ಹಾವೇರಿ | 1.5 ಲಕ್ಷ ಮೌಲ್ಯದ ಬ್ರಿಜ್ಡ್ ಕಂ ಬ್ಯಾರೇಜ್ ಗೇಟ್ ಕಳ್ಳತನ – ಅನ್ನದಾತರು ಕಂಗಾಲು

Public TV
1 Min Read

ಹಾವೇರಿ: ಕಳ್ಳರ ಗ್ಯಾಂಗೊಂದು ಹಾವೇರಿಯಲ್ಲಿ (Haveri) ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿರೋ 1.5 ಲಕ್ಷ ಮೌಲ್ಯದ ಬ್ಯಾರೇಜ್ ಗೇಟ್‌ಗಳನ್ನ ಮತ್ತೆ ಕಳ್ಳತನ ಮಾಡಿದೆ.

ಇದು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕೋಳೂರು ಗ್ರಾಮದ ಬಳಿ ಇರೋ ವರದಾ ನದಿಯ ಬ್ಯಾರೇಜ್. ಕಳೆದ 8 ತಿಂಗಳಿನಿಂದ ನಿರಂತರ‌ ಮಳೆಯಾಗಿದೆ. ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಬ್ರಿಜ್ಡ್ ಕಂ ಬ್ಯಾರೇಜ್‌ಗೆ ಅಳವಡಿಸಿದ್ದ ಗೇಟ್‌ಗಳನ್ನು ಗೋದಾಮಿನಲ್ಲಿ ಇಡುತ್ತಾರೆ. ಆದರೆ ಈಗ ಖದೀಮರ ಗ್ಯಾಂಗ್ ರಾತ್ರೋರಾತ್ರಿ 98 ಗೇಟ್‌ಗಳನ್ನು ಕಳ್ಳತನ ಮಾಡಿದೆ. ಸುಮಾರು ಒಂದೂವರೆ ಲಕ್ಷ ಮೌಲ್ಯದ ಗೇಟ್‌ಗಳ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.ಇದನ್ನೂ ಓದಿ: ಜಾತಿಗಣತಿ ಸಮೀಕ್ಷೆ ತಡೆ ಕೋರಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

ಜಿಲ್ಲೆಯಲ್ಲಿ ಐದಾರು ಬ್ರಿಜ್ಡ್ ಕಂ ಬ್ಯಾರೇಜ್‌ಗಳ ಗೇಟ್‌ಗಳನ್ನು ಕಳ್ಳತನ ಮಾಡಿದ್ದಾರೆ. ಇದರಿಂದ ಬೇಸಿಗೆಯಲ್ಲಿ ಹಿಂಗಾರು ಬೆಳೆಗಳನ್ನ ಬೆಳೆಯುವುದು ಹೇಗೆ. ಕಳ್ಳತನವಾಗಿ ಎರಡು ತಿಂಗಳು ಕಳೆದರೂ ಕಳ್ಳರು ಮಾತ್ರ ಪತ್ತೆಯಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೇಷಗಿರಿ ಗ್ರಾಮದಲ್ಲೂ ವರದಾ ನದಿ ಬ್ಯಾರೇಜ್‌ಗೆ ಅಳವಡಿಸುವ 213 ಗೇಟ್‌ಗಳನ್ನು ರಾತ್ರೋ ರಾತ್ರಿ ಕಳ್ಳತನ ಮಾಡಲಾಗಿತ್ತು. ಅಕ್ಕೂರು ,ಕೋಡಬಾಳ ಮತ್ತು ಕುಸನೂರು ಸೇರಿದಂತೆ ಹಲವು ಕಡೆಯ ಬ್ರಿಜ್ಡ್ ಕಂ ಬ್ಯಾರೇಜ್ ನ ಗೇಟ್ ಕಳ್ಳತನ ಮಾಡಿದ್ದಾರೆ. ಒಂದಾದ ನಂತರ ಒಂದು ಕಡೆ ಕಳ್ಳತನ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈವರೆಗೆ ಯಾವುದೇ ಕಳ್ಳರ ಪತ್ತೆಯಾಗಿಲ್ಲ.

ಕಳೆದ‌ ಎಂಟು ತಿಂಗಳಿನಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ ಹಲವು ಕಡೆ ಬ್ಯಾರೇಜ್ ಗೇಟ್ ಕಳ್ಳತನ ಆಗಿವೆ. ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಗೋದಾಮು ಕಾಯುವ ವ್ಯಕ್ತಿಯನ್ನ ನೇಮಕ ಮಾಡಬೇಕು. ಯಾರೋ ಖದೀಮರು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ. ಕೂಡಲೇ ಪೊಲೀಸರು ಖದೀಮರನ್ನ ಪತ್ತೆ ಮಾಡಬೇಕು‌. ಇಲ್ಲಾವಾದರೆ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುತ್ತದೆ ಎಂದು ರೈತರು ಹೇಳಿದ್ದಾರೆ.ಇದನ್ನೂ ಓದಿ: ಕಂದಕಕ್ಕೆ ಉರುಳಿದ ಸಾರಿಗೆ ಬಸ್‌ – 16 ಮಂದಿಗೆ ಗಾಯ

Share This Article