ಹಾರವನ್ನು ಕುತ್ತಿಗೆಗೆ ಎಸೆದ ವರ- ಮದುವೆ ಕ್ಯಾನ್ಸಲ್‌ ಮಾಡಿದ ವಧು

Public TV
1 Min Read

ಲಕ್ನೋ: ಇತ್ತೀಚಿನ ಮದುವೆಗಳು ಮಂಟಪಕ್ಕೆ ಬಂದು ಮುರಿದು ಬೀಳುವುದು ಹೆಚ್ಚಾಗಿದೆ. ಸಿನಿಮಾ ಸ್ಟೈಲ್‍ನಲ್ಲಿ ಮದುವೆ ನಡೆದ ಉದಾಹರಣೆಗಳಿವೆ. ಆದರೆ ಇಲ್ಲೊಂದು ಜೋಡಿ ಕುತ್ತಿಗೆಗೆ ಹಾರ ಹಾಕುವ ಬದಲಾಗಿ, ಎಸೆದಿದ್ದಾನೆ ಎಂದು ವಧು ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ.

ಸಂಪ್ರದಾಯದಂತೆ ವರನು, ವಧು ಕುತ್ತಿಗೆಗೆ ಹಾರವನ್ನು ಹಾಕುವ ಬದಲು ಎಸೆದಿದ್ದಾನೆ. ವರನ ವರ್ತನೆಯಿಂದ ಅಸಮಾಧಾನಗೊಂಡ ವಧು, ಅವನನ್ನು ಮದುವೆಯಾಗಲು ನಿರಾಕರಿಸಿದಳು.  ಈ ಘಟನೆ ಬಿದುನಾ ಪೊಲೀಸ್ ವೃತ್ತದ ವ್ಯಾಪ್ತಿಯ ನವೀನ್ ಬಸ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

 

ವಧು ಆತನೊಂದಿಗೆ ಮದುವೆ ಬೇಡ ಎಂದು ಹೇಳಿದ್ದಾಳೆ. ಈ ವೇಳೆ ಎರಡೂ ಕುಟುಂಬಗಳ ನಡುವೆ ಜಗಳವಾಗಿದೆ. ಮದುವೆ ಮುಂದುವರಿಸಲು ವಧುವಿನ ಮನವೊಲಿಸಲು ಕುಟುಂಬದವರು ಪ್ರಯತ್ನಿಸಿದರು. ಆದರೆ ವಧು ಈ ವಿಚಾರವಾಗಿ ಯಾರ ಮಾತನ್ನೂ ಕೇಳಿಲ್ಲ. ಕೊನೆಗೆ ಈ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. 2 ಕುಟುಂಬಗಳ ನಡುವೆ ರಾಜಿ ಮಾಡಲು ಪ್ರಯತ್ನಿಸಿದ್ದಾರೆ. ಸಾಧ್ಯವಾಗದೇ ಇದ್ದಾಗ ಎರಡು ಕುಟುಂಬಗಳು ವಿನಿಮಯ ಮಾಡಿಕೊಂಡ ಉಡುಗೊರೆಗಳನ್ನು ಹಿಂದಿರುಗಿಸಿ, ಮದುವೆ ಮುರಿದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ

ಮದುವೆ ಮಂಟಪದವರೆಗೆ ಬಂದು ಮುರಿದುಕೊಂಡು ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ ತಮಿಳುನಾಡಿನ ಕಡಲೂರಿನಲ್ಲಿ, ಸೋದರ ಸಂಬಂಧಿಯೊಂದಿಗೆ ವಧು ನೃತ್ಯ ಮಾಡಿದ್ದಕ್ಕಾಗಿ ವರನು ಆಕೆಯ ಕೆನ್ನೆಗೆ ಹೊಡೆದಿದ್ದನು, ನಂತರ ಈ ವಿಚಾರವಾಗಿ ಕೋಪಗೊಂಡ ವಧು ಅದೇ ಮುಹೂರ್ತದಲ್ಲಿ ಇನ್ನೊಬ್ಬನನ್ನು ಮದುವೆಯಾಗಿದ್ದಳು.

Share This Article
Leave a Comment

Leave a Reply

Your email address will not be published. Required fields are marked *