ಹೈಕಮಾಂಡ್ ನಿರ್ಧಾರವನ್ನು ನಾನು, ಡಿಕೆಶಿ ಇಬ್ಬರೂ ಪಾಲಿಸುತ್ತೇವೆ – ಮತ್ತೆ ಸಿಎಂ ಸ್ಪಷ್ಟನೆ

Public TV
1 Min Read

ಬೆಂಗಳೂರು: ಹೈಕಮಾಂಡ್ ನಿರ್ಧಾರವನ್ನು ನಾನು, ಡಿಕೆ ಶಿವಕುಮಾರ್ ಇಬ್ಬರೂ ಪಾಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪುನರುಚ್ಚರಿಸಿದ್ದಾರೆ.

ಸಿಎಂ ಬದಲಾವಣೆ ವಿಚಾರ ಎಐಸಿಸಿ, ಒಬಿಸಿ ಸಲಹಾ ಮಂಡಳಿ ಸಭೆಯ ಸುದ್ದಿಗೋಷ್ಟಿ ಸಂದರ್ಭದಲ್ಲಿ ಮತ್ತೆ ಸದ್ದು ಮಾಡಿದೆ. ಒಬಿಸಿ ನಾಯಕ ಇರುವ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗುತ್ತಾ? ಸಿಎಂ ಬದಲಾವಣೆ ಚರ್ಚೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಎಐಸಿಸಿ ಒಬಿಸಿ ಅಧ್ಯಕ್ಷ ಅನಿಲ್ ಜೈ ಹಿಂದ್ ಅವರು ತಬ್ಬಿಬ್ಬಾದರು.ಇದನ್ನೂ ಓದಿ: ನೆಕ್ಸ್ಟ್‌ ಉತ್ತರ ಕರ್ನಾಟಕದಲ್ಲಿ ಸಾಧನಾ ಸಮಾವೇಶ: ಸಚಿವ ಶಿವಾನಂದ ಪಾಟೀಲ್

ಪ್ರಶ್ನೆಗೆ ತಡವರಿಸಿದಾಗ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬಂದು ಅನಿಲ್ ಜೈ ಹಿಂದ್ ಕಿವಿಯಲ್ಲಿ ಏನೋ ಹೇಳಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನೀತಿ, ಸಿದ್ಧಾಂತ ನಿಮಗೆ ಗೊತ್ತಿದೆ, ಹಿಂದುಳಿದ ವರ್ಗಗಳ ಭಾಗೀದಾರರನ್ನ ಉತ್ತೇಜಿಸುತ್ತದೆ. ನಿಮ್ಮ ಪ್ರಶ್ನೆ ಆಶ್ಚರ್ಯ ತಂದಿದೆ ಜಾರಿಕೊಂಡರು.

ಇದೇ ವೇಳೆ ಅನಿಲ್ ಜೈ ಹಿಂದ್‌ಗೆ ಅದು ಹೈಕಮಾಂಡ್ ತೀರ್ಮಾನ ಅಂತೇಳಿ ಎಂದು ಸಿದ್ದರಾಮಯ್ಯ ಅವರೇ ಹೇಳಿಕೊಟ್ಟ ಘಟನೆಯೂ ನಡೆಯಿತು. ಬಳಿಕ ಹೈಕಮಾಂಡ್ ತೀರ್ಮಾನ ಎಂದು ಹೇಳಿ ಅವರು ಸುಮ್ಮನಾದರು. ಆದರೆ ಅಷ್ಟಕ್ಕೆ ಬಿಡದ ಸಿಎಂ ಸಿದ್ದರಾಮಯ್ಯ, ತಾವೇ ಮೈಕ್ ತೆಗೆದುಕೊಂಡು ಮತ್ತೊಮ್ಮೆ ಸ್ಪಷ್ಟನೆ ಕೊಟ್ಟರು. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾನು, ಡಿಕೆಶಿ ಇಬ್ಬರೂ ಹೈಕಮಾಂಡ್ ಏನೇ ನಿರ್ಧಾರ ಮಾಡಿದರೂ ಪಾಲಿಸುತ್ತೇವೆ ಎಂದರು.ಇದನ್ನೂ ಓದಿ:ಪ ತ್ನಿ ಬೇರೆಯವ್ರ ಜೊತೆಗಿದ್ದ ಖಾಸಗಿ ದೃಶ್ಯ ಸೆರೆ ಹಿಡಿದಿದ್ದ ಪತಿ – ಬೆದರಿಸಿ ಹತ್ತಾರು ಜನ್ರ ಜೊತೆ ಸೆಕ್ಸ್‌ಗೆ ಒತ್ತಾಯ

 

Share This Article