ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಹರಿಯುತ್ತಿದ್ದಂತೆ ಕುಸಿದ ಸೇತುವೆ – ರೈತರ ಪರದಾಟ

Public TV
1 Min Read

ದಾವಣಗೆರೆ: ಭದ್ರಾ ಡ್ಯಾಂನಿಂದ (Bhadra Dam) ಕಾಲುವೆಗೆ ನೀರು ಬಿಟ್ಟ ವೇಳೆಯೇ ಸೇತುವೆ (Bridge) ಕುಸಿದ ಘಟನೆ ದಾವಣಗೆರೆ (Davanagere) ತಾಲೂಕಿನ ಕುರ್ಕಿ ಗ್ರಾಮದ ಬಳಿ ನಡೆದಿದೆ.

ಕಳೆದ ಕೆಲ ತಿಂಗಳ ಹಿಂದೆ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ನೀರು ಬಿಡುತ್ತಿದ್ದಂತೆ ಈಗ ಸೇತುವೆ (Bridge collapse) ಕುಸಿದಿದೆ. ಇದ್ದಕ್ಕಿದ್ದಂತೆ ಸೇತುವೆ ಕುಸಿದಿದ್ದರಿಂದ ರೈತರು ಜಮೀನಿಗೆ ಹೋಗಲು ಪರದಾಡುತ್ತಿದ್ದಾರೆ. ಸೇತುವೆ ಕುಸಿದಿದ್ದರಿಂದ ಜಮೀನಿಗೆ ತೆರಳಲು 10 ಕಿಮೀ ದೂರ ಕ್ರಮಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ರೈತರು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಚಶೋತಿಯಲ್ಲಿ ಮೇಘಸ್ಫೋಟ – ದಿಢೀರ್‌ ಪ್ರವಾಹಕ್ಕೆ 10 ಸಾವು

ಭತ್ತದ ಬೆಳೆಗೆ ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಬಿಡಲಾಗಿತ್ತು. ಈ ವೇಳೆ ಸೇತುವೆ ಕುಸಿದಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರಿಗೆ ತೀವ್ರ ಸಮಸ್ಯೆ ಎದುರಾಗಿದೆ. ತಕ್ಷಣ ಸೇತುವೆ ನಿರ್ಮಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜಣ್ಣ ವಜಾ ಹೈಕಮಾಂಡ್ ತೀರ್ಮಾನ, ಇದರಲ್ಲಿ ರಾಜ್ಯ ನಾಯಕರ ಪಾತ್ರ ಇಲ್ಲ: ಇಕ್ಬಾಲ್ ಹುಸೇನ್

Share This Article