ಕಲಬುರಗಿ: ತಾಯಿಯನ್ನು ಬಿಟ್ಟು ವಸತಿ ನಿಲಯದಲ್ಲಿ ಇರುವುದಿಲ್ಲ. ನನ್ನನ್ನು ವಸತಿ ನಿಲಯಕ್ಕೆ ಸೇರಿಸಬೇಡಿ ಎಂದು ಹಠ ಹಿಡಿದಿದ್ದ ಬಾಲಕನೊಬ್ಬ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸೇಡಂ (Sedam) ತಾಲೂಕಿನ ಮುಧೋಳ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ (Kalaburagi) ತಾಲೂಕಿನ ಪಾಣೆಗಾಂವ ಗ್ರಾಮದ ನಾರಾಯಣ ರಾಠೋಡ್ (13) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ. ರೆಸಿಡೆನ್ಸಿಯಲ್ ಶಾಲೆಯಲ್ಲಿ ಏಳನೇ ತರಗತಿಯ ಅಡ್ಮಿಶನ್ ಮಾಡಿಸಿದಕ್ಕೆ ಬಾಲಕ ಮನನೊಂದು ನೇಣಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ರೀಲ್ಸ್‌ಗಾಗಿ ಕಂಪ್ಲಿ ಸೇತುವೆಯಿಂದ ಜಿಗಿದು ಹುಚ್ಚಾಟ
ನನಗೆ ತಾಯಿಯನ್ನು ಬಿಟ್ಟು ಹಾಸ್ಟೆಲ್‌ನಲ್ಲಿ ಇರಲು ಆಗುವುದಿಲ್ಲ. ವಸತಿ ನಿಲಯಕ್ಕೆ ಹಾಕಿದರೆ ಆತ್ನಹತ್ಯೆ ಮಾಡಿಕೊಳ್ಳುವುದಾಗಿ ಬಾಲಕ ಪೋಷಕರ ಬಳಿ ಹೇಳಿದ್ದ. ಆದರೆ ಪೋಷಕರು ಬಾಲಕನ ಮನವೊಲಿಸಿ ವಸತಿ ನಿಲಯದಲ್ಲಿ ಬಿಟ್ಟು ಹೋಗಿದ್ದರು. ಇದರಿಂದ ಮನನೊಂದ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ 15 ದಿನಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವುದು ತಿಳಿದುಬಂದಿದೆ. ಇದನ್ನೂ ಓದಿ: `ನನ್ನ ಬ್ಲೌಸ್ ಒಳಗೆ ಕೈಹಾಕಿದ’ – ಆಶೀರ್ವಾದದ ನೆಪದಲ್ಲಿ ಅರ್ಚಕನಿಂದ ಮಾಡೆಲ್‌ಗೆ ಲೈಂಗಿಕ ದೌರ್ಜನ್ಯ ಆರೋಪ