ಶಾಂತಿಯುತವಾಗಿ ಬದುಕಬೇಕಾದ್ರೆ ರೊಟ್ಟಿ ತಿನ್ನಿ, ಇಲ್ಲದಿದ್ರೆ ನನ್ನ ಬುಲೆಟ್‌ಗಳು ಯಾವಾಗಲೂ ರೆಡಿ ಇರುತ್ತೆ: ಮೋದಿ ವಾರ್ನಿಂಗ್‌

Public TV
2 Min Read

– ನಮ್ಮ ರಕ್ತ ಚೆಲ್ಲಲು ಯತ್ನಿಸುವವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಲು ಭಾರತ ಸಿದ್ಧ
– ಭಯೋತ್ಪಾದನೆ ಕೈಬಿಡದಿದ್ದರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗುತ್ತೆ; ಪಾಕ್‌ಗೆ ಎಚ್ಚರಿಕೆ

ಗಾಂಧಿನಗರ (ಭುಜ್‌): ನೀವು ಶಾಂತಿಯುತ ಜೀವನ ಬಯಸಿದ್ರೆ ನಿಮ್ಮ ಬ್ರೆಡ್‌ (ರೊಟ್ಟಿ) ತಿನ್ನಿ ಇಲ್ಲದಿದ್ದರೆ ನನ್ನ ಬುಲೆಟ್‌ಗಳು ಯಾವಾಗಲೂ ಸಿದ್ಧವಾಗಿರುತ್ತೆ. ಭಯೋತ್ಪಾದನೆಯನ್ನ ಕೈಬಿಡದಿದ್ರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗುತ್ತೆ ಅಂತ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಾಕಿಸ್ತಾನ ಸರ್ಕಾರ , ಪಾಕ್‌ ಸೇನೆಗೆ (Pakistan’s Govt, Army) ದೊಡ್ಡ ಎಚ್ಚರಿಕೆ ನೀಡಿದರು.

ರೋಡ್‌ ಶೋ ಬಳಿಕ ಗುಜರಾತ್‌ನ ಭುಜ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಬ್ಬರದ ಭಾಷಣ ಮಾಡಿದರು. ಪಾಕಿಸ್ತಾನ ಸರ್ಕಾರ ಮತ್ತು ಸೇನೆಗೆ ತೀಕ್ಷ್ಣ ಎಚ್ಚರಿಕೆ ನೀಡಿದರು. ʻನೀವು ಶಾಂತಿಯುತ ಜೀವನ ಬಯಸಿದ್ರೆ ನಿಮ್ಮ ಬ್ರೆಡ್‌ (ರೊಟ್ಟಿ) ತಿಂದು ಸುಮ್ಮನಿರಿ, ಇಲ್ಲದಿದ್ರೆ ನನ್ನ ಬುಲೆಟ್‌ಗಳು (Bullet) ಯಾವಾಗಲೂ ಸಿದ್ಧವಾಗಿರುತ್ತೆ. ಯಾವುದು ಬೇಕು ನೀವೇ ಆಯ್ಕೆ ಮಾಡಿಕೊಳ್ಳಿ ಅಂತ ಪಾಕ್‌ಗೆ ವಾರ್ನಿಂಗ್‌ ಕೊಟ್ಟರು.

ಭಾಷಣದ ವೇಳೆ ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತಾ ನೀತಿ ಉಲ್ಲೇಖಿಸಿದ ಪ್ರಧಾನಿ, ʻನಮ್ಮ ರಕ್ತ ಚೆಲ್ಲಲು ಪ್ರಯತ್ನಿಸುವವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಲು ಭಾರತ ಸಿದ್ಧವಿದೆ. ಭಾರತದ ಮೇಲೆ ಕಣ್ಣುಹಾಕುವವರು ಬೆಲೆ ತೆರಲೇಬೇಕಾಗುತ್ತದೆ ಎಂದರಲ್ಲದೇ, ಭಯೋತ್ಪಾದನೆಯನ್ನ ಬುಡಸಮೇತ ನಿರ್ಮೂಲನೆ ಮಾಡುವುದು ಮತ್ತು ಮಾನವೀಯತೆಯನ್ನ ರಕ್ಷಿಸುವುದು ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು.

ಮುಂದುವರಿದು.. ಭಯೋತ್ಪಾದನೆಯನ್ನ (Terrorism ಕೈಬಿಡದಿದ್ದರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲೆಯಲ್ಲಿ ಮುಳುಗುತ್ತದೆ ಎಂದು ಪಾಕ್‌ ಜನತೆಗೆ ಮೋದಿ ಮನವಿ ಮಾಡಿದರಲ್ಲದೇ ಭಯೋತ್ಪಾದನೆ ಪಾಕಿಸ್ತಾನಕ್ಕೆ ವಿನಾಶಕಾರಿ ಎಂಬುದನ್ನ ಪಾಕ್‌ ನಾಗರಿಕರಿಗೆ ಮತ್ತೊಮ್ಮೆ ಮನವರಿಗೆ ಮಾಡಿಕೊಟ್ಟರು.

ಪ್ರವಾಸೋದ್ಯಮವು ಜನರನ್ನು ಸಂಪರ್ಕಿಸುತ್ತದೆ, ಬಹುರಾಷ್ಟ್ರೀಯ ಸ್ನೇಹವನ್ನು ಬಲಪಡಿಸುತ್ತದೆ. ಅದಕ್ಕಾಗಿಯೇ ಭಾರಯ ಪ್ರವಾಸೋದ್ಯಮದಲ್ಲಿ ನಂಬಿಕೆಯಿಡುತ್ತದೆ. ಆದ್ರೆ ಪಾಕಿಸ್ತಾನವು ಭಯೋತ್ಪಾದನೆಯನ್ನೇ ಪ್ರವಾಸೋದ್ಯಮವೆಂದು ಪರಿಗಣಿಸಿದೆ. ಇದು ಇಡೀ ವಿಶ್ವಕ್ಕೆ ಮಾರಕ ಹಾಗೂ ದೊಡ್ಡ ಬೆದರಿಕೆಯಾಗಿದೆ. ಆದ್ರೆ ಆಪರೇಷನ್‌ ಸಿಂಧೂರ ಭಯೋತ್ಪಾದನೆಯನ್ನು ಬುಡಸಮೇತ ಕೊನೆಗೊಳಿಸುವ ಧ್ಯೇಯ ಹೊಂದಿದೆ ಎಂದು ಅಬ್ಬರಿಸಿದರು.

ಇದೇ ವೇಳೆ ಕಚ್ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಮೋದಿ, ಈ ಹಿಂದೆ ಯಾವುದೇ ಮುಖ್ಯಮಂತ್ರಿ ಅಥವಾ ಕಚ್ ಸಚಿವರ ಭಾಷಣ ಪಾಕಿಸ್ತಾನದಿಂದಲೇ ಆರಂಭವಾಗುತ್ತಿತ್ತು ಮತ್ತು ಕೊನೆಗೊಳ್ಳುತ್ತಿತ್ತು. ಆದರೆ 2001 ರಲ್ಲಿ ಈ ವಿಷಯದ ಬಗ್ಗೆ ಸಮಯ ವ್ಯರ್ಥ ಮಾಡುವುದಿಲ್ಲ ಎಂದು ನಿರ್ಧರಿಸಿದೆವು. ಪಾಕಿಸ್ತಾನ ಅಸೂಯೆ ಪಡುವಂತೆ ಕಚ್‌ನ ಸಾಮರ್ಥ್ಯ ಎತ್ತಿ ತೋರಿಸುವುದಾಗಿ ಹೇಳಿದ್ದೆವು. ಅದರಂತೆ ನಾವಿಂದು ಕಚ್‌ ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಇದರ ಅಭಿವೃದ್ಧಿ ನೋಡಿ ಶತ್ರುಗಳೂ ಅಸೂಯೆಪಡುತ್ತಿದ್ದಾರೆಂದು ತಿಳಿಸಿದರು.

Share This Article