ತಿರುವನಂತಪುರಂ: ಮೆದುಳು ತಿನ್ನುವ ಅಮೀಬಾ (Brain Eating Amoeba) ಎನ್ನಲಾಗುವ ಸೋಂಕು ಕೋವಿಡ್ ಬಳಿಕ ಜನರಲ್ಲಿ ಭಾರಿ ಆತಂಕ ಮೂಡಿಸಿದೆ. ನೆಗ್ಲೇರಿಯಾ ಫೌಲೆರಿ (Naegleria fowleri) ಹೆಸರಿನ ಈ ರೋಗಕ್ಕೆ ದಕ್ಷಿಣ ಕೋರಿಯಾದಲ್ಲಿ ಮೊದಲ ಬಲಿ ವರದಿಯಾಗಿತ್ತು. ಇದೀಗ ನೆರೆಯ ಕೇರಳಕ್ಕೂ ವ್ಯಾಪಿಸಿದ್ದು, ಇದೇ ವರ್ಷ 19 ಮಂದಿ ಬಲಿಯಾಗಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಕೇರಳದಲ್ಲಿ 61 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 19 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಕೆಲವರು ಇತ್ತೀಚೆಗೆ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಫಸ್ಟ್ ಟೈಂ EVM ನಲ್ಲಿ ಇನ್ಮುಂದೆ ಅಭ್ಯರ್ಥಿಗಳ ಕಲರ್ ಫೋಟೋ – ಬಿಹಾರ ವಿಧಾನಸಭಾ ಚುನಾವಣೆಯಿಂದಲೇ ಆರಂಭ
ಮೊದಲಿಗೆ ಕೋಝಿಕ್ಕೋಡ್ ಮತ್ತು ಮಲಪ್ಪುರಂನಂತಹ ಜಿಲ್ಲೆಗಳ ಕ್ಲಸ್ಟರ್ ನಲ್ಲಿ ಕಾಣಿಸಿಕೊಂಡಿದ್ದ ಸೋಂಕು ಬಳಿಕ ರಾಜ್ಯದ ವಿವಿಧೆಡೆ ವ್ಯಾಪಿಸಿದೆ. ಮೂರು ತಿಂಗಳ ಹಸುಗೂಸಿನಿಂದ 91 ವರ್ಷದ ವೃದ್ಧನವರೆಗೂ ಈ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ ಕೇರಳ ಈಗ ಗಂಭೀರ ಆರೋಗ್ಯ ಸವಾಲನ್ನು ಎದುರಿಸುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಇದನ್ನೂ ಓದಿ: ಮಗನ ಪ್ರತಿಷ್ಠೆಗೆ ಧಕ್ಕೆ| ವಿಮಾನ ದುರಂತದ ಬಗ್ಗೆ ಮತ್ತೊಂದು ತನಿಖೆ ಮಾಡಿ: ಕ್ಯಾಪ್ಟನ್ ತಂದೆ ಒತ್ತಾಯ
ಹಾಗಿದ್ರೆ ಏನಿದು ಮೆದುಳು ತಿನ್ನುವ ಅಮೀಬಾ? ಮನುಷ್ಯರಿಗೆ ಇದು ಹೇಗೆ ಹರಡುತ್ತೆ? ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತೆ? ಎಂಬುದನ್ನ ತಿಳಿಯಬೇಕಿದ್ರೆ ಮುಂದೆ ಓದಿ…
ನೆಗ್ಲೇರಿಯಾ ಫೌಲೆರಿ ಅಂದ್ರೇನು?
ವರದಿಗಳ ಪ್ರಕಾರ 1962 ರಿಂದ ಇಲ್ಲಿಯವರೆಗೆ 154 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ರೀತಿಯ ಜೀವಿ. ಇವು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಕಂಡುಬರುತ್ತವೆ. ಇದನ್ನೂ ಓದಿ:ಪ್ರಧಾನಿ ಮೋದಿಗೆ ದೊರಕಿದ 1,300ಕ್ಕೂ ಹೆಚ್ಚು ಉಡುಗೊರೆಗಳ ಇ-ಹರಾಜು
ನೆಗ್ಲೇರಿಯಾ ಫೌಲೆರಿ ಹರಡೋದು ಹೇಗೆ?
ಈ ಜೀವಿಗಳಿರುವ ನೀರು ಮನುಷ್ಯನ ಮೂಗಿನಲ್ಲಿ ಸೇರಿಕೊಂಡರೆ, ಆತ ಸೋಂಕಿಗೆ ಒಳಗಾಗುತ್ತಾನೆ. ಇದು ಮೂಗಿನ ಮೂಲಕ ಮೆದುಳನ್ನು ಪ್ರವೇಶ ಮಾಡಿ, ಮೆದುಳಿಗೆ ಹಾನಿಮಾಡಲು ಪ್ರಾರಂಭಿಸುತ್ತದೆ. ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಇದಕ್ಕೆ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.
ರೋಗದ ಲಕ್ಷಣವೇನು?
ನೆಗ್ಲೇರಿಯಾ ಫೌಲೆರಿ ಬಾಧಿತರು ತೀವ್ರವಾದ ತೆಲೆನೋವು, ವಾಂತಿ, ಗಂಟಲಿನಲ್ಲಿ ಬಿಗಿತ ಹಾಗೂ ಮಂದಗೊಂಡ ಮಾತಿನ ಲಕ್ಷಣಗಳನ್ನು ಹೊಂದುತ್ತಾರೆ. ಮನುಷ್ಯನಿಗೆ ಸೋಂಕು ತಗುಲಿದ 1-12 ದಿನಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ರೋಗದ ಲಕ್ಷಣ ತೀವ್ರವಾಗಿ ಮನುಷ್ಯನಿಗೆ ಜ್ವರ ಬರುವ ಸಾಧ್ಯತೆಯೂ ಇರುತ್ತದೆ. ಇದು ಮುಂದುವರಿದಂತೆ ವ್ಯಕ್ತಿಯಲ್ಲಿ ಸ್ನಾಯು ಸೆಳೆತಗಳು, ಭ್ರಾಂತಿ, ಕೋಮಾಗೂ ಹೋಗುವ ಸಾಧ್ಯತೆಯಿರುತ್ತದೆ. ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಕ್ತಿ 5 ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎನ್ನಲಾಗಿದೆ.