ಯಡಿಯೂರಪ್ಪ ಶಕುನಿ ಇದ್ದ ಹಾಗೆ: ಯತ್ನಾಳ್

By
1 Min Read

ವಿಜಯಪುರ: ಯತ್ನಾಳ್ (Basangouda Patil Yatnal) ವಿರುದ್ಧ ದೂರು ನೀಡಲ್ಲ ಎಂದಿದ್ದ ಮಾಜಿ ಸಿಎಂ ಯಡಿಯೂರಪ್ಪಗೆ (BS Yediyurappa) ವಿಜಯಪುರದಲ್ಲಿ  (Vijayapura) ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿರುಗೇಟು ನೀಡಿದ್ದು, ಯಡಿಯೂರಪ್ಪ ಶಕುನಿ ಇದ್ದ ಹಾಗೆ ಎಂದು ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಏನು ಹೇಳುತ್ತಾರೆ ಅದರ ಉಲ್ಟಾ ನಡೆದಿರುತ್ತದೆ. ವಿರೋಧ ಪಕ್ಷದ ನಾಯಕ ಆಗಲಿ ಎಂದಿದ್ದ ವಿಜಯೇಂದ್ರ ಹೈಕಮಾಂಡ್ ಬಳಿ ಪ್ಯಾಕ್ ಮಾಡಿಕೊಂಡು ಬಂದಿದ್ದ. ಅದಕ್ಕೆ ಆಗ ಯತ್ನಾಳ್ ವಿರೋಧ ಪಕ್ಷದ ನಾಯಕರಾಗಲು ತಕರಾರು ಇಲ್ಲ ಎಂದು ಹೇಳಿಕೆ ಕೊಟ್ಟಿದ್ದರು ಎಂದು ಹರಿಹಾಯ್ದರು. ಇದನ್ನೂ ಓದಿ: ಡ್ರಗ್ಸ್ ತೆಗೆದುಕೊಳ್ತಿದ್ದಿದ್ದಕ್ಕೆ ರಿಲೇಷನ್‍ಶಿಪ್ ಬೇಡ ಎಂದಿದ್ದೇನೆ: ಕಾರಿಯಪ್ಪ

ಯಡಿಯೂರಪ್ಪ ಭಾನುವಾರ ಹೇಳಿಕೆ ನೀಡಿದ್ದಾರೆ. ಈಗಾಗಲೇ ದೂರು ಕೊಟ್ಟಿದ್ದಾರೆ. ಕಂಪ್ಲೆಂಟ್ ಕೊಟ್ಟಿದ್ದಾರೆ. ಆದರೆ ಏನೂ ನಡೆಯುತ್ತಿಲ್ಲ. ಯತ್ನಾಳ್‌ಗೆ ನೋಟಿಸ್ ಕೊಡಲಿಲ್ಲ. ಮರ್ಯಾದೆ ಹೋಗಬಾರದು ಎಂದು ಈ ಹೇಳಿಕೆ ಕೊಡುತ್ತಿದ್ದಾರೆ. ಈ ವಿಚಾರದಲ್ಲಿ ಯಡಿಯೂರಪ್ಪ ಶಕುನಿ ಥರ ಆಡುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಮದ್ವೆಯಾಗೋದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ- ಕ್ರಿಕೆಟಿಗ ಕಾರಿಯಪ್ಪ ವಿರುದ್ಧ ಯುವತಿ ದೂರು

Share This Article