ವಿಶ್ವ ನಾಯಕರ ಪಟ್ಟಿಯಲ್ಲಿ ಭಾರತೀಯರ ಪಾರುಪತ್ಯ – ರಿಷಿ ಸುನಾಕ್ ನೂತನ ಎಂಟ್ರಿ

Public TV
2 Min Read

ಲಂಡನ್: ಬ್ರಿಟನ್‍ನ ಪ್ರಧಾನಿಯಾಗಿ British (Prime Minister) ಭಾರತ ಮೂಲದ ರಿಷಿ ಸುನಾಕ್ (42) (Rishi Sunak) ಆಯ್ಕೆ ಆಗಿದ್ದಾರೆ. ಈ ಮೂಲಕ ದೀಪಾವಳಿಯ (Deepavali) ಸಂತೋಷದೊಂದಿಗೆ ಭಾರತಕ್ಕೆ ಮತ್ತೊಂದು ಹಿರಿಮೆ ಸಿಕ್ಕಂತಾಗಿದೆ.

ರಿಷಿ ಸುನಾಕ್ ಬ್ರಿಟನ್‍ನ ಪ್ರಧಾನಿಯಾಗಿ ಆಯ್ಕೆಗೊಂಡಂತೆ ಅತಿ ಕಿರಿಯ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಜೊತೆಗೆ ಯುಕೆಯ (UK) ಮೊದಲ ಬಿಳಿಯರಲ್ಲದ, ಭಾರತೀಯ ಮೂಲದವರೊಬ್ಬರು ಪ್ರಧಾನಿಯಾದರೆಂಬ ಇತಿಹಾಸ ಕೂಡ ಸೃಷ್ಟಿಯಾಗಿದೆ. ಈ ಮೂಲಕ ಭಾರತದ ಮೂಲದವರು ವಿಶ್ವನಾಯಕತ್ವದಲ್ಲಿ ಉನ್ನತ ಸ್ಥಾನ ಪಡೆದ ನಾಯಕರ ಪಟ್ಟಿಯಲ್ಲಿ ರಿಷಿ ಸುನಾಕ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಭಾರತೀಯ ಸಂಜಾತ, ಸುಧಾಮೂರ್ತಿ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ನೂತನ ಪ್ರಧಾನಿ

ಪ್ರವಿಂದ್ ಜುಗ್ನಾಥ್:
2017 ರಿಂದ ಮಾರಿಷಸ್ ಪ್ರಧಾನಿಯಾಗಿರುವ ಪ್ರವಿಂದ್ ಜುಗ್ನಾಥ್ (Pravind Jugnauth) ಅವರ ಪೂರ್ವಜರು ಉತ್ತರ ಪ್ರದೇಶದಿಂದ ಬಂದವರು. ಜುಗ್ನಾಥ್ ಹಿಂದೂ ಕುಟುಂಬದಲ್ಲಿ ಜನಿಸಿದವರಾಗಿದ್ದು, ಇದೀಗ ಉನ್ನತ ಸ್ಥಾನದಲ್ಲಿ ಕಾಣಿಕೊಂಡಿದ್ದಾರೆ.

ಆಂಟೋನಿಯೊ ಕೋಸ್ಟಾ:
2015 ರಿಂದ ಪೋರ್ಚುಗಲ್‍ನ ಪ್ರಧಾನ ಮಂತ್ರಿಯಾಗಿರುವ ಆಂಟೋನಿಯೊ ಕೋಸ್ಟಾ (Antonio Costa), ಪೋರ್ಚುಗೀಸ್ ಮತ್ತು ಭಾರತೀಯ ಮೂಲದವರಾಗಿದ್ದಾರೆ. ಇವರು ಕೂಡ ಉನ್ನತ ಸ್ಥಾನದಲ್ಲಿರುವ ಭಾರತ ಮೂಲದವರಲ್ಲಿ ಒಬ್ಬರಾಗಿದ್ದಾರೆ.

ಪೃಥ್ವಿರಾಜ್ ಸಿಂಗ್ ರೂಪನ್:
ಪೃಥ್ವಿರಾಜ್ ಸಿಂಗ್ ರೂಪನ್ (Prithvirajsing Roopun) 2019 ರಿಂದ ಮಾರಿಷಸ್‍ನ ಏಳನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೂಪನ್ ಭಾರತೀಯ ಆರ್ಯ ಸಮಾಜ ಹಿಂದೂ ಕುಟುಂಬದಲ್ಲಿ ಜನಿಸಿ ಆ ಬಳಿಕ ಮಾರಿಷಸ್‍ನಲ್ಲಿ ಉನ್ನತ ಹುದ್ದೆಗೇರಿದವರಾಗಿದ್ದಾರೆ. ಇದನ್ನೂ ಓದಿ: ಬ್ರಿಟನ್ ನೂತನ ಪ್ರಧಾನಿ ಭಾರತ ಮೂಲದ ರಿಷಿ ಸುನಾಕ್ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳಿವು

ಚಾನ್ ಸಂತೋಖಿ
ಚಂದ್ರಿಕಾ ಪ್ರಸಾದ್ ಚಾನ್ ಸಂತೋಖಿ (Chan Santokhi), ರಾಜಕಾರಣಿ ಮತ್ತು ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಅವರು 2020 ರಿಂದ ಸುರಿನಾಮ್‍ನ 9ನೇ ಅಧ್ಯಕ್ಷರಾಗಿದ್ದಾರೆ. 1959 ರಲ್ಲಿ ಸುರಿನಾಮ್ ಜಿಲ್ಲೆಯ ಲೆಲಿಡಾರ್ಪ್‍ನಲ್ಲಿ ಇಂಡೋ-ಸುರಿನಾಮಿಸ್ ಹಿಂದೂ ಕುಟುಂಬದಲ್ಲಿ ಜನಿಸಿದವರಾಗಿದ್ದು, ಇದೀಗ ವಿಶ್ವ ನಾಯಕರ ಪಟ್ಟಿಯಲ್ಲಿ ಕಾಣಸಿಗುತ್ತಾರೆ.

Kamala Harris

ಕಮಲಾ ಹ್ಯಾರಿಸ್:
ಭಾರತ ಮತ್ತು ಜಮೈಕಾದಿಂದ ವಲಸೆ ಬಂದ ಪೋಷಕರಿಗೆ ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ಪ್ರಸ್ತುತ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris), ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿ ವಿಶ್ವ ನಾಯಕರ ಪಟ್ಟಿಯಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *