Breaking- ಕೊನೆಗೂ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟ ವರ್ತೂರು ಸಂತೋಷ್

Public TV
1 Min Read

ಅಂದುಕೊಂಡಂತೆ ಆಗಿದ್ದರೆ ನಿನ್ನೆಯೇ ವರ್ತೂರು ಸಂತೋಷ್ (Varthur  Santhosh) ಬಿಗ್ ಬಾಸ್ (Bigg Boss Kannada) ಮನೆ ಪ್ರವೇಶ ಮಾಡಬೇಕಿತ್ತು. ಜೈಲಿನಿಂದ ಬಿಡುಗಡೆಯಾಗಿ 48 ಗಂಟೆ ಸಮೀಪಿಸಿದರೂ ಇನ್ನೂ ಸಂತೋಷ್ ದೊಡ್ಮನೆಗೆ ಎಂಟ್ರಿಕೊಟ್ಟಿರಲಿಲ್ಲ. ಕೊನೆಗೂ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ ವರ್ತುರ್ ಸಂತೋಷ್. ಆ ದೃಶ್ಯಾವಳಿಗಳನ್ನು ಸದ್ಯ JioCinema ವೀಕ್ಷಿಸಬಹುದಾಗಿದೆ.

ಜಾಮೀನು ಸಿಕ್ಕು ಜೈಲಿನಿಂದ ಬಂದ ನಂತರ ಮಾಧ್ಯಮದವರಿಂದ ತಪ್ಪಿಸಿಕೊಂಡು ರಾತ್ರೋರಾತ್ರಿ ಹೋದವರು ಯಾಕೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿಲ್ಲ ಎನ್ನುವ ಪ್ರಶ್ನೆ ಎಲ್ಲರದ್ದಾಗಿತ್ತು. ಹಾಗಾದರೆ, ಸಂತೋಷ್ ಬಿಗ್‌ ಬಾಸ್‌ ಮನೆ ಪ್ರವೇಶ ಮಾಡೋದಿಲ್ಲವಾ?? ತಡ ಯಾಕೆ ಆಗುತ್ತಿದೆ? ಕಾನೂನು ಸಮಸ್ಯೆ ಏನಾದರು ಎದುರಾಗಿದ್ಯಾ? ಮತ್ತೆ ಮನೆ ಪ್ರವೇಶ ಮಾಡೋಕೆ ಅವರ ಮನಸ್ಥಿತಿ ಚೆನ್ನಾಗಿಲ್ಲವಾ? ಹೀಗೆ ಹತ್ತಾರು ಪ್ರಶ್ನೆಗಳು ಎದುರಾಗಿದ್ದವು. ಯಾವುದೇ ಸಮಸ್ಯೆ ಇಲ್ಲದೇ ಇದ್ದರೆ ಇನ್ನೂ ಯಾಕೆ ಅವರನ್ನು ಮನೆ ಒಳಗೆ ಕಳುಹಿಸಿಲ್ಲ ಎನ್ನುವ ಪ್ರಶ್ನೆ ಮೂಡಿತ್ತು.

ಶುಕ್ರವಾರ ರಾತ್ರಿಯೇ ಬಿಗ್ ಬಾಸ್ ಟೀಮ್ ಸಂತೋಷ್ ಅವರನ್ನ ತಮ್ಮ ಕಬ್ಜಾಗೆ ಪಡೆದಿತ್ತು. ಮೆಡಿಕಲ್ ಟೆಸ್ಟ್ ಕೂಡ ಮಾಡಿಸಲಾಗಿತ್ತು. ಮತ್ತೆ ಬಿಗ್ ಬಾಸ್ ಮನೆಗೆ ಕಳುಹಿಸುತ್ತಿರುವ ಕುರಿತು ಅವರ ಕುಟುಂಬಕ್ಕೂ ಮಾಹಿತಿ ನೀಡಿತ್ತು. ಆದರೆ, ಜಾಮೀನಿನಲ್ಲಿರುವ ಅಂಶಗಳ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿತ್ತು. ಜಾಮೀನು ಮೇಲೆ ಸಂತೋಷ್ ಜೈಲಿನಿಂದ ಹೊರ ಬಂದಿರುವ ಕಾರಣದಿಂದಾಗಿ ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಲಾಗುತ್ತಿತ್ತು.

ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಇಂದು ಮಧ್ಯಾಹ್ನದಿಂದಲೇ ಅಧಿಕೃತವಾಗಿ ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ಬಿಗ್ ಬಾಸ್ ಮನೆಯಲ್ಲಿ ಹಳ್ಳಿಕಾರ್ ದುನಿಯಾ ಇಂದಿನಿಂದ ಶುರುವಾಗಿದೆ. ಮನೆಯಲ್ಲಿ ಅವರು ಹೇಗಿರಲಿದ್ದಾರೆ ಅನ್ನೋದೋ ಸದ್ಯಕ್ಕಿರೋ ಸಸ್ಪೆನ್ಸ್.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್