣದ ಬಗ್ಗೆ ಹೇಳಿ. ಸೋನಿಯಾಗಾಂಧಿ ಜಾಮಿನು ಮೇಲೆ ಓಡಾಡುತ್ತಿದ್ದಾರೆ. ಸಿದ್ದರಾಮಯ್ಯನ ಸಿಎಂ ಕನಸು ನನಸಾಗಲ್ಲ. ದುಬಾರಿ ವಾಚ್ ಯಾರ್ ಕೊಟ್ರು ನಿಮಗೆ, ಯಾಕೆ ಕೊಟ್ರು ಹೇಳಿ..? ರೀ ಡೂ ಹೆಸರಲ್ಲಿ ರಿಯಲ್ ಎಸ್ಟೇಟ್ (Real Estate) ಉದ್ಯಮಿಗಳಿಗೆ ಮಾರಿಕೊಂಡ್ರಿ ಎಂದು ಬಿಎಸ್‍ವೈ ಅವರು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆಗಳ ಸುರಿಮಳೆಗೈದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *