ಫಸ್ಟ್ ನೈಟಿನಲ್ಲೇ ವರ, ಕುಟುಂಬಕ್ಕೆ ಶಾಕ್ ಕೊಟ್ಟ ವಧು!

Public TV
2 Min Read

ಪಾಟ್ನಾ: ಮೊದಲ ರಾತ್ರಿಯಂದೇ ನವವಿವಾಹಿತೆ ಪರಾರಿಯಾಗಿ ಕುಟುಂಬದವರಿಗೆ ಶಾಕ್ ಕೊಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಈ ಘಟನೆಯು ಬಿಹಾರದ ಭಬುವಾದಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ. ಸಂಗೀತಾ ಕುಮಾರಿ ಪರಾರಿಯಾಗಿರುವ ನವವಿವಾಹಿತೆ. ಈಕೆ ಮದುವೆಯಾಗಿ ಮೊದಲ ರಾತ್ರಿಯಂದೇ ಆಭರಣಗಳು ಸೇರಿದಂತೆ 20 ಸಾವಿರ ರೂ. ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ.

ಇತ್ತ ನಾಪತ್ತೆಯಾದ ವಧುನಿಂದ ಆಘಾತಗೊಂಡ ವರ ಮತ್ತು ವರನ ತಾಯಿ, ಹುಡುಗಿ ಮತ್ತು ಹುಡುಗಿಯ ಕುಟುಂಬದವರು ನಮಗೆ ಮೋಸ ಮಾಡಿ ಮದುವೆ ಮಾಡಿಕೊಟ್ಟಿದ್ದಾರೆ. ಅವರು ನಮಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈಗ ನಮಗೆ ನ್ಯಾಯ ಬೇಕು ಎಂದು ಪೊಲೀಸ್ ಮೆಟ್ಟಿಲೀರಿದ್ದಾರೆ.

ಘಟನೆಯ ವಿವರ?:
ವರ ತಾಯಿ ತನ್ನ ಮಗ ಪಂಕಜ್ ಕುಮಾರ್ ಗೆ ಹುಡುಗಿಯನ್ನು ಹುಡುಕುತ್ತಿದ್ದರು. ಅದೇ ರೀತಿ ಸಂಗೀತಾ ಕುಮಾರಿಗೂ ಹುಡುಗನನ್ನು ಹುಡುಕುತ್ತಿದ್ದರು. ಬಳಿಕ ಅವರ ಸಂಬಂಧಿಕರು ಸಂಗೀತಾ ಸಂಬಂಧವನ್ನು ತಂದಿದ್ದಾರೆ. ಬಳಿಕ ಎರಡು ಕುಟುಂಬದವರು ಒಪ್ಪಿ ಸೋಮವಾರ ಭಬುವಾ ಹೊರವಲಯದಲ್ಲಿರುವ ಒಂದು ದೇವಾಲಯದಲ್ಲಿ ಇಬ್ಬರಿಗೂ ಸರಳವಾಗಿ ಮದುವೆ ಮಾಡಿದ್ದಾರೆ.

ಸೋಮವಾರ ರಾತ್ರಿಯೇ ಕುಟುಂಬದವರು ಮೊದಲ ರಾತ್ರಿಗೆ ಸಿದ್ಧಪಡಿಸಿದ್ದಾರೆ. ಆಗ ಸಂಗೀತಾ ತನಗೆ ಮುಟ್ಟಾಗಿದೆ ಅಂತ ಕಾರ್ಯಕ್ರಮವನ್ನು ರದ್ದು ಮಾಡಿಸಿದ್ದಾಳೆ. ಬಳಿಕ ತನಗೆ ಬೇರೆ ರೂಮ್ ಬೇಕೆಂದು ಕೇಳಿ ಒಬ್ಬಳೇ ಕೊಠಡಿಯಲ್ಲಿ ಮಲಗಿದ್ದಾಳೆ. ರಾತ್ರಿ ಎಲ್ಲರೂ ಮಲಗಿಕೊಳ್ಳುವರೆಗೂ ಕಾದು ಬಳಿ ಆಭರಣ, ಹಣ, ಮೌಲ್ಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾಳೆ.

ಮಂಗಳವಾರ ಬೆಳಗ್ಗೆ ಸಂಗೀತಾಳನ್ನು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಇತ್ತ ಹಣ, ಚಿನ್ನ ಮತ್ತು ವಸ್ತುಗಳು ಕಾಣಲಿಲ್ಲ. ಕೊನೆಗೆ ಎಲ್ಲವನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ತಿಳಿದು ಪಂಕಜ್ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ವರ ಪಂಕಜ್ ಮತ್ತು ತಾಯಿ ನೀಡಿದ ದೂರಿನ ಆಧಾರದ ಮೇಲೆ ನಾವು ದೂರು ಸ್ವೀಕರಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ವರನ ಕುಟುಂಬದವರು ವಧು ಸೇರಿದಂತೆ ಹುಡುಗಿಯನ್ನು ತೋರಿಸಿದ ಸಂಬಂಧಿಕರ ಮೇಲೆ ದೂರು ನೀಡಿದ್ದಾರೆ. ಸದ್ಯಕ್ಕೆ ಪರಾರಿಯಾಗಿರುವ ಹುಡುಗಿಯನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸತ್ಯೇಂದ್ರ ರಾಮ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *