ಬಾಳೆದಿಂಡು ತರಲು ಹೋದ ಬಾಲಕ ನಾಪತ್ತೆ – ಹೊಳೆ ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ

Public TV
1 Min Read

ಕೋಲಾರ: ಬಾಳೆದಿಂಡು (Banana Stem) ತರಲು ಹೋದ ಬಾಲಕ (Boy) ನಾಪತ್ತೆಯಾಗಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

ಕೋಲಾರ ತಾಲೂಕು ವಿಟ್ಟಪನಹಳ್ಳಿಯ ರಾಜಣ್ಣ ಎಂಬವರ ಮಗ ಸ್ನೇಹಿತ್ ಗೌಡ (14) ನಾಪತ್ತೆಯಾದ ಬಾಲಕ. ಸ್ನೇಹಿತ್ ಕಳೆದ 2 ದಿನಗಳ ಹಿಂದೆ ತನ್ನ ಸೈಕಲ್‌ನಲ್ಲಿ ಬಾಳೆದಿಂಡು ತರಲು ಮನೆಯಿಂದ ಹೋದವನು ಇದುವರೆಗೂ ಪತ್ತೆಯಾಗಿಲ್ಲ. ಇದನ್ನೂ ಓದಿ: Uttara Kannada | ಬೇಲಿಕೇರಿ ಬಂದರಿನಲ್ಲಿ ಬೋಟ್ ಮುಳುಗಡೆ

ಬಾಲಕನಿಗಾಗಿ ಕಳೆದ ಮೂರು ದಿನಗಳಿಂದ ಪೋಷಕರು ಮತ್ತು ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ತೋಟದ ಬಳಿ ಸೈಕಲ್ ಇದೆ, ಆದರೆ ಬಾಲಕ ಪತ್ತೆಯಾಗದಿರುವುದು ಪೋಷಕರಲ್ಲಿ ಆತಂಕವನ್ನು ಉಂಟು ಮಾಡಿದೆ. ಇದನ್ನೂ ಓದಿ: ಗ್ರೇಟರ್‌ ಬೆಂಗಳೂರು ಚುನಾವಣೆ – 50% ಮಹಿಳಾ ಮೀಸಲಾತಿ ಮಾಡೋಣ: ಡಿಕೆ ಶಿವಕುಮಾರ್‌

ಇನ್ನು ಪಕ್ಕದಲ್ಲೇ ಹೊಳೆ ನೀರು ಹರಿಯುತ್ತಿದ್ದು, ಬಾಲಕ ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: BETL ಅಧಿಕಾರಿಗಳ ನಿರ್ಲಕ್ಷ್ಯ – ಹೊಸೂರು ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್

Share This Article