ಪಾಟ್ನಾ: ಸೋದರಿಯರಿಂದ ವಿಷಕಾರಿ ಹಾವುಗಳಿಗೆ ರಾಖಿ ಕಟ್ಟಿಸಲು ಮುಂದಾಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ಬಿಹಾರದ ಸಾರಣ ಜಿಲ್ಲೆಯಲ್ಲಿ ನಡೆದಿದೆ.
25 ವರ್ಷದ ಮನಮೋಹನ್ ಉರ್ಫ್ ಬವುರಾ ಸಾವನ್ನಪ್ಪಿದ ಯುವಕ. ಈತ 10 ವರ್ಷಗಳಿಂದ ಹಾವುಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದನು. ಭಾನುವಾರ ಎರಡು ನಾಗರಹಾವು ಹಿಡಿದಿದ್ದ ಮನಮೋಹನ್ ತನ್ನ ಇಬ್ಬರು ಸೋದರಿಯರಿಂದ ರಾಖಿ ಕಟ್ಟಿಸಲು ಮುಂದಾಗಿದ್ದನು. ಈ ವೇಳೆ ಬಾಲ ಹಿಡಿದುಕೊಂಡಿದ್ದಾಗ ಒಂದು ಹಾವು ಮನಮೋಹನ್ ಹೆಬ್ಬರಳು ಕಚ್ಚಿದೆ.
ಹಾವು ಕಚ್ಚಿದ ಕೂಡಲೇ ಸ್ಥಳೀಯರು ಗಿಡಮೂಲಿಕೆ ಔಷಧಿ ಕೊಟ್ಟು ಚಿಕಿತ್ಸೆ ನೀಡಿದ್ದಾರೆ. ಆದ್ರೆ ಮನಮೋಹನ್ ರೋಗ್ಯ ಏರುಪೇರಾಗಿದ್ದರಿಂದ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ಆದ್ರೆ ಅಲ್ಲಿ ಆ್ಯಂಟಿ ವೆನಮ್ ಇಂಜೆಕ್ಷನ್ ಸಿಗದ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮನಮೋಹನ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಬಾಲಕಿಗೆ ಸೆಕ್ಸ್ ವೀಡಿಯೋ ಕಳಿಸ್ತಿದ್ದ ಆಂಟಿ ವಿರುದ್ಧ ಎಫ್ಐಆರ್
https://www.youtube.com/watch?v=P5UnCgwAZoo
ಸ್ನೇಕ್ ಬವುರಾ ಎಂದೇ ಫೇಮಸ್: ಮೃತ ಮನಮೋಹನ್ ಸ್ಥಳೀಯವಾಗಿ ಸ್ನೇಕ್ ಬವುರಾ ಎಂದೇ ಫೇಮಸ್ ಆಗಿದ್ದನು. ಸುತ್ತಮುತ್ತದ ಗ್ರಾಮಗಳಲ್ಲಿ ಎಲ್ಲೇ ಹಾವು ಕಾಣಿಸಿಕೊಂಡರೂ ಅಲ್ಲಿ ಮನಮೋಹನ್ ಪ್ರತ್ಯಕ್ಷನಾಗಿ ರಕ್ಷಣೆ ಮಾಡುತ್ತಿದ್ದನು. ಹಾಗೆ ಹಾವುಗಳನ್ನು ಕೊಲ್ಲದಂತೆ ಜಾಗೃತಿ ಸಹ ಮೂಡಿಸುತ್ತಿದ್ದನು. ಹಾವು ಕಚ್ಚಿದ ಕೂಡಲೇ ಕುಟುಂಬಸ್ಥರು ಗಿಡಮೂಲಿಕೆ ಪ್ರಯೋಗಕ್ಕೆ ಮುಂದಾಗದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರೆ ಆತ ಬದುಕುಳಿಯುತ್ತಿದ್ದ ಎಂದು ಮನಮೋಹನ್ ಗೆಳೆಯರು ಹೇಳಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಆಕ್ಟೀವ್ ಆಗಿದೆಯಾ ಓಜಿಕುಪ್ಪಂ ಗ್ಯಾಂಗ್? ಒಂಟಿ ಮಹಿಳೆಯರೇ ಇವರ ಟಾರ್ಗೆಟ್!