ಆಟ ಆಡುವಾಗ ಬಾವಿಗೆ ಬಿದ್ದು ಬಾಲಕ ಸಾವು

Public TV
1 Min Read

ಬೀದರ್ : ಆಟ ಆಡುವಾಗ ಬಾವಿಗೆ ಬಿದ್ದು ಬಾಲಕ (Boy) ಸಾವನ್ನಪ್ಪಿದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basava Kalyana) ಪಟ್ಟಣದ ಈಶ್ವರ ಕಾಲೋನಿಯಲ್ಲಿ ನಡೆದಿದೆ

ಮನೆಯ ಪಕ್ಕದಲ್ಲಿ ಆಟ ಆಡುವ ವೇಳೆ‌ ಆಕಸ್ಮಿಕವಾಗಿ ಬಾವಿಗೆ ಬಿದ್ದು 6 ವರ್ಷದ ಶೇಖ್ ನುಸ್ತಕಿಮ್ ಅಕ್ಬರಲಿ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ. ಇದನ್ನೂ ಓದಿ:  12 ಪಾಕ್‌ ಸೈನಿಕರನ್ನು ಹತ್ಯೆ – ಅಫ್ಘಾನ್‌ ಮೇಲೆ ಮತ್ತೆ ಏರ್‌ಸ್ಟ್ರೈಕ್‌

ವಿಷಯ ತಿಳಿದು ಸ್ಥಳಕ್ಕೆ ದೌಡಾಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನ ಶವ ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಾಲಕನ ಶವ ರವಾನೆ ಮಾಡಿದ್ದಾರೆ. ಬಸವಕಲ್ಯಾಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article