70% ಕ್ಯಾನ್ಸರ್ ಸೆಲ್ ಕೊಲ್ಲುವ ಬ್ರೇಕಿ ಥೆರಪಿ – ಕಿದ್ವಾಯಿ ಆಸ್ಪತ್ರೆಯಲ್ಲಿ 6 ಕೋಟಿ ಮೌಲ್ಯದ ಥೆರಪಿ ಘಟಕ

2 Min Read

– ಬಡವರಿಗೆ ವರದಾನವಾದ ಹೊಸ ತಂತ್ರಜ್ಞಾನದ ಚಿಕಿತ್ಸೆ

ಬೆಂಗಳೂರು: ಕ್ಯಾನ್ಸರ್ (Cancer) ಎಂಬ ಮಹಾಮಾರಿ ಇಂದು ವಿಶ್ವಕ್ಕೆ ಕಂಟಕವಾಗಿ ಕಾಡುತ್ತಿದೆ. ಕ್ಯಾನ್ಸರ್ ರೋಗ ನಿವಾರಣೆಗೆ ಅನೇಕ ರೀತಿಯ ಚಿಕಿತ್ಸೆಗಳನ್ನ ನೀಡಲಾಗುತ್ತಿದೆ. ಆದರೆ ಬೆಂಗಳೂರಿನ ಕಿದ್ವಾಯಿ ಅಸ್ಪತ್ರೆ ದೇಶದಲ್ಲಿಯೇ ಅತ್ಯಂತ ಶ್ರೇಷ್ಠ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಥೆರಪಿ ನೀಡುವ ಮೂಲಕ ಕ್ಯಾನ್ಸರ್ ಪೀಡಿತರ ರಕ್ಷಣೆಗೆ ಮುಂದಾಗಿದೆ.

ಕ್ಯಾನ್ಸರ್ ಇಡೀ ಜಗತ್ತನ್ನೇ ಒಂದಲ್ಲ ಒಂದು ರೀತಿ ಕಾಡುತ್ತಿರುವ ಆರೋಗ್ಯದ ಪಿಡುಗು. ಇದಕ್ಕೆ ನಾನಾ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅದರಲ್ಲಿ ಬ್ರೇಕಿ ಥೆರಪಿ (Brachytherapy) ಎಂಬ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ. ಈ ಥೆರಪಿ ಒಂದು ರೀತಿಯ ಆಂತರಿಕ ವಿಕಿರಣ ಚಿಕಿತ್ಸೆಯಾಗಿದೆ. ಈ ಥೆರಪಿಯ ವಿಶೇಷ ಅಂದ್ರೆ ಕ್ಯಾನ್ಸರ್ ಟ್ಯೂಮರ್ ಅಥವಾ ಗಡ್ಡೆ ಎಲ್ಲಿದೆಯೋ ಅಲ್ಲಿ ಮಾತ್ರ ರೇಡಿಯೇಷನ್‌ಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಟ್ಯೂಬ್ ಮತ್ತು ನೀಡಲ್‌ಗಳನ್ನ ದೇಹದ ಒಳಗಿರುವ ಕ್ಯಾನ್ಸರ್ ಗಡ್ಡೆಗೆ ನಿರ್ದಿಷ್ಟವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದನ್ನ ಹೆಚ್ಚಾಗಿ ತಲೆ ಮತ್ತು ಕುತ್ತಿಗೆ, ಸ್ತನ ಕ್ಯಾನ್ಸರ್, ಗರ್ಭಕೋಶ, ಪ್ರಾಸ್ಮೆಮಟ್ ಮತ್ತು ಕಣ್ಣಿನ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದನ್ನೂ ಓದಿ: ಕೆ.ಆರ್. ನಗರ ಮಹಿಳೆಯ ಅಪಹರಣ ಕೇಸ್‌ – ಹೆಚ್‌.ಡಿ.ರೇವಣ್ಣಗೆ ಹೈಕೋರ್ಟ್‌ ಬಿಗ್‌ ಶಾಕ್‌

ಇನ್ನು ಈ ಒಂದು ಥೆರಪಿ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ, ಕಿದ್ವಾಯಿ ಬಡವರ ಪಾಲಿಗೆ ಸಂಜೀವಿನಿಯಾಗಿದೆ. ಆರೋಗ್ಯ ಕಾರ್ಡ್ ಇದ್ದವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲವಾದಲ್ಲಿ 22 ಸಾವಿರ ರೂ.ಗೆ ಚಿಕಿತ್ಸೆ ನೀಡಲಾಗುತ್ತದೆ. ಇದೇ ಥೆರಪಿ ಟ್ರೀಟ್‌ಮೆಂಟ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷ ಲಕ್ಷ ರೂ. ಕಟ್ಟಬೇಕು. ಸದ್ಯ 3 ರಿಂದ 6 ಕೋಟಿ ರೂ. ವೆಚ್ಚದ ಈ ಯಂತ್ರವನ್ನ ಕಿದ್ವಾಯಿ ಆಸ್ಪತ್ರೆ ಹೊಂದಿದ್ದು, ಒಟ್ಟು ಮೂರು ಘಟಕಗಳಿವೆ. ಈ ಮೂಲಕ ದೇಶದಲ್ಲಿಯೇ ಅತೀ ದೊಡ್ಡ ಯುನಿಟ್ ಎಂಬ ಹೆಗ್ಗಳಿಕೆಯೂ ಕಿದ್ವಾಯಿಗೆ ಇದೆ. ಇನ್ನು ಈ ಚಿಕಿತ್ಸೆಯಿಂದಾಗಿ ದೇಹದಲ್ಲಿರುವ 70%ರಷ್ಟು ಕ್ಯಾನ್ಸರ್ ಸೆಲ್‌ಗಳು ನಾಶವಾಗುತ್ತವೆ ಎಂದು ಕಿದ್ವಾಯಿ ನಿರ್ದೇಶಕರು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಇಟಲಿ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ

ಕಿದ್ವಾಯಿ ಆಸ್ಪತ್ರೆ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಒಂದಲ್ಲ ಒಂದು ಸಾಧನೆ ಮಾಡುತ್ತಲೇ ಬಂದಿದೆ. ಈಗ ಅದರ ಸಾಲಿಗೆ ಬ್ರೇಕಿ ಥೆರಪಿಯೂ ಕೂಡ ಸೇರಿಕೊಂಡಿದ್ದು, ಕ್ಯಾನ್ಸರ್ ಪೀಡಿತರಿಗೆ ಹೊಸ ಭರವಸೆಯನ್ನ ಮೂಡಿಸಿದೆ. ಇದನ್ನೂ ಓದಿ: ಇಂದಿನಿಂದ ಮೂರು ದಿನ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ

Share This Article