‘ಗೂಢಚಾರಿ-2’ ಅಡ್ಡಾದಲ್ಲಿ ಬ್ರಿಟನ್ ಇಂಡಿಯನ್ ಬೆಡಗಿ ಬನಿತಾ ಸಂಧು

Public TV
1 Min Read

ಡವಿ ಶೇಷ್ (Adavi Shesh) ನಟಿಸುತ್ತಿರುವ ಗೂಢಚಾರಿ 2 (Goodchari 2) ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಈಗಾಗಲೇ ಅಡವಿ ಶೂಟಿಂಗ್ ಅಖಾಡಕ್ಕೆ ಧುಮುಕಿದ್ದು, ಶೀಘ್ರದಲ್ಲೇ ನಾಯಕಿ ಬನಿತಾ ಸಂಧು (Banita Sandhu) ಕೂಡ ಎಂಟ್ರಿ ಕೊಡಲಿದ್ದಾರೆ.

ಗುಜರಾತ್ ನ ಭುಜ್ ನಲ್ಲಿ ನಲ್ಲಿ ಗೂಢಚಾರಿ ಸೀಕ್ವೆಲ್ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ. ಶೂಟಿಂಗ್ ಅಖಾಡಕ್ಕೆ ಶೀಘ್ರದಲ್ಲೇ ಬನಿತಾ ಕೂಡ ಎಂಟ್ರಿ ಕೊಡಲಿದ್ದಾರೆ. ಅಂದಹಾಗೇ ಇದು ಬನೀತಾ ಸಂಧುಗೆ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.

‘ಅಕ್ಟೋಬರ್’, ‘ಸರ್ದಾರ್ ಉದಾಮ್’, ‘ಆದಿತ್ಯ ವರ್ಮಾ’ ಸೇರಿದಂತೆ ಹಲವು ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ ಅನುಭವ ಬನಿತಾ ಸಂಧು ಅವರಿಗಿದೆ.  ಗೂಢಚಾರಿ 2 ಸಿನಿಮಾದಲ್ಲಿ ಅವರ ಪಾತ್ರ ಬಹಳ ವಿಭಿನ್ನವಾಗಿದ್ದು, ಹೊಸ ಅವತಾರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಮೊದಲೇ ಹೇಳಿದಂತೆ ‘ಗೂಢಚಾರಿ 2’ ಸಿನಿಮಾ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ಅಡಿವಿ ಶೇಷ್ ಅಭಿನಯಿಸಿದ್ದ ‘ಮೇಜರ್’ ಚಿತ್ರಕ್ಕೆ ಸಂಕಲನಕಾರ ಆಗಿದ್ದ ವಿನಯ್ ಕುಮಾರ್ ಸಿರಿಗಿನೀದಿ ಅವರು ‘ಗೂಢಚಾರಿ 2’ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

ಗೂಢಚಾರಿ ಸೀಕ್ವೆಲ್ ನಲ್ಲಿ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅಡಿವಿ ಶೇಷ್ ಅವರೇ ಕಥೆ ಬರೆದಿದ್ದಾರೆ. ‘ಕಾರ್ತೀಕೇಯ 2’, ‘ಮೇಜರ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಣ ಸಂಸ್ಥೆಗಳು ‘ಗೂಢಚಾರಿ 2’ ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ. ‘ಪೀಪಲ್ ಮೀಡಿಯಾ ಫ್ಯಾಕ್ಟರಿ’, ‘ಅಭಿಷೇಕ್ ಅಗರ್ವಾಲ್ ಆರ್ಟ್ಸ್’ ಹಾಗೂ ‘ಎ.ಕೆ. ಎಂಟರ್ಟೇನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್’ ಬ್ಯಾನರ್ ಮೂಲಕ ಟಿ.ಜಿ. ವಿಶ್ವಪ್ರಸಾದ್ ಹಾಗೂ ಅಭಿಷೇಕ್ ಅಗರ್ವಾಲ್ ಅವರು ಜೊತೆಯಾಗಿ ‘ಗೂಢಚಾರಿ 2’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

Share This Article