ನವದೆಹಲಿ: ರಾಷ್ಟ್ರ ರಾಜಧಾನಿಯ 50ಕ್ಕೂ ಹೆಚ್ಚು ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ (Bomb Threat) ಮೇಲ್ ಬಂದಿದ್ದು, 25,000 ಅಮೆರಿಕನ್ ಡಾಲರ್‌ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟೆರರೈಸರ್ಸ್ 111 ಎಂಬ ಗುಂಪು ಆಂಗಿ ಪಬ್ಲಿಕ್ ಸ್ಕೂಲ್, ಫೇಯ್ತ್ ಅಕಾಡೆಮಿ, ಡೂನ್ ಪಬ್ಲಿಕ್ ಸ್ಕೂಲ್, ಸರ್ವೋದಯ ವಿದ್ಯಾಲಯ ಸೇರಿದಂತೆ ವಿವಿಧ ಶಾಲೆಗಳಿಗೆ 25,000 ಅಮೆರಿಕನ್ ಡಾಲರ್‌ಗೆ ಬೇಡಿಕೆಯಿಟ್ಟು ಬಾಂಬ್ ಬೆದರಿಕೆಯ ಮೇಲ್ ಕಳುಹಿಸಿದೆ. ಸದ್ಯ ಶಾಲೆಗಳಲ್ಲಿ ಪೊಲೀಸರು ಹಾಗೂ ಶ್ವಾನದಳ ಪರಿಶೀಲನೆ ನಡೆಸಿವೆ.ಇದನ್ನೂ ಓದಿ: ಒಳಮೀಸಲಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹ: ಮುಖ್ಯಮಂತ್ರಿ ಚಂದ್ರು
ಇದೇ ಗುಂಪು ಆ.18ರಂದು ಬಾಂಬ್ ಬೆದರಿಕೆ ಕರೆ ಮಾಡಿ, 5,000 ಅಮೆರಿಕನ್ ಡಾಲರ್‌ಗೆ ಬೇಡಿಕೆ ಇಟ್ಟಿತ್ತು. ವಿವಿಧ ಶಾಲೆಗಳ ಪ್ರಾಂಶುಪಾಲರು ಮತ್ತು ಆಡಳಿತ ಸಿಬ್ಬಂದಿಗೆ ಇ-ಮೇಲ್ ಕಳುಹಿಸಿರುವ ಗುಂಪು, ಶಾಲೆಯ ಸಿಸಿಟಿವಿ ಕ್ಯಾಮರಾ, ವಿದ್ಯಾರ್ಥಿಗಳ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿ ತಮ್ಮ ಬಳಿ ಇದ್ದು, ಶಾಲೆಯ ಆವರಣದಲ್ಲಿ 48 ಗಂಟೆಗಳ ಒಳಗೆ ಬಾಂಬ್ ಸ್ಫೋಟಿಸುವುದಾಗಿ ತಿಳಿಸಿದ್ದರು.
ನಮ್ಮದು ಟೆರರೈಸರ್ಸ್ 111 ಗುಂಪು. ನಿಮ್ಮ ಕಟ್ಟಡದ ಒಳಗೆ ಮತ್ತು ನಗರದ ಇತರೆಡೆ ಬಾಂಬ್ ಇಟ್ಟಿದ್ದೇವೆ. ಹೆಚ್ಚಿನ ಸಾಮರ್ಥ್ಯದ ಅ4 ಬಾಂಬ್‌ಗಳು ಸೇರಿದಂತೆ ಸ್ಫೋಟಕ ಸಾಧನಗಳನ್ನು ತರಗತಿ, ಸಭಾಂಗಣ, ಸಿಬ್ಬಂದಿ ಕೊಠಡಿ ಮತ್ತು ಶಾಲಾ ಬಸ್‌ಗಳಲ್ಲಿ ಇಟ್ಟಿದ್ದೇವೆ. ಅಪಾರ ಸಾವು-ನೋವು ಉಂಟು ಮಾಡುವಂತೆ ಮಾಡಿದ್ದೇವೆ. 48 ಗಂಟೆಗಳ ಒಳಗಾಗಿ 2000 ಅಮೆರಿಕನ್ ಡಾಲರ್ ವರ್ಗಾಯಿಸಿ, ಇಲ್ಲದಿದ್ದರೆ ಬಾಂಬ್ ಸ್ಫೋಟಿಸಲಾಗುವುದು ಎಂದು ಇ-ಮೇಲ್‌ನಲ್ಲಿ ಉಲ್ಲೇಖಿಸಿದ್ದರು.
ರಾಷ್ಟ್ರ ರಾಜಧಾನಿಯ ಹಲವಾರು ಶಾಲೆಗಳಿಗೆ ಟೆರರೈಸರ್ಸ್ 111 ಎಂದು ಹೇಳಲಾದ ಗುಂಪಿನಿಂದ ಇಮೇಲ್ ಬಂದಿತ್ತು. 72 ಗಂಟೆಗಳ ಒಳಗೆ ಕ್ರಿಪ್ಟೋಕರೆನ್ಸಿಯಲ್ಲಿ 5,000 ಡಾಲರ್ ವರ್ಗಾಯಿಸುವಂತೆ ಬೇಡಿಕೆ ಇಡಲಾಗಿತ್ತು. ಅಷ್ಟು ಹಣವನ್ನು ಕಳುಹಿಸದಿದ್ದಲ್ಲಿ ಶಾಲೆಯ ಆವರಣದಲ್ಲಿ ಬಾಂಬ್‌ಗಳನ್ನು ಸ್ಫೋಟಿಸಲಾಗುವುದು ಅಧಿಕಾರಿಯೊಬ್ಬರು ತಿಳಿಸಿದ್ದರು.ಇದನ್ನೂ ಓದಿ: ಟೀಚರ್ ಮೇಲೆ ಸಿಕ್ಕಾಪಟ್ಟೆ ಲವ್ – ದೂರು ನೀಡಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಹಳೇ ವಿದ್ಯಾರ್ಥಿ