ಅಸ್ತಮಾ, ಉಸಿರಾಟದ ತೊಂದರೆ ಇದೆಯೇ? ಹಾಗಾದ್ರೆ ಈ ವ್ಯಾಯಾಮಗಳನ್ನು ಮಾಡಿ

Public TV
2 Min Read

ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಅಸ್ತಮಾ (Asthma) ಸಮಸ್ಯೆ ಕಾಡುತ್ತದೆ. ಕಲುಷಿತ ವಾತಾವರಣ ಹಾಗೂ ಗಾಳಿಯಿಂದ ಹಬ್ಬುವ ಕಾಯಿಲೆ ಇದಾಗಿದೆ. ಅಸ್ತಮಾ, ಉಸಿರಾಟದ ತೊಂದರೆ (breathing problems) ಇರುವವರು, ಅದರ ನಿವಾರಣೆಗೆ ನಾನಾ ಕಸರತ್ತು ಮಾಡಿರುತ್ತಾರೆ. ಆದರೆ ಯಾವುದೇ ಪ್ರಯೋಜನವಾಗಿರುವುದಿಲ್ಲ.

ಅಸ್ತಮಾ, ಉಸಿರಾಟದ ತೊಂದರೆ ಇರುವವರು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಕೆಲವು ಜೀವನಶೈಲಿಯನ್ನು ಬದಲಾಯಿಸುವ ಮೂಲಕ ನಿಮ್ಮ ಶ್ವಾಸಕೋಶವನ್ನು ಅನಾರೋಗ್ಯದಿಂದ ಕಾಪಾಡಬಹುದು. ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಹೆಚ್ಚಿಸಬಹುದು. ಪ್ರತಿದಿನ ಈ ವ್ಯಾಯಾಮಗಳನ್ನು ಮಾಡಿದರೆ ಖಂಡಿತ ಅಸ್ತಮಾ, ಉಸಿರಾಟದ ಸಮಸ್ಯೆ ದೂರವಾಗುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

1) ಭ್ರಮರಿ ಪ್ರಾಣಾಯಾಮ
ಈ ಪ್ರಾಣಾಯಾಮ ಉಸಿರಾಟದ ವ್ಯವಸ್ಥೆಯನ್ನು ವೃದ್ಧಿಸುವ ಯೋಗಾಭ್ಯಾಸವಾಗಿದೆ. ನೈಟ್ರಿಕ್‌ ಆಕ್ಸೈಡ್‌ ಅಂಶವನ್ನು ಬಿಡುಗಡೆ ಮಾಡುವ ಮೂಲಕ ಶ್ವಾಸಕೋಶದ ಸೋಂಕನ್ನು ದೂರ ಮಾಡಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಬಹಳ ವೇಗವಾಗಿ ವೈರಸ್‌ ಸೋಂಕಿನ ಸಂತತಿಯನ್ನು ತಗ್ಗಿಸುತ್ತದೆ. ನಿತ್ಯ 2ರಿಂದ 3 ಬಾರಿ ಸುಮಾರು ಹತ್ತು ನಿಮಿಷಗಳ ಕಾಲ ಇದನ್ನು ಅಭ್ಯಾಸ ಮಾಡುವುದು ಒಳ್ಳೆಯದು.

2) ಸೂರ್ಯ ನಾಡಿ ಶೋಧನ
ಪ್ರಾಚೀನ ಯೋಗ ತಂತ್ರವಾಗಿರುವ ಇದು, ನಮ್ಮ ದೇಹದಲ್ಲಿರುವ ಸೂರ್ಯ ನಾಡಿಯನ್ನು ಸಕ್ರಿಯವಾಗಿರುಸುತ್ತದೆ. ನಮ್ಮ ದೇಹದೊಳಗೆ ಕಾರ್ಯನಿರ್ವಹಿಸುವ ಸೂರ್ಯ ನಾಡಿ ಈ ಚಟುವಟಿಕೆಯಿಂದ ಪುನಶ್ಚೇತನಗೊಳ್ಳುತ್ತದೆ. ಇದು ದೇಹದ ಆಂತರಿಕ ವ್ಯವಸ್ಥೆಯನ್ನು ಉತ್ತೇಜಿಸುವ ಉಸಿರಾಟದ ಅಭ್ಯಾಸಗಳನ್ನು ಒಳಗೊಳ್ಳುತ್ತದೆ. ಸೂರ್ಯ ನಾಡಿಯನ್ನು ಶುದ್ಧೀಕರಿಸಲು ಮತ್ತು ಶಕ್ತಿಯುತಗೊಳಿಸಲು ಈ ಯೋಗಾಭ್ಯಾಸ ಸಹಾಯ ಮಾಡುತ್ತದೆ.

3) ಚಂದ್ರ ನಾಡಿ ಶೋಧನ
ಚಂದ್ರ ನಾಡಿ ಶೋಧನ ಯೋಗಾಭ್ಯಾಸವು ನಮ್ಮ ದೇಹದ ಎಡಭಾಗದಲ್ಲಿ ಹಾದುಹೋಗುವ ಚಂದ್ರ ನಾಡಿಯನ್ನು ಸಕ್ರಿಯಗೊಳಿಸಲು ಸಹಕಾರಿಯಾಗಿದೆ. ನಮ್ಮ ದೇಹದೊಳಗೆ ಕಾರ್ಯನಿರ್ವಹಿಸುವ ಚಂದ್ರ ನಾಡಿಯು ಈ ಚಟುವಟಿಕೆಯಿಂದ ಪುನಶ್ಚೇತನಗೊಳ್ಳುತ್ತದೆ. ಈ ಯೋಗಾಭ್ಯಾಸ ಮಾಡುವುದರಿಂದ ಚಂದ್ರ ನಾಡಿಯನ್ನು ಶುದ್ಧೀಕರಿಸಲು ಮತ್ತು ಶಕ್ತಿಯುತಗೊಳಿಸಲು ಸಹಾಯವಾಗುತ್ತದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

4) ಭಸ್ತ್ರಿಕಾ ಪ್ರಾಣಾಯಾಮ
ಈ ಪ್ರಾಣಾಯಾಮ ಅಭ್ಯಾಸದಿಂದ ಮೂಗಿನ ಹೊಳ್ಳೆಗಳು ಶುದ್ಧಗೊಳ್ಳುತ್ತವೆ. ನಾಭಿಯ ಅವಯವಗಳು ಉತ್ತೇಜನಗೊಳ್ಳುತ್ತವೆ. ಮೆದುಳಿನ ಭಾಗ ಮತ್ತು ನರಮಂಡಲಗಳು ಚುರುಕುಗೊಳ್ಳುತ್ತವೆ. ಕಿವಿ, ಮೂಗು, ಕಣ್ಣಿನ ದೋಷ ಇರುವವರು ಮತ್ತು ಗರ್ಭಿಣಿಯರು ಈ ಪ್ರಾಣಾಯಾಮ ಮಾಡಬಾರದು.

5) ಕಪಾಲಬಾತಿ ಪ್ರಾಣಾಯಾಮ
ಅನ್ನನಾಳ, ಶ್ವಾಸನಾಳಗಳನ್ನು ಶುಚಿಗೊಳಿಸಿ ಶ್ವಾಸಕ್ಕೆ ಸಂಬಂಧಿಸಿದ ರೋಗಗಳನ್ನು ನಿರ್ಮೂಲಗೊಳಿಸುತ್ತದೆ. ಮೂಗಿಗೆ ಸಂಬಂಧಿಸಿದ ಸಮಸ್ಯೆಗಳು, ಉದರಕ್ಕೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತವೆ. ಗಂಟಲು ಶುದ್ಧಿಯಾಗುತ್ತದೆ. ಶರೀರದ ಶಾಖ ಹೆಚ್ಚಾಗಿ ಶೀತಕ್ಕೆ ಸಂಬಂಧಿಸಿದ ರೋಗಗಳೂ ಗುಣವಾಗುತ್ತವೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *