ಪೋಕ್ಸೋ ಪ್ರಕರಣದಲ್ಲಿ ಬಿಎಸ್‍ವೈಗೆ ಮತ್ತೆ ಸಮನ್ಸ್

Public TV
1 Min Read

ಬೆಂಗಳೂರು: ಪೋಕ್ಸೋ ಕೇಸ್‍ನಲ್ಲಿ (POCSO case) ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ (B.S Yediyurappa) ಬೆಂಗಳೂರಿನ 1ನೇ ತ್ವರಿತಗತಿಯ ಕೋರ್ಟ್ ಸಮನ್ಸ್ ನೀಡಿದೆ.

ಆರೋಪಪಟ್ಟಿಯನ್ನು ವಿಚಾರಣೆಗೆ ಪರಿಗಣಿಸಿದ ಕೋರ್ಟ್, ಜುಲೈ 15ರಂದು ಖುದ್ದಾಗಿ ಕೋರ್ಟ್‍ಗೆ ಹಾಜರಾಗುವಂತೆ ಬಿಎಸ್‍ವೈ ಹಾಗೂ ಇತರೆ ಆರೋಪಿಗಳಿಗೆ ಸಮನ್ಸ್ ನೀಡಿದೆ.

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನಿಡಿದ್ದಾರೆ ಎಂಬ ಆರೋಪದ ಮೇಲೆ ಸದಾಶಿವನಗರ ಠಾಣೆಯಲ್ಲಿ ಬಿಎಸ್‍ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿತ್ತು. ತನಿಖೆಗೆ ಹಾಜರಾಗುವಂತೆ ಬಿಎಸ್‍ವೈಗೆ ನೋಟಿಸ್ ಕೊಟ್ಟಿದ್ದರಿಂದ ಅವರು ಕಾಲಾವಕಾಶ ಕೇಳಿದ್ದರು. ಬಳಿಕ ತನಿಖೆಗೆ ಹಾಜರಾಗಿಲ್ಲ ಎಂದು ಸಿಐಡಿ ಅಧಿಕಾರಿಗಳು, ಅವರ ಬಂಧನಕ್ಕೆ ಅರೆಸ್ಟ್ ವಾರೆಂಟ್ ಪಡೆದಿದ್ದರು. ನಂತರ ಮಾಜಿ ಸಿಎಂ ಮಧ್ಯಂತರ ಜಾಮೀನು ಪಡೆದಿದ್ದರು.

ಜಾಮೀನು ಪಡೆದ ಬಳಿಕ ಕೋರ್ಟ್ ನಿರ್ದೇಶನದಂತೆ ಸಿಐಡಿ ಅಧಿಕಾರಿಗಳ ಎದುರು ಬಿಎಸ್‍ವೈ ತನಿಖೆಗೆ ಹಾಜರಾಗಿದ್ದರು. ತನಿಖೆ ನಡೆಸಿರುವಸಿಐಡಿ ಅಧಿಕಾರಿಗಳು ಈ ಹಿಂದೆ ಕೋರ್ಟ್‍ಗೆ 750 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಯಡಿಯೂರಪ್ಪ, ಅರುಣ್, ರುದ್ರೇಶ್ ಮತ್ತು ಮರಿಸ್ವಾಮಿ ಎಂಬವರ ವಿರುದ್ಧ ಸಿಐಡಿ ಅಧಿಕಾರಿಗಳು 1ನೇ ತ್ವರಿತಗತಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Share This Article