ಮದ್ಯದ ಹಣಕ್ಕಾಗಿ ವೃದ್ಧ ದಂಪತಿಯನ್ನೇ ಕೊಲೆಗೈದ ಮೊಮ್ಮಗ

Public TV
1 Min Read

ಲಕ್ನೋ: ಯುವಕನೊಬ್ಬ ಮದ್ಯ ಖರೀದಿಸಲು ಹಣಕ್ಕಾಗಿ ನಡೆದ ಜಗಳದಲ್ಲಿ ತನ್ನ ಅಜ್ಜ, ಅಜ್ಜಿಯನ್ನು ಕೊಂದು ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಶವಗಳನ್ನು ಬಚ್ಚಿಟ್ಟ ಘಟನೆ ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ.

ಹಿಮೇಶ್(20) ಆರೋಪಿ ಹಾಗೂ ಪ್ರೇಮಶಂಕರ್ (65) ಮತ್ತು ಭವಾನ್ ದೇವಿ (60) ಮೃತರು. ಈತ ದೆಹಲಿಯಲ್ಲಿ ತನ್ನ ಅಜ್ಜ-ಅಜ್ಜಿಯೊಂದಿಗೆ ವಾಸಿಸುತ್ತಿದ್ದನು. ಈತನಿಗೆ ಕುಡಿತದ ಚಟವಿತ್ತು.

ಉತ್ತರ ಪ್ರದೇಶದ ಬುದೌನ್‍ನ ದಾಮ್ರಿ ಗ್ರಾಮದ ಮದುವೆಯೊಂದಕ್ಕೆ ದಂಪತಿ ತಮ್ಮ ಮೊಮ್ಮಗ ಹಿಮೇಶ್ ಅವರೊಂದಿಗೆ ಬಂದಿದ್ದರು. ಅಲ್ಲಿ ಹಿಮೇಶ್ ವೃದ್ಧ ದಂಪತಿ ಜೊತೆ ಜಗಳವಾಡಿದ್ದಾನೆ. ನಂತರ ಕೋಪದಲ್ಲಿ ಅವರಿಬ್ಬನು ಹತ್ಯೆಗೈದು ಎರಡು ಪ್ರತ್ಯೇಕ ಕೊಠಡಿಯಲ್ಲಿ ಬಚ್ಚಿಟ್ಟಿದ್ದಾನೆ. ಇದನ್ನೂ ಓದಿ: ನಾವು ದಲಿತರೆಂದು ಮನೆಯ ಒಳಗೆ ಸೇರಿಸಲ್ಲ – ತಹಶೀಲ್ದಾರ್ ಮುಂದೆಯೇ ಆಶಾ ಕಾರ್ಯಕರ್ತೆ ಕಣ್ಣೀರು

CRIME 2

ಘಟನೆ ಸಂಬಂಧಿಸಿ ವೃದ್ಧ ದಂಪತಿಯ ಮೃತದೇಹಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಆ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಫೈಜ್‍ಗಂಜ್ ಪೊಲೀಸ್ ಠಾಣೆಯಲ್ಲಿ ವೃದ್ಧ ದಂಪತಿಯ ಪುತ್ರ ದೂರು ನೀಡಿದ್ದಾರೆ. ಈ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ, ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು: ಬಸವರಾಜ ಹೊರಟ್ಟಿ

Live Tv

Share This Article
Leave a Comment

Leave a Reply

Your email address will not be published. Required fields are marked *