ತಂದೆಯಂತೆಯೇ ಬೊಮ್ಮಾಯಿ ಕೂಡ ಕೇಂದ್ರದಲ್ಲಿ ಮಂತ್ರಿಯಾಗ್ತಾರೆ: ನಿರಾಣಿ

Public TV
1 Min Read

ಹಾವೇರಿ: ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸೋದು ಮಾತ್ರವಲ್ಲ ಅವರ ತಂದೆಯಂತೆಯೇ ಬೊಮ್ಮಾಯಿ ಅವರು ಸಹ ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಂಗಾರತಿ ಮಾಡಿದಂತೆ ಹರಿಹರದಲ್ಲೂ ತುಂಗಾರತಿ ಆಗಬೇಕು ಅನ್ನುವ ನಿಟ್ಟಿನಲ್ಲಿ ಹಣಕಾಸಿನ ಸಹಾಯ ಮಾಡೋದಾಗಿ ಸಿಎಂ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಕೆಲಸಗಳು ಹರಿಹರದಲ್ಲಿ ಪ್ರಾರಂಭವಾಗಿವೆ. ಸಮಾಜದ ಮೇಲಿನ ಅಭಿಮಾನದಿಂದ ಎರಡು ಎಕರೆ ಜಮೀನು ನೀಡಿ, ಸಮುದಾಯ ಭವನಕ್ಕೆ ಸಿಎಂ ಎರಡು ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

ಈ ಭಾಗಕ್ಕೆ ಕಿತ್ತೂರು ಕರ್ನಾಟಕ ಅಂತಾ ಸಿಎಂ ಘೋಷಣೆ ಮಾಡಿದರು. ಕಿತ್ತೂರಿನಲ್ಲಿ ಮೊದಲಿನ ಅರಮನೆ ಮಾದರಿಯಲ್ಲಿ ಅರಮನೆ ನಿರ್ಮಾಣಕ್ಕೆ ಸಿಎಂ ಹಣ ನೀಡಿ, ಈಗಾಗಲೇ ೫೦ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ೨೦೧೮ರಲ್ಲಿ ಶಿಗ್ಗಾಂವಿಗೆ ಚುನಾವಣೆ ಪ್ರಚಾರಕ್ಕೆ ಬಂದಿದ್ದೆ. ಆಗಲೇ ನಾನು ನೀವು ವೋಟು ಹಾಕ್ತಿರೋದು ಬರಿ ಶಾಸಕ ಆಗೋರಿಗೆ ಅಲ್ಲ. ಅದು ಸಿಎಂ ಆಗೋರಿಗೆ ಅಂತಾ ಹೇಳಿದ್ದೆ ಅದು ನಿಜವಾಗಿದೆ ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

ಕೆಲವರು ಕರಿ ಬಾಯಿಯವರು ಏನೇನೋ ಹೇಳ್ತಾರೆ. ಬಸವರಾಜ ಅವರು ಪೂರ್ಣ ಅವಧಿಯವರೆಗೆ ಸಿಎಂ ಆಗಿರ್ತಾರೆ. ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸೋದು ಮಾತ್ರವಲ್ಲ ಅವರ ತಂದೆಯಂತೆಯೇ ಬಸವರಾಜ ಬೊಮ್ಮಾಯಿ ಕೇಂದ್ರದಲ್ಲಿ ಮಂತ್ರಿ ಆಗ್ತಾರೆ. ನಿರಾಣಿ ಏಕಾಏಕಿ ಉದ್ಯಮಿದಾರ ಆಗಿಲ್ಲ. ನಿಮ್ಮ ರೀತಿ ಕೃಷಿ ಕೆಲಸ ಮಾಡಿಕೊಂಡು ಮೇಲೆ ಬಂದವನು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *