ಖಾದರ್ ಹೋದ ದೇವಾಲಯಕ್ಕೆ ಮತ್ತೊಮ್ಮೆ ಬ್ರಹ್ಮಕಲಶ ಆಗ್ಲೇಬೇಕು- ಪ್ರಭಾಕರ ಭಟ್

Public TV
1 Min Read

ಮಂಗಳೂರು: ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಇಲಾಖೆಯ ಸಚಿವ ಯು ಟಿ.ಖಾದರ್ ಒಬ್ಬ ಕೊಳಕು ಮನುಷ್ಯ. ದೇವಸ್ಥಾನಕ್ಕೆ ಆ ಖಾದರನ್ನು ಯಾಕೆ ಕರೀತೀರಾ ಅಂತ ಗೊತ್ತಿಲ್ಲ. ಯಾವ ದೇವಸ್ಥಾನಕ್ಕೆ ಖಾದರ್ ಬಂದಿದ್ದಾನೋ ಅದಕ್ಕೆ ಮತ್ತೊಂದು ಬ್ರಹ್ಮಕಲಶ ಆಗಲೇಬೇಕು ಅಂತ ಆರ್ ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಂಗಳೂರಿನ ಹೊರವಲಯದ ಕೈರಂಗಳದಲ್ಲಿ ಗೋ ಹಂತಕರ ಬಂಧನಕ್ಕೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಭೂತ ಕಟ್ಟುವ ವ್ಯಕ್ತಿ ಆತನಿಗೆ ಮಂಡೆ ಶುದ್ಧವಿಲ್ಲ. ಆತ ದನದ ಮಾಂಸ ತಿನ್ನುವ ಖಾದರ್ ಗೆ ಬೂಲ್ಯ ಕೊಟ್ಟಿದ್ದಾನಲ್ಲ. ದೇವಾಲಯದ ಒಳಗಡೆ ಬೇರೆಯವರಿಗೆ ಪ್ರವೇಶವಿಲ್ಲ. ಹೀಗಾಗಿ ದೇವಸ್ಥಾನಕ್ಕೆ ಖಾದರ್ ಬಂದಿದ್ದಾನೋ ಅದಕ್ಕೆ ಮತ್ತೊಂದು ಬ್ರಹ್ಮಕಲಶ ಆಗಲೇಬೇಕು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೊರಗಜ್ಜನ ಪ್ರಸಾದ ಸ್ವೀಕರಿಸಿದ ಸಚಿವ ಖಾದರ್ ವಿರುದ್ಧ ಮುಸ್ಲಿಮರಿಂದ ಟೀಕೆ

ಗೋ ಮಾಂಸ ಭಕ್ಷಕರನ್ನ ದೇವಸ್ಥಾನಕ್ಕೆ ಕರೆ ತರ್ತೀರಾ. ಅವ ಒಂದು ಮಾರ್ಗ ಮಾಡಿದ ಅಂತ ಆತನನ್ನು ದೇವಸ್ಥಾನಕ್ಕೆ ಕರೆಯುತ್ತೀರಾ. ನಾಚಿಕೆಯಾಗಲ್ವ. ಅವನೇನು ಅಪ್ಪನ ಹಣದಿಂದ ಮಾಡಿದ್ದಾ? ಅಲ್ಲ. ಸರ್ಕಾರಕ್ಕೆ ನಾವು ಕೊಟ್ಟ ತೆರಿಗೆಯಿಂದ ಅವರು ರಸ್ತೆ ಮಾಡಿದ್ದು. ಆದರೆ ಅದೇ ಕಾರಣಕ್ಕೆ ಅವನನ್ನು ದೇವಸ್ಥಾನದ ಒಳಗೆ ಕರೆದುಕೊಂಡು ಹೋಗ್ತೀರಲ್ವಾ? ಅನೇಕ ಜನರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ. ಆದರೆ ಖಾದರ್ ನಂಥವರಿಗೆ ಪ್ರವೇಶ ಕೊಡ್ತೀರಲ್ವಾ ನೀವು? ನನ್ನ ಪ್ರಕಾರ ಅಂಥವರಿಗೆ ನಿಷೇಧ ಮಾಡುವ ಅವಶ್ಯಕತೆ ಇದೆ ಅಂತ ಅನಿಸುತ್ತೆ. ಇದು ಹಿಂದೂ ಸಮಾಜಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ ಅಂತ ಹೇಳಿದ್ರು.

ನಮ್ಮ ದೇಶದ ಪ್ರಾಣದ-ಪ್ರಾಣ, ಉಸಿರಿನ-ಉಸಿರಾಗಿರುವಂತಹ ಹಸುವನ್ನು ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಅಂತ ಅವರು ನುಡಿದ್ರು. ಇದನ್ನೂ ಓದಿ: ಮಂಗ್ಳೂರಲ್ಲಿ ದೈವಸ್ಥಾನಕ್ಕೆ ಹೋಗಿ ನಿಂದನೆಗೊಳಗಾದ ಶಾಸಕ ಮೊಯ್ದೀನ್ ಬಾವಾ

Share This Article
Leave a Comment

Leave a Reply

Your email address will not be published. Required fields are marked *