ಸಿಎಂ ಬಹಿರಂಗ ಚರ್ಚೆ ಸವಾಲು ಸ್ವೀಕರಿಸಿದ ಬಿಎಸ್‍ವೈ: ಚರ್ಚೆಗೆ ಟಾಪಿಕ್ ಟ್ವೀಟ್ ಮಾಡಿ ತಿರುಗೇಟು

Public TV
1 Min Read

ಬೆಂಗಳೂರು: ಬಹಿರಂಗ ಚರ್ಚೆಗೆ ಬನ್ನಿ ಎಂದು ಸಿಎಂ ಸಿದ್ದರಾಮಯ್ಯ ಎಸೆದಿದ್ದ ಸವಾಲನ್ನು ಬಿಎಸ್ ಯಡಿಯೂರಪ್ಪ ಸ್ವೀಕರಿಸಿದ್ದಾರೆ.

ಪ್ರಧಾನಿ ಮೋದಿಯವರು ತಮ್ಮ ಆಧಾರ ರಹಿತ ಹೇಳಿಕೆಗಳ ಮೂಲಕ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಪ್ರತಿಸ್ಪರ್ಧಿ ಯಡಿಯೂರಪ್ಪ.ರಾಜ್ಯದ ಅಭಿವೃದ್ಧಿಗಾಗಿ ನಾವುಗಳು ಮಾಡಿರುವ ಕೆಲಸಗಳ ಬಗ್ಗೆ ಜನರ ಸಮ್ಮುಖದಲ್ಲಿ ಬಹಿರಂಗ ಚರ್ಚೆ ಮಾಡೋಣ. ಯಾರು ಉತ್ತಮ ಕೆಲಸ ಮಾಡಿದ್ದೇವೆ ಎನ್ನುವುದನ್ನು ಜನರು ನಿರ್ಧರಿಸಲಿ ಸಿಎಂ ಇಂದು ಟ್ವೀಟ್ ಮಾಡಿ ಸವಾಲು ಎಸೆದಿದ್ದರು.

ಚರ್ಚೆಗಾಗಿ ನೀವು ತಿಳಿಸಿದ ದಿನ, ಸಮಯ ಮತ್ತು ಸ್ಥಳಕ್ಕೆ ಬರಲು ನಾನು ಸಿದ್ಧ. ಮೋದಿಯವರನ್ನು ಸ್ವಾಗತಿಸುತ್ತೇನೆ. ನಿಮ್ಮ ಕರೆಯ ನಿರೀಕ್ಷೆಯಲ್ಲಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಈ ಸವಾಲಿಗೆ ಟ್ವೀಟ್ ಮಾಡಿರುವ ಬಿಎಸ್ ಯಡಿಯೂರಪ್ಪನವರು ಹ್ಯೂಬ್ಲೊಟ್ ವಾಚ್ ಚರ್ಚೆಗೆ ಒಳ್ಳೆಯ ಸಮಯವನ್ನು ಆಯ್ಕೆ ಮಾಡಿದ್ದೀರಿ. ನಿಮ್ಮ ದೇಶಭ್ರಷ್ಟ ಸ್ನೇಹಿತ ವಿಜಯ್ ಈಶ್ವರನ್ ಅನ್ನು ಕರೆದುಕೊಂಡು ಬನ್ನಿ, ಜೊತೆಗೆ ಎಲ್ ಗೋವಿಂದರಾಜು ಅವರ ಡೈರಿಯನ್ನು ತೆಗೆದುಕೊಂಡು ಬನ್ನಿ ಎಂದು ಬರೆದು ಸವಾಲು ಸ್ವೀಕರಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿರುವುದು. ರೈತರ ಆತ್ಮಹತ್ಯೆ, ಮರಳು ಮಾಫಿಯಾ, ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆ ಬಗ್ಗೆ ಚರ್ಚಿಸಲು ಆಸಕ್ತನಾಗಿದ್ದೇನೆ ಎಂದು ಬಿಎಸ್‍ವೈ ಟ್ವೀಟ್ ಮಾಡಿದ್ದಾರೆ.

ಸಮುದಾಯಗಳನ್ನು ಒಡೆಯುವ ಮತ್ತು ಓಲೈಕೆ ರಾಜಕಾರಣ. ಸರ್ಕಾರದಲ್ಲಿ ಕೆಂಪಯ್ಯನವರ ಹಸ್ತಕ್ಷೇಪ, ಬೆಂಗಳೂರು ಅಭಿವೃದ್ಧಿ ಕುಂಠಿತಗೊಂಡಿರುವುದು, ಕಸದ ಸಮಸ್ಯೆ, ಮಹಿಳೆಯರ ಸುರಕ್ಷತೆ, ಕೆರೆಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದು. ಆಯ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವುದು. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು, ಐದು ವರ್ಷದ ಆಡಳಿತದಲ್ಲಿ ಅಭಿವೃದ್ಧಿಗೆ ಮಾರಕವಾದ ಸಾಲ, ಭ್ರಷ್ಟಾಚಾರ, ಕ್ರೈಂ ಹೆಚ್ಚಿರುವುದರ ಕುರಿತು ನಿಮ್ಮಿಂದ ತಿಳಿಯಲು ಕಾದಿರುವುದಾಗಿ ಟ್ವೀಟ್ ಮಾಡಿದ್ದಾರೆ.

 

 

 

Share This Article
Leave a Comment

Leave a Reply

Your email address will not be published. Required fields are marked *