ಬಾಲಕನ ಬರ್ಬರ ಹತ್ಯೆ ಕೇಸ್ – ನಿಶ್ಚಿತ್ ಕೊನೇ ಕ್ಷಣದ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

Public TV
2 Min Read

ಬೆಂಗಳೂರು: ಹುಳಿಮಾವು (Hulimavu) ಬಳಿ ಬಾಲಕನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧಿಸಿದಂತೆ ಟ್ಯೂಷನ್ ಮುಗಿಸಿ ಮನೆಗೆ ವಾಪಸ್ಸಾಗ್ತಿದ್ದ ಬಾಲಕನ ಕೊನೆಯ ಸಿಸಿಟಿವಿ ದೃಶ್ಯವೊಂದು (CCTV Footage) ಲಭ್ಯವಾಗಿದೆ.

ಗುರುಮೂರ್ತಿ ಮತ್ತು ಗೋಪಾಲ ಕೃಷ್ಣ ಬಂಧಿತ ಆರೋಪಿಗಳು. ಬುಧವಾರ (ಜು.30) ಸಂಜೆ ಬಾಲಕ ನಿಶ್ಚಿತ್ ಸ್ನೇಹಿತರ ಜೊತೆ ಟ್ಯೂಷನ್ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ದೃಶ್ಯ ಸಿಸಿಟಿವಿಯೊಂದಲ್ಲಿ ಸೆರೆಯಾಗಿದೆ. ಟ್ಯೂಷನ್ ಮುಗಿಸಿಕೊಂಡು ಸ್ನೇಹಿತರ ಜೊತೆ ಹೊರಗಡೆ ಬಂದಿದ್ದ. ಬಳಿಕ ಅಲ್ಲಿಯೇ ಸ್ನೇಹಿತರ ಜೊತೆ ಮಾತಾಡುತ್ತಾ ನಿಂತಿದ್ದ. ಈ ವೇಳೆ ಆರೋಪಿ ಗುರುಮೂರ್ತಿ ಬಾಲಕನನ್ನು ಕರೆದಿದ್ದಾನೆ. ನಿಶ್ಚಿತ್ ಮನೆಯಲ್ಲಿಯೇ ಆತ ಕೆಲಸ ಮಾಡಿ ಪರಿಚಯವಿದ್ದ ಕಾರಣ ಆತ ಸಹಜವಾಗಿಯೇ ಹೋಗಿದ್ದ. ಬಳಿಕ ಆರೋಪಿಗಳು ರಾತ್ರಿ 8 ಗಂಟೆ ಸುಮಾರಿಗೆ ಕೊಲೆ ಮಾಡಿ, ಬಳಿಕ ಮೃತದೇಹ ಸುಟ್ಟು ಹಾಕಿದ್ದರು.ಇದನ್ನೂ ಓದಿ: ಕಿಡ್ನ್ಯಾಪ್‌ & ಮರ್ಡರ್ ಕೇಸ್‌ – ಬಾಲಕನ ಮನೆಯಲ್ಲಿ ಚಾಲಕನಾಗಿದ್ದವನಿಂದಲೇ ಕೃತ್ಯ

ಏನಿದು ಪ್ರಕರಣ?
ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಅಚ್ಯುತ್ ಮತ್ತು ಕವಿತಾ ದಂಪತಿಯ ಪುತ್ರ ನಿಶ್ಚಿತ್ (13) ಬುಧವಾರ ಸಂಜೆ ಟ್ಯೂಷನ್‌ಗೆ ಹೋಗಿದ್ದಾಗ ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದರು. ಸಂಜೆ 7:30ಕ್ಕೆ ಟ್ಯೂಷನ್ ಮುಗಿಸಿಕೊಂಡು ಪ್ರತಿನಿತ್ಯ ಮನೆಗೆ ವಾಪಸ್ ಬರುತ್ತಿದ್ದ ಮಗ 8 ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಇದರಿಂದ ಆತಂಕಗೊAಡ ಪೋಷಕರು ಟ್ಯೂಷನ್ ಶಿಕ್ಷಕರಿಗೆ ಕರೆ ಮಾಡಿ ವಿಚಾರಿಸಿದ್ದರು. ಆಗ ಟ್ಯೂಷನ್ ಮುಗಿಸಿಕೊಂಡು 7:30ಕ್ಕೆ ಹೋಗಿದ್ದಾಗಿ ಅವರು ಹೇಳಿದ್ದರು.ಇದನ್ನೂ ಓದಿ: ಆನೇಕಲ್ | ಟ್ಯೂಷನ್‌ಗೆ ಹೋಗ್ತಿದ್ದ ಬಾಲಕನ ಕಿಡ್ನ್ಯಾಪ್ ಮಾಡಿ ಬರ್ಬರ ಹತ್ಯೆ

ಇದರಿಂದ ಗಾಬರಿಗೊಂಡ ಪೋಷಕರು ಮಗನ ಸ್ನೇಹಿತರು ಮತ್ತು ನೆಂಟರಿಗೆ ಕರೆ ಮಾಡಿ ವಿಚಾರಿಸಿದ್ದರು. ಯಾರ ಕಡೆಯಿಂದನೂ ನಿಶ್ಚಿತ್ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಆದರೆ ನಿಶ್ಚಿತ್ ಸೈಕಲ್ ಅರೆಕೆರೆ ಸಮೀಪದ ಫ್ಯಾಮಿಲಿ ಪಾರ್ಕ್ ಬಳಿ ಪತ್ತೆ ಆಗಿತ್ತು. ಇದರಿಂದ ಗಾಬರಿಗೊಂಡ ಪೋಷಕರು ಹುಳಿಮಾವು ಪೊಲೀಸರಿಗೆ ಮಗ ಕಾಣೆ ಆಗಿರುವ ಬಗ್ಗೆ ದೂರು ನೀಡಿದ್ದರು.

ಮರುದಿನ ನಿಶ್ಚಿತ್‌ನ ತಂದೆಗೆ ಆರೋಪಿಗಳು ಕರೆ ಮಾಡಿ, 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ನಿಶ್ಚಿತ್ ತಂದೆ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಟವರ್ ಲೊಕೇಷನ್ ಟ್ರ‍್ಯಾಕ್ ಮಾಡುವಷ್ಟರಲ್ಲಿ ಬಾಲಕನ ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಬನ್ನೇರುಘಟ್ಟ ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಕುರಿಗಾಯಿಗಳು ಮೃತ ದೇಹವನ್ನು ನೋಡಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದರು.ಇದನ್ನೂ ಓದಿ: ಆನೇಕಲ್ | ಬಾಲಕ ನಿಶ್ಚಿತ್ ಬರ್ಬರ ಹತ್ಯೆ; ಆರೋಪಿಗಳ ಕಾಲಿಗೆ ಗುಂಡೇಟು, ಇಬ್ಬರು ಅರೆಸ್ಟ್

Share This Article