-ಆಟವಾಡಿ ಒಳಬರುತ್ತಿದ್ದಂತೆ ಬಾಗಿಲು ಅಟೋ ಲಾಕ್, ಸಹಾಯಕ್ಕಾಗಿ ಬಾಲ್ಕನಿಗೆ ಬಂದಿದ್ದ ಬಾಲಕ
ಚಂಡೀಗಢ: 22ನೇ ಮಹಡಿಯ ಅಪಾರ್ಟ್ಮೆಂಟ್‌ನಿಂದ ಆಕಸ್ಮಿಕವಾಗಿ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಗುರುಗ್ರಾಮದ (Gurugram) ಸೆಕ್ಟರ್ 62ರ ಪಯೋನೀರ್ ಪ್ರೆಸಿಡಿಯಾ ಸೊಸೈಟಿಯಲ್ಲಿ ನಡೆದಿದೆ.
ಮೃತ ಬಾಲಕನನ್ನು ರುದ್ರ ತೇಜ್‌ಸಿಂಗ್ (5) ಎಂದು ಗುರುತಿಸಲಾಗಿದ್ದು, ಆಕಸ್ಮಿಕವಾಗಿ 22ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ಬಾಲಕನ ತಂದೆ ಪ್ರಕಾಶ್ ಚಂದ್ರ ಅವರು ಬಿಲ್ಡರ್ ಆಗಿದ್ದು, ತಾಯಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಾರೆ. ಈ ಹಿನ್ನೆಲೆ ಬಾಲಕ ರುದ್ರ ತೇಜ್‌ನನ್ನು ಮನೆಗೆಲಸದವರು ನೋಡಿಕೊಳ್ಳುತ್ತಿದ್ದರು.ಇದನ್ನೂ ಓದಿ: ಸಂಪುಟ ವಿಸ್ತರಣೆಯಾದರೆ ಡಿ.ಕೆ.ಶಿವಕುಮಾರ್‌ಗೆ ಪಂಗನಾಮ: ಆರ್.ಅಶೋಕ್
ಶನಿವಾರ (ನ.15) ಮೃತ ಬಾಲಕ ಮನೆಗೆಲಸದವೊಂದಿಗೆ ಸೊಸೈಟಿ ಮೈದಾನದಲ್ಲಿ ಆಟವಾಡಲು ತೆರಳಿದ್ದ. ಆಟವಾಡಿ ಫ್ಲ್ಯಾಟ್‌ಗೆ ಕೆಲಸದವರೊಂದಿಗೆ ಮರಳುತ್ತಿದ್ದ. ಈ ವೇಳೆ ಲಿಫ್ಟ್ ಓಪನ್ ಆದ ಕೂಡಲೇ ಬಾಲಕ ಮನೆಯೊಳಗೆ ಓಡಿ ಹೋಗಿದ್ದಾನೆ. ಆಗ ಅಟೋ ಲಾಕ್ ವ್ಯವಸ್ಥೆ ಹೊಂದಿದ್ದ ಬಾಗಿಲು ಮುಚ್ಚಿಕೊಂಡಿದೆ. ಇದರಿಂದ ಮನೆ ಕೆಲಸದಾಕೆ ಹೊರಗೆ ಉಳಿದುಕೊಂಡರು.
ಮನೆಯೊಳಗೆ ಒಬ್ಬನೇ ಇದ್ದ ಬಾಲಕ ಭಯಭೀತನಾಗಿ ಬಾಲ್ಕನಿಗೆ ಬಂದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಬಟ್ಟೆ ಒಣಹಾಕುವ ಸ್ಟ್ಯಾಂಡ್ ಹತ್ತಿ, ಸಹಾಯ ಕೇಳಿದ್ದಾನೆ. ಈ ಸಮಯದಲ್ಲಿ ಏಕಾಏಕಿ ನಿಯಂತ್ರಣ ತಪ್ಪಿ, ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾನೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದರು.
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಈ ಸಂಬಂಧ ದೂರು ದಾಖಲಾಗಿದೆ. ಭಾನುವಾರ (ನ.17) ಮರಣೋತ್ತರ ಪರೀಕ್ಷೆಯ ಬಾಲಕನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿ.ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ವಿರುದ್ಧ ದೂರು
