ಪೋಷಕರೇ ಎಚ್ಚರ: ಆಟವಾಡುವಾಗ ಆಯತಪ್ಪಿ 11ನೇ ಮಹಡಿಯಿಂದ ಬಿದ್ದು ಬಾಲಕ ಸಾವು

Public TV
1 Min Read

ಬೆಂಗಳೂರು: ಟೇರೆಸ್ ಮುಂದೆ ಮಕ್ಕಳು ಆಟವಾಡುವ ಮಕ್ಕಳ ಪೋಷಕರೇ ಎಚ್ಚರವಾಗಿರಿ. ಸ್ವಲ್ಪ ಯಾಮಾರಿದರೂ ಮಕ್ಕಳ ಪ್ರಾಣಕ್ಕೆ ಹಾನಿಯಾಗಬಹುದು. ಇದಕ್ಕೆ ಪೂರಕವೆಂಬಂತೆ ಆಟವಾಡುತ್ತಿದ್ದ 10 ವರ್ಷದ ಬಾಲಕ ಆಯತಪ್ಪಿ ಸಾವನಪ್ಪಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಗಗನ್(10) ಮೃತ ಬಾಲಕನಾಗಿದ್ದಾನೆ. ಬನಶಂಕರಿ 3ನೇ ಹಂತದಲ್ಲಿರುವ ಶೋಭಾ ವ್ಯಾಲಿ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿಈ ಘಟನೆ ನಡೆದಿದ್ದು, ನಿನ್ನೆ ಸಂಜೆ ಅಪಾರ್ಟ್ ಮೆಂಟ್‍ನ ಟರೇಸ್‍ನಲ್ಲಿ ಆಟವಾಡುವಾಗ ಆಯತಪ್ಪಿ 11ನೇ ಮಹಡಿಯಿಂದ 5ನೇ ಮಹಡಿಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಅಕ್ಟೋಬರ್ ತಿಂಗಳು ಸ್ಪೆಷಲ್ – ವಿಶೇಷ ಪೋಸ್ಟ್ ಹಂಚಿಕೊಂಡ ಮೇಘನಾ

ಮಗನನ್ನು ಒಬ್ಬನೇ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದರು. ಒಂಟಿಯಾಗಿದ್ದಾಗ ಸ್ನೇಹಿತರ ಜೊತೆ ಆಟವಾಡುವಾಗ ಆಯತಪ್ಪಿ ಕೆಳಬಿದ್ದು, ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಆರ್.ಆರ್.ನಗರ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಆದರೆ ನಿಜಕ್ಕೂ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರೋದಾ ಅಥವಾ ಬೇರೆ ಏನಾದರೂ ಅವಘಡ ಸಂಭವಿಸಿದೀಯ ಅನ್ನೋದು ತನಿಖೆಯಿಂದಷ್ಟೇ ತಿಳಿಯಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *