ಭಾವಿ ಪತಿಯ ಪರಿಚಯಿಸಿದ ‘ಬೃಂದಾವನ’ ನಟಿ

Public TV
1 Min Read

ರ್ಶನ್ (Darshan) ನಟನೆಯ ‘ಬೃಂದಾವನ’ (Brundavana) ಸಿನಿಮಾದಲ್ಲಿ ನಟಿಸಿದ್ದ ಕಾರ್ತಿಕಾ ನಾಯರ್ (Karthika Nair) ಇದೀಗ ತಮ್ಮ ಭಾವಿ ಪತಿಯನ್ನು ಪರಿಚಯಿಸಿದ್ದಾರೆ. ರೊಮ್ಯಾಂಟಿಕ್ ಫೋಟೋಗಳನ್ನ ಹಂಚಿಕೊಳ್ಳುವ ಮೂಲಕ ಎಂಗೇಜ್ ಆಗಿರುವ ಬಗ್ಗೆ ನಟಿ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಕಾಂತಾರ 2’ ಚಿತ್ರಕ್ಕಾಗಿ ಬದಲಾಯ್ತು ರಿಷಬ್ ಶೆಟ್ಟಿ ಲುಕ್

ಹಿರಿಯ ನಟಿ ರಾಧಾ ನಾಯರ್ ಅವರ ಪುತ್ರಿ ಕಾರ್ತಿಕಾ ನಾಯರ್, ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಕಳೆದ ತಿಂಗಳು ರೋಹಿತ್ ಮೆನನ್ ಜೊತೆ ಎಂಗೇಜ್‌ಮೆಂಟ್ ನಡೆದಿದೆ. ಇದೀಗ ಭಾವಿ ಪತಿ ರೋಹಿತ್‌ರನ್ನ ನಟಿ ಪರಿಚಯಿಸಿದ್ದಾರೆ. ಇನ್ನೂ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

 

View this post on Instagram

 

A post shared by Karthika Nair (@karthika_nair9)

ನಿಮ್ಮನ್ನು ಭೇಟಿಯಾಗಿರೋದು ನನ್ನ ಅದೃಷ್ಟ. ನಿಮ್ಮನ್ನು ಇಷ್ಟಪಡೋದು ಮ್ಯಾಜಿಕ್. ಹೊಸ ಹೆಜ್ಜೆಗೆ ಕೌಂಟ್‌ಡೌನ್ ಶುರುವಾಗಿದೆ ಎಂದು ನಟಿ ಸಂತಸದಿಂದ ಬರೆದುಕೊಂಡಿದ್ದಾರೆ. ನಟಿಯ ರೊಮ್ಯಾಂಟಿಕ್ ಫೋಟೋ ನೋಡಿ ಅಭಿಮಾನಿಗಳು ಶುಭಹಾರೈಸಿದ್ದಾರೆ.

ಕೆಲದಿನಗಳ ಹಿಂದೆ ಕಾರ್ತಿಕಾ ನಾಯರ್, ಭಾವಿ ಪತಿ ಜೊತೆಗಿನ ಬ್ಲರ್ ಫೋಟೋ ಹಂಚಿಕೊಂಡು ಎಂಗೇಜ್ ಆಗಿರುವ ಬಗ್ಗೆ ನಟಿ ಮುನ್ಸೂಚನೆ ನೀಡಿದ್ದರು. ಈಗ ಬಾಳ ಸಂಗಾತಿ ಮುಖವನ್ನು ನಟಿ ರಿವೀಲ್ ಮಾಡಿದ್ದಾರೆ.

Share This Article