ವಿಚಿತ್ರ ಖಾಯಿಲೆ – ನಟನೆಗೆ ಗುಡ್ ಬೈ ಹೇಳಿದ ಹಾಲಿವುಡ್ ನಟ

Public TV
1 Min Read

ಹಾಲಿವುಡ್ ಸಿನಿಮಾ ರಂಗದಲ್ಲಿ ತಮ್ಮದೆ ಆದ ಛಾಪು ಮೂಡಿಸಿರುವ ನಟ, ನಿರ್ಮಾಪಕ ಬ್ರೂಸ್ ವಿಲ್ಲೀಸ್ (Bruce Willis) ನಟನೆಗೆ ಗುಡ್ ಬೈ ಹೇಳಿದ್ದಾರೆ. ಇವರು ಅಫೇಷಿಯಾ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದು, ಈ ಕುರಿತಾಗಿ ಅವರೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅಫೇಷಿಯಾ ಕಾಯಿಲೆಗೆ ತುತ್ತಾದ ರೋಗಿಯು ಯಾವುದೇ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಅಥವಾ ಮಾತಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಯನ್ನು ವಿಲ್ಲೀಸ್ ಅವರು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಚಾರ ತಿಳಿದ ಹಾಲಿವುಡ್ನ ಅವರ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದು, ಬೇಗ ಹುಷಾರಾಗಿ ಬನ್ನಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಕಾಯಿಲೆ ಲಕ್ಷಣ: ಅಫೇಷಿಯಾ ಕಾಯಿಲೆ ಪಾರ್ಶ್ವವಾಯು ಅಥವಾ ತಲೆಗೆ ಪೆಟ್ಟಾದ ನಂತರ ಇದು ಸಂಭವಿಸುತ್ತದೆ. ಆದರೆ ನಿಧಾನವಾಗಿ ಮೆದುಳಿನ ಗೆಡ್ಡೆ ಮೇಲೆ ಪರಿಣಾಮ ಬೀಳುತ್ತದೆ. ನೆನಪು ಕ್ಷೀಣಿಸುತ್ತಾ ರೋಗ ಕ್ರಮೇಣವಾಗಿ ಇನ್ನೂ ಗಂಭೀರವಾಗಬಹುದು. ಇದನ್ನು ಮುಖ್ಯವಾಗಿ ಸ್ಪೀಚ್ ಥೆರಪಿ ಮತ್ತು ಮೌಖಿಕವಲ್ಲದ ಸಂವಹನ ವಿಧಾನಗಳನ್ನು ಕಲಿಸುವುದರ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದನ್ನೂ ಓದಿ : ಸಿನಿಮಾ ಶೀರ್ಷಿಕೆ ಮೂಲಕ ಅಪ್ಪುನ ನೆನಪಿಸಿಕೊಂಡ ಗೋಲ್ಡನ್ ಸ್ಟಾರ್ : ಗಣಿ-ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಟೈಟಲ್

ಕುಟುಂಬಸ್ಥರು ಹೇಳಿದ್ದೇನು?: ಈ ಕಾಯಿಲೆಯ ಪರಿಣಾಮವಾಗಿ ನಟ ಬ್ರೂಸ್ ಅವರು ನಟನೆಯಿಂದ ದೂರ ಸರಿಯುತ್ತಿದ್ದಾರೆ ಎಂದು ವಿಲ್ಲೀಸ್ ಅವರ ಈಗಿನ ಪತ್ನಿ ಎಮ್ಮಾ ಹೆಮಿಂಗ್ ವಿಲ್ಲೀಸ್, ಅವರ ಮಾಜಿ ಪತ್ನಿ ಡೆಮಿ ಮೂರ್ ಮತ್ತು ಅವರ ಐವರು ಮಕ್ಕಳಾದ ರುಮರ್, ಸ್ಕೌಟ್, ತಲ್ಲುಲಾಹ್, ಮಾಬೆಲ್ ಮತ್ತು ಎವೆಲಿನ್ ಸಹಿ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ : ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

ತೀರಾ ಇತ್ತೀಚೆಗೆ, ವಿಲ್ಲೀಸ್ ಅವರ ಗ್ಯಾಸೋಲಿನ್ ಅಲ್ಲೆ ಫೆಬ್ರವರಿ ತಿಂಗಳಲ್ಲಿ ಮತ್ತು ಮಾರ್ಚ್ ಆರಂಭದಲ್ಲಿ ಬಿಡುಗಡೆಯಾದ ಎ ಡೇ ಟು ಡೈ ಚಿತ್ರಗಳಲ್ಲಿ ನಟಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *