ಕಾರವಾರ: ಸಮುದ್ರದಲ್ಲಿ (Sea) ಮುಳುಗಿ ಇಬ್ಬರು ಸಹೋದರರು ಸಾವಿಗೀಡಾದ ಘಟನೆ ಹೊನ್ನಾವರದ (Honnavar) ಮಂಕಿಯಲ್ಲಿ ನಡೆದಿದೆ.
ಮೃತರನ್ನು ಮದನ್ ನಾರಾಯಣ ಖಾರ್ವಿ (17), ಸುಜನ್ ನಾರಾಯಣ ಖಾರ್ವಿ (15) ಎಂದು ಗುರುತಿಸಲಾಗಿದೆ. ಗುರುವಾರ (ಡಿ.18) ಕಬ್ಬಡ್ಡಿ ಆಡಿ, ನಂತರ ಇಬ್ಬರೂ ಸಂಜೆ ಸಮುದ್ರಕ್ಕೆ ಆಟ ಆಡಲು ಇಳಿದಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಇಬ್ಬರು ಕೊಚ್ಚಿ ಹೋಗಿದ್ದರು. ಇದನ್ನೂ ಓದಿ: ಕುಡ್ಲೇ ಬೀಚ್‌ನಲ್ಲಿ ಮುಳುಗುತ್ತಿದ್ದ ಕಜಕಿಸ್ತಾನದ ಮಹಿಳೆಯ ರಕ್ಷಣೆ
ತೀವ್ರ ಹುಡುಕಾಟದ ಬಳಿಕ ಗುರುವಾರ ತಡರಾತ್ರಿ ಇಬ್ಬರ ಶವಗಳು ಪತ್ತೆಯಾಗಿವೆ. ಮೃತದೇಹಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಈ ಸಂಬಂಧ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗುಂಡೇಟಿಗೆ ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಬಲಿ – ಬಾಂಗ್ಲಾ ಮತ್ತೆ ಧಗಧಗ

