ಆತ್ಮಹತ್ಯೆಗೆ ಶರಣಾದ ‘ಬ್ರಹ್ಮಗಂಟು’ ಸೀರಿಯಲ್‌ ನಟಿ ಶೋಭಿತಾ

Public TV
1 Min Read

ಬ್ರಹ್ಮಗಂಟು (Brahmagantu) ಸೀರಿಯಲ್‌ ನಟಿ ಶೋಭಿತಾ ಶಿವಣ್ಣ (Shobhitha Shivanna) ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ (ನ.30) ತಡರಾತ್ರಿ ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ (Suicide) ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ:ರಿಲೀಸ್‌ಗೂ ಮುನ್ನ ದಾಖಲೆ ಬರೆದ ‘ಪುಷ್ಪ 2’- ಕೆಲವೇ ಗಂಟೆಗಳಲ್ಲಿ 55 ಸಾವಿರ ಟಿಕೆಟ್ ಸೋಲ್ಡ್ ಔಟ್

2 ವರ್ಷಗಳ ಹಿಂದೆ ಹಾಸನ ಮೂಲದ ಶೋಭಿತಾ ಮದುವೆಯಾಗಿ ಹೈದರಾಬಾದ್‌ನಲ್ಲಿ ಸೆಟಲ್‌ ಆಗಿದ್ದರು. ಬಣ್ಣದ ಲೋಕದಿಂದ ಅವರು ಅಂತರ ಕಾಯ್ದುಕೊಂಡಿದ್ದರು. ಇದೀಗ ಶೋಭಿತಾ ಆತ್ಮಹತ್ಯೆಯ ಸುದ್ದಿ ಕೇಳಿ, ಕುಟುಂಬಸ್ಥರಿಗೆ ಶಾಕ್‌ ಕೊಟ್ಟಿದೆ. ಇನ್ನೂ ಮರಣೋತ್ತರ ಪರೀಕ್ಷೆಯ ನಂತರ ನಟಿಯ ಮೃತದೇಹ ಬೆಂಗಳೂರಿಗೆ ತರುವ ಸಾಧ್ಯತೆಯಿದೆ.

ಇನ್ನೂ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಟಿ ನಗು ನಗುತ್ತಾ ಇರೋ ಚೆಂದದ ಫೋಟೋವೊಂದನ್ನು ಶೇರ್‌ ಮಾಡಿದ್ದಾರೆ. ಆ ನಂತರ ಈ ಘಟನೆ ಜರುಗಿದ್ದು, ಅವರ ಆತ್ಮಹತ್ಯೆಯ ಬಗ್ಗೆ ಕಾರಣ ತಿಳಿದು ಬಂದಿಲ್ಲ.

‘ಫಸ್ಟ್‌ ಡೇ ಫಸ್ಟ್‌ ಶೋ’ ಸಿನಿಮಾದಲ್ಲಿ ಶೋಭಿತಾ ನಟಿಸಿದ್ದರು. ಜನಪ್ರಿಯ ‘ಬ್ರಹ್ಮಗಂಟು’ ಸೀರಿಯಲ್‌ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿ ಕೆಲಸ ಮಾಡಿದ್ದರು.

Share This Article