ಬಿಎಸ್ ಯಡಿಯೂರಪ್ಪಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ

Public TV
1 Min Read

ಶಿವಮೊಗ್ಗ: ಬೆಕ್ಕಿನ ಕಲ್ಮಠದ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಬಿಎಸ್‍ವೈಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಸ್ವಾಮೀಜಿಯವರು ಅಧಿಕಾರದಲ್ಲಿ ಇದ್ದಾಗ ಸನ್ಮಾನ ಮಾಡುವುದು ನೋಡಿದ್ದೇವೆ. ಆದರೆ ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಯಡಿಯೂರಪ್ಪ ಅವರಿಗೆ ಸನ್ಮಾನ ಮಾಡುತ್ತಿದ್ದಾರೆ ಅಂದರೆ ಅವರು ಮಾಡಿರುವ ಕೆಲಸಗಳೇ ಕಾರಣ ಎಂದರು. ಇದನ್ನೂ ಓದಿ: ಯು ಡಿಜಿಟಲ್ ನೆಟ್‌ವರ್ಕ್ 2ನೇ ವರ್ಷದ ವಾರ್ಷಿಕೋತ್ಸವ – ಅರುಣ್ ಬಡಿಗೇರ್‌ಗೆ ಸನ್ಮಾನ

ಯಡಿಯೂರಪ್ಪ ಈಶ್ವರಪ್ಪ ಇಬ್ಬರು ಜಗಳ ಆಡುತ್ತಾರೆ. ನಂತರ ಸಿಹಿ ತಿನಿಸುತ್ತಾರೆ. ಅವರಿಬ್ಬರದ್ದು ಗಂಡ ಹೆಂಡಿರ ಜಗಳ ಇದ್ದಾಗೆ. ಪ್ರಪಂಚದಲ್ಲಿ ಜಗಳ ಆಡದಿರುವ ಗಂಡ ಹೆಂಡತಿ ಇರಲು ಸಾಧ್ಯವೇ. ಈ ಇಬ್ಬರು ನಾಯಕರು ಅಷ್ಟೇ ರಾಜಕೀಯದಲ್ಲಿ ಏನೇ ಜಗಳ ಇದ್ದರೂ ನಂತರ ಅದನ್ನು ಸರಿಪಡಿಸಿಕೊಳ್ಳುತ್ತಾರೆ ಎಂದು ನುಡಿದರು. ಇದನ್ನೂ ಓದಿ: ಎಂಜಿನಿಯರ್‌ಗಳನ್ನೇ ಬದಲಿಸುತ್ತೇವೆ: ಬಿಬಿಎಂಪಿಗೆ ಹೈಕೋರ್ಟ್‌ ಎಚ್ಚರಿಕೆ

Share This Article
Leave a Comment

Leave a Reply

Your email address will not be published. Required fields are marked *