ಸಿಂಧೂರ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್‌ ಕ್ಷಿಪಣಿಯನ್ನ ಆಕ್ರಮಣಕಾರಿ ಅಸ್ತ್ರವಾಗಿ ಬಳಸಲಾಗಿತ್ತು: ಸಮೀರ್ ಕಾಮತ್

Public TV
1 Min Read

– ಸ್ವದೇಶಿ ತಂತ್ರಜ್ಞಾನ ಸಾಮರ್ಥ್ಯವನ್ನು ಕೊಂಡಾಡಿದ ಡಿಆರ್‌ಡಿಒ ಅಧ್ಯಕ್ಷ

ನವದೆಹಲಿ: ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಸ್ವದೇಶಿ ತಂತ್ರಜ್ಞಾನಗಳಾದ ಬ್ರಹ್ಮೋಸ್‌ ಕ್ಷಿಪಣಿ (BrahMos missiles), ಆಕಾಶತೀರ್‌ ರಕ್ಷಣಾ ವ್ಯವಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಧ್ಯಕ್ಷ ಸಮೀರ್ ಕಾಮತ್ ಬಣ್ಣಿಸಿದರು.

ಪುಣೆಯಲ್ಲಿ ನಡೆದ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಟೆಕ್ನಾಲಜಿ (DIAT)ನ 14 ನೇ ಘಟಿಕೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಕಾಮತ್‌ ಅವರು, ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಸ್ವದೇಶಿ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದರು. ಇದನ್ನೂ ಓದಿ: ಆಪರೇಷನ್‌ ಸಿಂಧೂರದಲ್ಲಿ ಭಾರತ ಪರಾಕ್ರಮ – ಪಾಕ್‌ನ 6 ಯುದ್ಧ ವಿಮಾನಗಳು ಉಡೀಸ್‌; ವಾಯುಪಡೆ ಮುಖ್ಯಸ್ಥ

ಸಿಂಧೂರ ಕಾರ್ಯಾಚರಣೆಯು ಭಾರತ ಸ್ವದೇಶಿ ತಂತ್ರಜ್ಞಾನದ ಮೂಲಕ ತನ್ನ ಗಡಿಗಳನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ. ಕಾರ್ಯಾಚರಣೆಗಾಗಿ ನಿಯೋಜಿಸಲಾದ ರಕ್ಷಣಾ ವ್ಯವಸ್ಥೆಗಳಲ್ಲಿ ಗಾಳಿಯಿಂದ ಗಾಳಿಗೆ ಚಿಮ್ಮುವ ಆಕಾಶ್‌ ಮಿಸೈಲ್‌, ಬ್ರಹ್ಮೋಸ್‌ ಸೂಪರ್‌ ಸಾನಿಕ್‌ ಕ್ರೂಸ್‌ ಕ್ಷಿಪಣಿ, ಡಿ4 ಡ್ರೋನ್‌ ವ್ಯವಸ್ಥೆ, AWNC ವಾಯುಗಾಮಿ ವ್ಯವಸ್ಥೆ, ಆಕಾಶತೀರ್ ಡಿಫೆನ್ಸ್‌ ಸಿಸ್ಟಮ್‌ ಸೇರಿವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆಪರೇಷನ್ ಅಖಾಲ್ | ಭದ್ರತಾ ಸಿಬ್ಬಂದಿ, ಉಗ್ರರ ನಡುವೆ ಗುಂಡಿನ ಚಕಮಕಿ – ಇಬ್ಬರು ಯೋಧರು ಹುತಾತ್ಮ

ಇದರಲ್ಲಿ ಮುಖ್ಯವಾಗಿ ಸುಖೋಯ್‌ ಮಾರ್ಕ್-1 ನಿಂದ ಉಡಾಯಿಸಲಾದ ಬ್ರಹ್ಮೋಸ್‌ ಕ್ಷಿಪಣಿಯನ್ನು ಆಕ್ರಮಣಕಾರಿ ಹಂತದಲ್ಲಿ ಬಳಸಲಾಗಿದೆ. ಇನ್ನೂ ರಕ್ಷಣಾತ್ಮಕ ಶಸ್ತ್ರಾಸ್ತ್ರ ವ್ಯವಸ್ಥೆಗಳ ವಿಷಯಕ್ಕೆ ಬಂದರೆ, ಆಕಾಶತೀರ್ ವ್ಯವಸ್ಥೆ, ಆಂಟಿ-ಡ್ರೋನ್ ವ್ಯವಸ್ಥೆ ಮತ್ತು MRSAM ಏರ್‌ ಡಿಫೆನ್ಸ್‌ ಸಿಸ್ಟಮ್‌ಗಳನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ ಎಂದು ವಿವರಿಸಿದರು.

ದೇಶದ ಕಡೆಗೆ ಬರುತ್ತಿದ್ದ ಮಿಸೈಲ್‌ ದಾಳಿಗಳನ್ನು ಗುರುತಿಸುವಲ್ಲಿ ಹಾಗೂ ಎದುರಾಳಿಗಳ ದಾಳಿಯನ್ನು ತಟಸ್ಥಗೊಳಿಸುವಲ್ಲಿ ಆಕಾಶತೀರ್‌ ಪ್ರಮುಖ ಪಾತ್ರ ವಹಿಸಿತು ಇದೆಲ್ಲ ಕಾರಣಗಳಿಂದಾಗಿ ಭಾರತ ಯಶಸ್ಸು ಕಂಡಿತು ಎಂದು ಬಣ್ಣಿಸಿದರು. ಇದನ್ನೂ ಓದಿ: ಬಿಹಾರ ಚುನಾವಣೆ ಹೊತ್ತಲ್ಲೇ 334 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದಲೇ ತೆಗೆದ ಚುನಾವಣಾ ಆಯೋಗ

Share This Article