ಕನ್ನಡದಲ್ಲಿ ಟ್ವೀಟ್ ಮಾಡಿ `ಬ್ರಹ್ಮಾಸ್ತ್ರ’ ಟ್ರೈಲರ್ ಹಂಚಿಕೊಂಡ ಆಲಿಯಾ ಭಟ್

Public TV
1 Min Read

ಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರ’ ಚಿತ್ರದ ಟ್ರೈಲರ್‌ ಇದೀಗ ರಿಲೀಸ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಟ್ರೇಂಡಿಂಗ್‌ನಲ್ಲಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವ `ಬ್ರಹ್ಮಾಸ್ತ್ರ’ ಕನ್ನಡದಲ್ಲೂ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಇನ್ನು ಕನ್ನಡದಲ್ಲಿ ಟ್ವೀಟ್ ಮಾಡಿ `ಬ್ರಹ್ಮಾಸ್ತ್ರ’ ಟ್ರೈಲರ್ ಅನ್ನು ಆಲಿಯಾ ಭಟ್ ಹಂಚಿಕೊಂಡಿದ್ದಾರೆ.

ಆಯಾನ್ ಮುಖರ್ಜಿ ನಿರ್ದೇಶನದ `ಬ್ರಹ್ಮಾಸ್ತ್ರ’ ಚಿತ್ರದ ಟ್ರೈಲರ್‌ ರಿಲೀಸ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಭಿನ್ನ ಶೈಲಿಯಲ್ಲಿ ಮೂಡಿಬಂದಿರುವ `ಬ್ರಹ್ಮಾಸ್ತ್ರ’ ಪ್ರೀತಿ, ಬೆಳಕು, ಬೆಂಕಿಯ ರೂಪಗಳೇ `ಬ್ರಹ್ಮಾಸ್ತ್ರ’ ರೂಪದಲ್ಲಿ ಈ ಟ್ರೈಲರ್ ಮೂಡಿ ಬಂದಿದೆ. ಎಲ್ಲಾ ಅಸ್ತ್ರಗಳ ದೇವರು `ಬ್ರಹ್ಮಾಸ್ತ್ರ’ ಎಂಬ ಅರ್ಥದಲ್ಲಿ ಭಿನ್ನವಾಗಿ ಟ್ರೈಲರ್‌ ತೋರಿಸಲಾಗಿದೆ. `ಬ್ರಹ್ಮಾಸ್ತ್ರ’ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಚಿತ್ರ ತೆರೆ ಕಾಣಲಿದೆ. ಇದೀಗ ಕನ್ನಡದಲ್ಲೂ `ಬ್ರಹ್ಮಾಸ್ತ್ರ’ ಟ್ರೈಲರ್ ಟ್ರೇಡಿಂಗ್‌ನಲ್ಲಿದೆ. ನಟಿ ಆಲಿಯಾ, ನಮ್ಮೆಲ್ಲರ ಹೃದಯದ ಭಾಗವೇ ಬ್ರಹ್ಮಾಸ್ತ್ರ ಎಂದು ಟ್ವೀಟ್ ಮಾಡಿ, ಟ್ರೈಲರ್ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಸ್ವಯಂ ಪ್ರೇರಿತನಾಗಿ ಡ್ರಗ್ಸ್ ಸೇವಿಸಿಲ್ಲ, ಬೆಂಗಳೂರು ಪೊಲೀಸ್ ಒಳ್ಳೆಯವರು : ಬಾಲಿವುಡ್ ನಟ ಸಿದ್ಧಾಂತ್ ಕಪೂರ್

`ಬ್ರಹ್ಮಾಸ್ತ್ರ’ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬ್ರಹ್ಮಾಸ್ತ್ರ ಚಿತ್ರಕ್ಕೆ ಕನ್ನಡ ಡೈಲಾಗ್‌ಗಳನ್ನು ಕನ್ನಡದ ನಟ ಮಾಸ್ತಿ ಮಂಜು ಬರೆದಿದ್ದಾರೆ. ಇನ್ನು `ಬ್ರಹ್ಮಾಸ್ತ್ರ’ ಕನ್ನಡದಲ್ಲೂ ತೆರೆ ಕಾಣ್ತಿದ್ದು, ಟ್ರೈಲರ್ ಅನ್ನು ಕನ್ನಡದಲ್ಲಿ ಬರೆದು ಶೇರ್ ಮಾಡಿರೋದಕ್ಕೆ ಅಭಿಮಾನಿಗಳಿಂದ ಆಲಿಯಾ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆ ಕೂಡ ಕನ್ನಡದಲ್ಲಿ `ಬ್ರಹ್ಮಾಸ್ತ್ರ’ ಚಿತ್ರ ಬರಲಿದೆ ಅಂತಾ ಕನ್ನಡದಲ್ಲಿ ಟ್ವೀಟ್ ಮಾಡಿದ್ದರು. ಚಿತ್ರದಲ್ಲಿ ಅಮಿತಾಭ್ ಬಚ್ಚನ್, ನಾಗಾರ್ಜುನ್, ಮೌನಿ ರಾಯ್ ನಟಿಸಿದ್ದಾರೆ. 300 ಕೋಟಿ ವೆಚ್ಚದ ಈ ಸಿನಿಮಾ ಸೆಪ್ಟೆಂಬರ್ 9ಕ್ಕೆ ತೆರೆಗೆ ಅಪ್ಪಳಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *